ETV Bharat / business

World Economy: ಅಮೆರಿಕ, ಜಪಾನ್‌, ಜರ್ಮನಿ ಹಿಂದಿಕ್ಕಿ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ; ಯಾವಾಗ ಗೊತ್ತಾ? - World Economy India

2075ರ ವೇಳೆಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಗೋಲ್ಡ್​ಮನ್ ಸ್ಯಾಚ್ಸ್‌​ ವರದಿ ತಿಳಿಸಿದೆ.

india could become worlds 2nd largest economy

author img

By

Published : Jul 11, 2023, 12:27 PM IST

ಬೆಂಗಳೂರು : ಜಪಾನ್, ಜರ್ಮನಿಗಳು ಮಾತ್ರವಲ್ಲದೆ ಅಮೆರಿಕವನ್ನೂ ಹಿಂದಿಕ್ಕಿ ಭಾರತವು 2075ರ ವೇಳೆಗೆ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್​ನ ಇತ್ತೀಚಿನ ವರದಿ ಹೇಳಿದೆ. ಪ್ರಸ್ತುತ, ಭಾರತವು ಜರ್ಮನಿ, ಜಪಾನ್, ಚೀನಾ ಮತ್ತು ಯುಎಸ್ ನಂತರ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನ, ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಹೆಚ್ಚುತ್ತಿರುವ ಕಾರ್ಮಿಕರ ಉತ್ಪಾದಕತೆಯು ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡಲಿದೆ ಎಂದು ಗೋಲ್ಡ್​ಮನ್ ಸ್ಯಾಚ್ಸ್​ ತಿಳಿಸಿದೆ.

"ಮುಂದಿನ ಎರಡು ದಶಕಗಳಲ್ಲಿ, ಪ್ರಾದೇಶಿಕ ಆರ್ಥಿಕತೆಗಳಲ್ಲಿ ಭಾರತದ ಅವಲಂಬನೆ ಅನುಪಾತವು ಅತ್ಯಂತ ಕಡಿಮೆ ಇರುತ್ತದೆ" ಎಂದು ಗೋಲ್ಡ್‌ಮನ್ ಸ್ಯಾಚ್ಸ್​ ರಿಸರ್ಚ್​ನ ಭಾರತದ ಅರ್ಥಶಾಸ್ತ್ರಜ್ಞ ಸಂತನು ಸೇನಗುಪ್ತಾ ಹೇಳಿದ್ದಾರೆ. ಅವಲಂಬನೆ ಅನುಪಾತವನ್ನು ಒಟ್ಟು ದುಡಿಯುವ ವಯಸ್ಸಿನ ಜನಸಂಖ್ಯೆಯ ವಿರುದ್ಧ ಅವಲಂಬಿತರ ಸಂಖ್ಯೆಯಿಂದ ಅಳೆಯಲಾಗುತ್ತದೆ.

ಕಾರ್ಮಿಕ ಬಲವನ್ನು ದುಡಿಮೆಯಲ್ಲಿ ತೊಡಗಿಸುವುದೇ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಶಕ್ತಿಯನ್ನು ಬಳಸಿಕೊಳ್ಳುವ ಕೀಲಿ ಕೈ ಆಗಿದೆ ಸಂತನು ಹೇಳಿದರು. ಮುಂದಿನ 20 ವರ್ಷಗಳಲ್ಲಿ ದೊಡ್ಡ ಆರ್ಥಿಕತೆಗಳಲ್ಲಿ ಭಾರತವು ಕಡಿಮೆ ಅವಲಂಬನೆ ಅನುಪಾತವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಉತ್ಪಾದನೆ ಮತ್ತು ಸೇವೆಗಳಲ್ಲಿ ಸಾಮರ್ಥ್ಯವನ್ನು ಸೃಷ್ಟಿಸಲು ಖಾಸಗಿ ವಲಯಕ್ಕೆ ಇದು ಸೂಕ್ತ ಸಮಯ. ಇದರಿಂದ ದೇಶದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯವಾಗಲಿದೆ ಮತ್ತು ದೊಡ್ಡ ಪ್ರಮಾಣದ ಕಾರ್ಮಿಕ ಬಲವನ್ನು ತೊಡಗಿಸಿಕೊಳ್ಳಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್​ ವರದಿಯಲ್ಲಿ ತಿಳಿಸಿದೆ.

