ನವದೆಹಲಿ: ಆನ್ಲೈನ್ ಫುಡ್ ಡೆಲಿವರಿ ಫ್ಲಾಟ್ಫಾರ್ಮ್ ಜೊಮ್ಯೊಟೊ ಸಹ ಸಂಸ್ಥಾಪಕ ಮತ್ತು ಸಿಟಿಒ ಗುಂಜನ್ ಪಾಟೀದಾರ್ 10 ವರ್ಷಗಳ ಬಳಿಕ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಕಂಪನಿ ತಿಳಿಸಿದೆ. ಕಳೆದ ನವೆಂಬರ್ನಲ್ಲಿ ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ ಬಳಿಕ ಇದೀಗ ಗುಂಜನ್ ಪಾಟೀದಾರ್ ಸಂಸ್ಥೆಯಿಂದ ಹೊರ ಬಂದಿದ್ದಾರೆ. ಹೀಗಾಗಿ, ಸಂಸ್ಥೆ ಬಿಟ್ಟುಬಂದ ಎರಡನೇ ಹೈ ಪ್ರೊಫೈಲ್ ಸಿಬ್ಬಂದಿ ಇವರಾಗಿದ್ದಾರೆ.
ಕಂಪನಿಯ ಕೋರ್ ಟೆಕ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಮೊದಲ ಕೆಲವು ಉದ್ಯೋಗಿಗಳಲ್ಲಿ ಪಾಟೀದಾರ್ ಒಬ್ಬರು. ಕಳೆದ 10 ವರ್ಷಗಳಲ್ಲಿ, ತಂತ್ರಜ್ಞಾನದ ಅಭಿವೃದ್ಧಿ ಕಾರ್ಯವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಟೆಕ್ ನಾಯಕತ್ವದ ತಂಡವನ್ನು ಸಹ ಇವರು ಘೋಷಿಸಿದ್ದರು. ಜೊಮ್ಯೊಟೊ ನಿರ್ಮಾಣಕ್ಕೆ ಅವರ ಕೊಡುಗೆ ಅಮೂಲ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕ್ರಾಸ್ ಕಟಿಂಗ್ ಅಡಿ ಜೊಮ್ಯೊಟೊ ಕಳೆದ ನವೆಂಬರ್ನಲ್ಲಿ ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಇದನ್ನೂ ಓದಿ: ಶೌಚಾಲಯದಲ್ಲಿ ಸಿಕ್ಕ ಚಿನ್ನವನ್ನ ಅಧಿಕಾರಿಗಳಿಗೆ ಹಸ್ತಾಂತರಿಸಿದ ಕೆಲಸಗಾರ