ಹಣಕಾಸಿನ ವಲಯದಲ್ಲಿ ಆಸಕ್ತಿ ಇರುವವರಿಗೆ ಸ್ಟಾಕ್ ಮಾರ್ಕೆಟ್ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ. ಇಲ್ಲಿ ಹೂಡಿಕೆ, ಲಾಭ ಮತ್ತು ನಷ್ಟದ ಹೊರತಾಗಿಯು ಅನೇಕ ಪರೋಕ್ಷ ಮತ್ತು ಪ್ರತ್ಯಕ್ಷ ಉದ್ಯೋಗಾವಕಾಶಗಳಿವೆ. ಹಣಕಾಸು, ವಾಣಿಜ್ಯ, ಅಕೌಂಟಿಂಗ್ ಹೀಗೆ ಹಲವು ಅವಕಾಶಗಳಿದ್ದು, ವೃತ್ತಿಯನ್ನು ಕಟ್ಟಿಕೊಳ್ಳಬಹುದು.
ಸ್ಟಾಕ್ ಮಾರ್ಕೆಟ್ನಲ್ಲಿ ಉದ್ಯೋಗ ಎಂದಾಕ್ಷಣ ಬಹುತೇಕರು ಸ್ಟಾಕ್ಬ್ರೋಕರ್ಸ್ ಬಗ್ಗೆ ಯೋಚಿಸುತ್ತಾರೆ. ಆದರೆ, ಇದರ ಹೊರತಾಗಿ ಅನೇಕ ಅವಕಾಶಗಳಿದೆ. ಡಾಟಾ ಅನಾಲಿಟಿಕ್ಸ್, ಕನ್ಸಲ್ಟನ್ಸಿ, ರಿಸರ್ಚ್ ಮತ್ತು ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸೇವೆಯಂತಹ ಹಲವು ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ. ಇದಕ್ಕೆ ಸರಿಯಾದ ತರಬೇತಿ ಮತ್ತು ಕೌಶಲ್ಯ ಅಗತ್ಯ. ಅಂತಹ ಪ್ರವೇಶ ಹಂತದ ಉದ್ಯೋಗದ ಕುರಿತ ಮಾಹಿತಿ ಇಲ್ಲಿದೆ.
ಮಾರ್ಕೆಟ್ ರಿಸರ್ಚ್ ಅನಾಲಿಸ್ಟ್: ಇವರು ತಮ್ಮ ಕ್ಲೈಂಟ್ ಅಥವಾ ಸಂಸ್ಥೆಗೆ ಕೆಲಸ ಮಾಡುತ್ತಾರೆ. ಮಾರ್ಕೆಟ್ ರಿಸರ್ಚ್ ಅನಾಲಿಸ್ಟ್ಸ್ಗಳ ಸೇವೆಯನ್ನು ಸಂಸ್ಥೆಗಳು ಚೆನ್ನಾಗಿ ಬಳಕೆ ಮಾಡಿ ತಮ್ಮ ಪ್ರತಿ ಸ್ಪರ್ಧಿ ಗ್ರಾಹಕರ ಕುರಿತು ಮಾಹಿತಿ ಪಡೆಯಬಹುದು. ಇವರ ಪ್ರಮುಖ ಕೆಲಸ ಎಂದರೆ ಅಂಕಿ- ಅಂಶಗಳ ತಂತ್ರ ಮತ್ತು ಸಾಫ್ಟ್ವೇರ್ ಮೂಲಕ ಮಾಹಿತಿಗಳನ್ನು ವಿಶ್ಲೇಷಣೆ ಮಾಡಿ ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳಿಗೆ ಪ್ರಯೋಜನಕಾರಿ ಸಲಹೆ ನೀಡುತ್ತದೆ. ಇವರು ಸ್ಟಾಕ್ ಕೊಳ್ಳುವಿಕೆ ಮತ್ತು ಮಾರುವಿಕೆಯಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ.
