ETV Bharat / business

ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರಯಲ್ ರನ್ ಯಶಸ್ವಿ: ಮೈಸೂರಿಗೆ ಬಂದ ರೈಲು - Chennai news update

ಚೆನ್ನೈ- ಬೆಂಗಳೂರು- ಮೈಸೂರು ವಂದೇಭಾರತ್ ಎಕ್ಸ್ ಪ್ರೆಸ್ ಸೋಮವಾರ ಮಧ್ಯಾಹ್ನ 12.13ಕ್ಕೆ ಮೈಸೂರಿಗೆ ಆಗಮಿಸಿತು. ರೈಲಿನ ಟ್ರಯಲ್​ ಟೆಸ್ಟಿಂಗ್ ಯಶಸ್ವಿಯಾಗಿದ್ದು, ಇದರ ವಿಶೇಷತೆ ಕುರಿತ ವಿಡಿಯೋ ಇಲ್ಲಿದೆ.

Vande Bharat Express trial run successful
ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರಯಲ್ ರನ್ ಯಶಸ್ವಿ
author img

By

Published : Nov 7, 2022, 1:48 PM IST

ಮೈಸೂರು: ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ಟ್ರಯಲ್ ರೈಲು ಸೋಮವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಇದಾಗಿದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ಹೈ-ಸ್ಪೀಡ್ ರೈಲು ಬೆಳಗ್ಗೆ 6 ಗಂಟೆಗೆ ಚೆನ್ನೈನಿಂದ ಹೊರಟಿತ್ತು. ಇದು ಸುಮಾರು 504 ಕಿಮೀ ದೂರವನ್ನು 6 ಗಂಟೆ12 ನಿಮಿಷಕ್ಕೆ ಸುಸೂತ್ರವಾಗಿ ತಲುಪಿದೆ. ಈ ರೈಲನ್ನು ನ.11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರಯಲ್ ರನ್ ಯಶಸ್ವಿ

ವಂದೇ ಭಾರತ್ ರೈಲಿನ ವಿಶೇಷತೆಗಳು:

  • ವಂದೇ ಭಾರತ್ ಹೈ-ಸ್ಪೀಡ್ ರೈಲು ಸಂಪೂರ್ಣ ಹವಾ ನಿಯಂತ್ರಿತವಾಗಿದೆ.
  • ಗಟ್ಟಿ ಮುಟ್ಟಾದ ವಿಶೇಷವಾಗಿ ಡಿಸೈನ್ ಮಾಡಿದ ಭೋಗಿಗಳನ್ನು ಹೊಂದಿದೆ.
  • ಒಳಗಡೆ ಪ್ರತಿ ಬೋಗಿಗೂ ಸ್ವಯಂ ಚಾಲಿತ ಬಾಗಿಲು ಇದೆ.
  • ಪ್ರತಿ ಬೋಗಿಗೂ ಸಿಸಿಟಿವಿ ಅಳವಡಿಕೆ.
  • ಐಷಾರಾಮಿ ಆಸನ ವ್ಯವಸ್ಥೆಯಿದ್ದು, ಕೊನೆಯ 2 ಬೋಗಿಗಳಲ್ಲಿ ಇರುವ ಆಸನಗಳು ವಿಶೇಷವಾಗಿ ಸಿದ್ಧಪಡಿಸಿದ 360 ಕೋನದಲ್ಲಿ ತಿರುಗಲಿವೆ.

ಈ ರೈಲಿನ ಟೆಸ್ಟಿಂಗ್ ಯಶಸ್ವಿಯಾಗಿದ್ದು, ಯಾವುದೇ ತಾಂತ್ರಿಕ ತೊಂದರೆಗಳಿಲ್ಲ ಎಂದು ಟೆಕ್ನಿಕಲ್ ವಿಭಾಗದ ಮುಖ್ಯಸ್ಥ ಅಖಿಲ ರಂಜನ್ ವಿವರಿಸಿದ್ದಾರೆ. ವಂದೇ ಭಾರತ್ ರೈಲನ್ನು ದೇಶಿಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಚೆನ್ನೈ- ಮೈಸೂರು ಮಾರ್ಗದಲ್ಲಿ ಓಡುವ ಐದನೇ ವಂದೇ ಭಾರತ್ ರೈಲು ಇದಾಗಿದೆ.

ಇದನ್ನೂ ಓದಿ: ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರಯಲ್ ರನ್: 6.5 ಗಂಟೆಯಲ್ಲಿ 504 ಕಿ.ಮೀ ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.