ಬಂಡವಾಳ ಹೂಡಿಕೆಯು ಭಾರತದ ಬೆಳವಣಿಗೆಯ ಮತ್ತೊಂದು ಪ್ರಮುಖ ಚಾಲಕವಾಗಿರಲಿದೆ. ಅವಲಂಬನೆ ಅನುಪಾತದ ಇಳಿಕೆ, ಹೆಚ್ಚುತ್ತಿರುವ ಆದಾಯಗಳು ಮತ್ತು ಆಳವಾದ ಹಣಕಾಸು ವಲಯದ ಅಭಿವೃದ್ಧಿಯೊಂದಿಗೆ ಭಾರತದ ಉಳಿತಾಯ ದರವು ಹೆಚ್ಚಾಗುವ ಸಾಧ್ಯತೆಯಿದೆ. ಇದು ಹೂಡಿಕೆಯನ್ನು ಹೆಚ್ಚಿಸಲು ಬಂಡವಾಳ ಲಭ್ಯವಾಗುವಂತೆ ಮಾಡುವ ಸಾಧ್ಯತೆಯಿದೆ ಎಂದು ಗೋಲ್ಡಮನ್ ವರದಿ ಹೇಳಿದೆ.

ಕಳೆದ 15 ವರ್ಷಗಳಲ್ಲಿ ಭಾರತದಲ್ಲಿ ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣ ಕುಸಿದಿದೆ. ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವು ಪುರುಷರಿಗಿಂತ ಗಮನಾರ್ಹವಾಗಿ ಕಡಿಮೆ ಎಂದು ಅದು ಹೇಳಿದೆ. ಭಾರತದ ಎಲ್ಲಾ ದುಡಿಯುವ ವಯಸ್ಸಿನ ಮಹಿಳೆಯರಲ್ಲಿ ಕೇವಲ ಶೇ 20 ರಷ್ಟು ಮಹಿಳೆಯರು ಮಾತ್ರ ಉದ್ಯೋಗದಲ್ಲಿದ್ದಾರೆ. ಆರ್ಥಿಕತೆಯ ಅಂಕಿ ಅಂಶಗಳಲ್ಲಿ ನೇರವಾಗಿ ಪರಿಗಣಿಸದ ವಲಯಗಳಲ್ಲಿ ಹೆಚ್ಚಿನ ಮಹಿಳೆಯರು ಕೆಲಸ ಮಾಡುತ್ತಿರುವುದರಿಂದ ಕೂಡ ದುಡಿಯುವ ಮಹಿಳೆಯರ ಸಂಖ್ಯೆ ಕಡಿಮೆಯಾಗಿ ಕಾಣಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇದೊಂದು ಪ್ರಮುಖ ಜಾಗತಿಕ ಹೂಡಿಕೆ ಬ್ಯಾಂಕಿಂಗ್, ಸೆಕ್ಯುರಿಟೀಸ್ ಮತ್ತು ಹೂಡಿಕೆ ನಿರ್ವಹಣಾ ಸಂಸ್ಥೆಯಾಗಿದೆ. ಇದು ನಿಗಮಗಳು, ಹಣಕಾಸು ಸಂಸ್ಥೆಗಳು, ಸರ್ಕಾರಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಿರುವ ಗಣನೀಯ ಮತ್ತು ವೈವಿಧ್ಯಮಯ ಕ್ಲೈಂಟ್ ಬೇಸ್‌ಗೆ ವ್ಯಾಪಕ ಶ್ರೇಣಿಯ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಇದನ್ನೂ ಓದಿ : ರೂಪಾಯಿಯ ಅಂತಾರಾಷ್ಟ್ರೀಕರಣ; ಡಾಲರ್​ಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ ದೇಸಿ ಕರೆನ್ಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.