ಐಪಿಒ ಮತ್ತು ಉದ್ಯಮ ವಿಸ್ತರಣೆಯಂತಹ ಸಂದರ್ಭದಲ್ಲಿ ವಾಣಿಜ್ಯ ಸಂಘಟನೆಗಳಿಗೆ ಸಹಾಯ ಮಾಡುತ್ತಾರೆ. ಹೂಡಿಕೆ ಪೋರ್ಟ್ಫೋಲಿಯೋಗಳನ್ನು ತಮ್ಮ ಸಂಶೋಧನೆ ಮೂಲಕ ತರಯಾರಿಸುವ ಮೂಲಕ ಸಹಾಯ ಮಾಡುತ್ತಾರೆ
ಡೀಲರ್: ಕಂಪನಿಯ ಬ್ಯುಸಿನೆಸ್ ಭಾಗವಾಗಿ ಇವರು ಸ್ಟಾಕ್ ಎಕ್ಸ್ಚೆಂಜ್ನಲ್ಲಿ ಕೊಳ್ಳುವಿಕೆ, ಮಾರುವಿಕೆ ಮತ್ತು ಷೇರುಗಳನ್ನು ಹಿಡಿದಿಡುವ ಕೆಲಸ ಮಾಡುತ್ತಾರೆ. ಹೆಚ್ಚಿನ ಶೇರ್ಗಳನ್ನು ಖರೀದಿಸುವ ಮೂಲಕ ಅವರು ಬೇಡಿಕೆಯನ್ನು ಹೆಚ್ಚಿಸಿ, ಹೆಚ್ಚಿನ ಬೇಡಿಕೆಗೆ ಶೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯ ಲಾಭಕ್ಕೆ ಮುಂದಾಗುತ್ತಾರೆ. ಟ್ರೇಡರ್ ರೀತಿಯಲ್ಲೇ ಇವರು ಕೆಲಸ ಮಾಡುತ್ತಾರೆ. ಆದರೆ, ಡೀಲರ್ಗಳು ದೊಡ್ಡ ಗಾತ್ರದ ಸಂಘಟನೆಯಲ್ಲಿ ಕೆಲಸ ಮಾಡುತ್ತಾರೆ.
ರಿಸ್ಕ್ ಅನಾಲಿಸ್ಟ್: ಉದ್ಯಮದ ನಿರ್ಧಾರ ಕೈಗೊಳ್ಳುವಲ್ಲಿ ಅಪಾಯವನ್ನು ವಿಶ್ಲೇಷಿಸುವುದು ಅಗತ್ಯ. ಉದ್ಯಮಗಳು ಸಂಘಟನೆಗೆ ಈ ಕೆಲಸವನ್ನು ಮಾಡಿ ನಿರ್ಧಾರ ಕೈಗೊಳ್ಳುವಿಕೆಗೆ ಅವರು ಕೆಲಸ ಮಾಡುತ್ತಾರೆ. ಸಂಸ್ಥೆ ಪರವಾಗಿ ಮಾರ್ಕೆಟ್ ಟ್ರೆಂಡ್ ನೋಡಿಕೊಂಡು ಕ್ಲೇಂಟ್ ಬಗ್ಗೆ ತಿಳಿಯಲು ಮತ್ತು ಬ್ಯುಸಿನೆಸ್ನಲ್ಲಿ ಅಪಾಯದ ಅಂಶವನ್ನು ವಿಶ್ಲೇಷಣೆ ಮಾಡಿ ನಿರ್ಧಾರ ನಡೆಸಲು ಸಹಾಯ ಮಾಡುತ್ತದೆ.
