ETV Bharat / city

ಅಪ್ಪ ಇಲ್ಲ, ಅಮ್ಮನಿಗೆ ಅನಾರೋಗ್ಯ: ಶೈಕ್ಷಣಿಕ ವೆಚ್ಚ ಭರಿಸುವಂತೆ ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕ - Belgaum DC MG Hiremath

ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಅವರು ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ವೇಳೆ ಪುಟ್ಟ ಬಾಲಕ ತನ್ನ ಸಮಸ್ಯೆಗಳನ್ನು ಡಿಸಿ ಬಳಿ ಹೇಳಿಕೊಂಡ ಘಟನೆ ನಡೆದಿದೆ.

ಡಿಸಿ ಬಳಿ ಸಮಸ್ಯೆ ಹೇಳಿಕೊಂಡ ಪುಟ್ಟ ಬಾಲಕ
ಡಿಸಿ ಬಳಿ ಸಮಸ್ಯೆ ಹೇಳಿಕೊಂಡ ಪುಟ್ಟ ಬಾಲಕ
author img

By

Published : Feb 20, 2021, 1:14 PM IST

ಬೆಳಗಾವಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ವೇಳೆ ಪ್ರತಿ ಮನೆಗೆ ತೆರಳಿ ಮನವಿ ಆಲಿಸಿದರು. ಈ ವೇಳೆ, ಮೂರನೇ ತರಗತಿಯ ವಿದ್ಯಾರ್ಥಿಯೊಬ್ಬ ಡಿಸಿ ಬಳಿ ತನ್ನ ಸಮಸ್ಯೆಗಳನ್ನು ನಿವಾರಿಸುವಂತೆ ಮನವಿ ಮಾಡಿಕೊಂಡ ದೃಶ್ಯ ಕಂಡು ಬಂದಿತು.

ಡಿಸಿ ಬಳಿ ಸಮಸ್ಯೆ ಹೇಳಿಕೊಂಡ ಪುಟ್ಟ ಬಾಲಕ

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮದಡಿ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಅವರು ಗ್ರಾಮ ವ್ಯಾಸ್ತವ್ಯ ಆರಂಭಿಸಿದ್ದಾರೆ. ಮನೆ ಮನೆಗೆ ತೆರಳಿ ಗ್ರಾಮಸ್ಥರ ಮನವಿ ಸ್ವೀಕರಿಸುವ ವೇಳೆ ಅದೇ ಗ್ರಾಮದ ಕಿರಣ ಬಸವರಾಜ ಕೋಣಿಣ್ಣವರ ಎಂಬ 3ನೇ ತರಗತಿಯ ಬಾಲಕ ನನ್ನ ತಂದೆ ಸಾವನ್ನಪ್ಪಿದ್ದು, ತಾಯಿ ಅನಾರೋಗ್ಯದ ‌ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾವು ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಜೊತೆಗೆ ಶೈಕ್ಷಣಿಕ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಡಿಸಿಗೆ ಕೈಬರಹದ ಮೂಲಕ ಮನವಿ ಪತ್ರ ನೀಡಿದನು.

ಮನವಿ ಪತ್ರದಲ್ಲಿರುವುದೇನು?:

ತಂದೆ ಇಲ್ಲ, ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಕ ಸಂಪಗಾಂವ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಐದನೇ ತರಗಿ ಓದುತ್ತಿದ್ದಾಳೆ. ನಾನು ಸಮೀಪದ ಕಾನ್ವೆಂಟ್​​​​ನಲ್ಲಿ ಓದುತ್ತಿದ್ದೇನೆ. ಆದ್ದರಿಂದ ಶೈಕ್ಷಣಿಕ ವೆಚ್ಚ ಭರಿಸುವುದು ಕಷ್ಟವಾಗಿದೆ. ಮನೆಯ ವಿದ್ಯುತ್ ಬಿಲ್ ಕಟ್ಟುವಷ್ಟು ಸಹ ಹಣ ನಮ್ಮ ಬಳಿಯಿಲ್ಲ. ಹಾಗಾಗಿ ನನ್ನ ಶೈಕ್ಷಣಿಕ ವೆಚ್ಚದ ಜೊತೆಗೆ ಆಶ್ರಯ ಮನೆ ನಿರ್ಮಿಸಿಕೊಡುವಂತೆ ಪುಟ್ಟ ಬಾಲಕ ಜಿಲ್ಲಾಧಿಕಾರಿಗಳಿಗೆ ತಿಳಿಸಿದನು.

ನಂತರ ವಿದ್ಯಾರ್ಥಿಯ ಅಜ್ಜ ಸೋಮನಗೌಡ ದೊಡ್ಡವೀರಪ್ಪನವರ ಮಾತನಾಡಿ, ಸದ್ಯಕ್ಕೆ ನಮ್ಮ ಮೊಮ್ಮಗ ಹಾಗೂ ಆತನ ತಾಯಿ ಬಾಡಿಗೆ ಮನೆಯಲ್ಲಿದ್ದಾರೆ. ಮನೆಯ ಖರ್ಚು ನಿಭಾಯಿಸಲು ಕಷ್ಟವಾಗುತ್ತಿದೆ. ಹೀಗಾಗಿ ಸೂಕ್ತ ಪರಿಹಾರ ನೀಡಬೇಕೆಂದು ಡಿಸಿಯವರಿಗೆ ನಮಸ್ಕಾರ ಮಾಡುವ ಮೂಲಕ ತಮ್ಮ ಅಳಲು ತೋಡಿಕೊಂಡರು.

ಈ ವೇಳೆ ಬಾಲಕನ ಮನವಿ ಸ್ವೀಕರಿಸಿ, ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.