ಫೈನಾನ್ಸಿಯಲ್ ಅನಾಲಿಸ್ಟ್: ಬ್ಯಾಂಕ್, ಪಿಂಚಣಿ ನಿದಿ, ವಿಮಾ ಕಂಪನಿ ಮತ್ತು ಇತರ ಬ್ಯುಸಿನೆಸ್ ಸಂಘಟನೆಯಲ್ಲಿ ಕೆಲಸ ಮಾಡುತ್ತಾರೆ. ಸ್ಟಾಕ್, ಬಾಂಡ್ ಮತ್ತು ಇತರ ಹೂಡಿಕೆಯ ಪ್ರದರ್ಶನದ ಮೌಲ್ಯಮಾಪನ ಮಾಡುತ್ತಾರೆ. ಹಣಕಾಸಿನ ಮಾಹಿತಿ ಸಂಗ್ರಹಿಸಿ, ಅದನ್ನು ವಿಶ್ಲೇಷಿಸಿ, ತಮ್ಮ ಹಣಕಾಸಿನ ಮಾದರಿಗೆ ಸಿದ್ದರಾಗುತ್ತಾರೆ. ಕಂಪನಿಗಳು ಯಾವುದೇ ಹಣಕಾಸಿನ ನಿರ್ಧಾರ ನಡೆಸುವಾಗ ಇವರು ಸಹಾಯ ಮಾಡುತ್ತಾರೆ. ಇವರು ಸ್ವತಂತ್ರ ಮತ್ತು ಸಂಸ್ಥೆಗೆ ಕೆಲಸ ಮಾಡುತ್ತಾರೆ.
ಫಂಡಮೆಂಟಲ್ ಅನಾಲಿಸ್ಟ್: ಸ್ಟಾಕ್ ಸಂಬಂಧಿಸಿದ ಯಾವುದೇ ಸಂಶೋಧನೆಗೆ ಫಂಡಮೆಂಟಲ್ ಅನಾಲಿಸ್ಟ್ ಸಹಾಯ ಮಾಡುತ್ತಾರೆ. ಇವರು ಯಾವುದೇ ಸಣ್ಣ ಅಂಶವು ಹಾನಿಯಾಗದಂತೆ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತಾರೆ. ಸ್ಟಾಕ್, ರಿಸ್ಕ್, ಫೈನಾನ್ಷಿಯಲ್ ಪರಿಸ್ಥಿತಿ, ಬೆಳವಣಿಗೆ ಅವಕಾಶ, ಹೂಡಿಕೆ, ಈಕ್ವಿಟಿ ರಿಟರ್ನ್, ಲಾಭದ ಮಾರ್ಜಿನ್ ಮುಂತಾದವುಗಳನ್ನು ಪರಿಶೀಲಿಸುತ್ತಾರೆ.
ಈಕ್ವಿಟಿ ಅನಾಲಿಸ್ಟ್: ಇವರು ಸಂಸ್ಥೆ ಅಥವಾ ಸ್ಟಾಕ್ನ ಭವಿಷ್ಯದ ಪ್ರದರ್ಶನ ಹೇಗಿರಲಿದೆ ಎಂದು ಅಂದಾಜಿಸುತ್ತಾರೆ. ಅವರು ತಮ್ಮ ಜ್ಞಾನ ಮತ್ತು ತಜ್ಞರ ಮಾರ್ಗದರ್ಶನ ಪಡೆದು ಹೂಡಿಕೆ ನಿರ್ಧಾರ ಮಾಡುತ್ತಾರೆ. ಕಂಪನಿಗಳು ಅಥವಾ ಕ್ಲೈಂಟ್ಗಳು ಹೇಗೆ ಸ್ಟಾಕ್ ಕೆಲಸ ಮಾಡಲಿದೆ ಎಂದು ಗಮನಿಸುತ್ತಾರೆ. ಇದಕ್ಕೆ ಸಂಶೋಧನೆ ಕೌಶಲ್ಯ ಬೇಕು. ವಿಶ್ಲೇಷಣೆ ಕೌಶ್ಯಲ್ಯವನ್ನು ಹಣಕಾಸಿನ ಮತ್ತು ಕಾನೂನಿನ ದೃಷ್ಟಿಯಲ್ಲಿ ಅರ್ಥೈಸಿಕೊಳ್ಳಬೇಕಿದೆ. ಇದಕ್ಕೆ ಬ್ಯುಸಿನೆಸ್ನ ಸಾಮಾನ್ಯ ಜ್ಞಾನವು ಬೇಕಾಗುತ್ತದೆ.
ಟೆಕ್ನಿಕಲ್ ಅನಾಲಿಸ್ಟ್: ಮಾರುಕಟ್ಟೆಯ ತಾಂತ್ರಿಕ ಅಂಶಗಳನ್ನು ತಿಳಿಸುವುದು ಇವರ ಕೆಲಸ. ಡಾಟಾ ಮತ್ತು ತಂತ್ರಜ್ಞಾನದ ಸೂಚಕಗಳನ್ನು ಇವರು ಹೂಡಿಕೆಯ ನಿರ್ಧಾರದಲ್ಲಿ ಮಾಡುತ್ತಾರೆ. ಅಸಿಸ್ಟೆಂಟ್ ಕ್ಲೈಂಟ್ಗಳು ಏರಿಳಿತದ ದರವನ್ನು ಅಂದಾಜಿಸುತ್ತಾರೆ. ಇದಕ್ಕೆ ಅನೇಕ ಸಾಧನಗಳು ಮತ್ತು ಸೂಚಕಗಳು ಇವೆ.
ಕೋರ್ಸ್ಗಳು: ಎನ್ಎಸ್ಇ (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್)- ಈ ಸಂಬಂಧದ ಕೋರ್ಸ್ಗಳನ್ನು ಎನ್ಸಿಎಫ್ಎಂ ಎಂದು ಕರೆಯಲಾಗುವುದು. ಎಸ್ಇಬಿಐ (ಸೆಕ್ಯೂರಿಟಿ ಅಂಡ್ ಎಕ್ಸ್ಚೆಂಜ್ ಬೋರ್ಡ್ ಆಫ್ ಇಂಡಿಯಾ) ಇದಕ್ಕೆ ಸಂಬಂಧಿಸಿದ ಕೋರ್ಸ್ ಅನ್ನು ಎನ್ಐಎಸ್ಎಂ ಎಂದು ಕರೆಯಲಾಗುವುದು.
ಪದವಿ ಬಳಿಕ ಇವುಗಳನ್ನು ಅಯ್ಕೆ ಮಾಡಬಹುದಾಗಿದೆ. ಪ್ರಮಾಣ ಪತ್ರಕ್ಕಾಗಿ ಪರೀಕ್ಷೆ ಬರೆಯಬೇಕಿದ್ದು, ಇದರಿಂದ ಕೆಲಸಕ್ಕೆ ತಯಾರಿ ನಡೆಸಬಹುದು. ಈ ಎಲ್ಲ ಕೋರ್ಟ್ಗಳ ಕುರಿತು ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಇದೆ. ಈ ಪ್ರಮಾಣ ಪತ್ರಗಳು 3 ವರ್ಷದ ಮಾನ್ಯತೆ ಹೊಂದಿದ್ದು, ಈ ಸಮಯದ ಬಳಿಕ ಮತ್ತೆ ಪರೀಕ್ಷೆ ತೆಗೆದುಕೊಳ್ಳುವಂತಿಲ್ಲ.
ಮೇಲೆ ತಿಳಿಸಿದ ಎಲ್ಲಾ ಕೋರ್ಸ್ಗಳು ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ. ನಿಮ್ಮ ಆಯ್ಕೆಗೆ ಅನುಗುಣವಾಗಿ ಆರಿಸಿಕೊಂಡು ಪರೀಕ್ಷೆ ಎದುರಿಸಬಹುದಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿದೆ ಉದ್ಯೋಗ: ವಾಕ್ ಇನ್ ಇಂಟರ್ವ್ಯೂಗೆ ತಯಾರಾಗಿ