ವಾಷಿಂಗ್ಟನ್ ( ಅಮೆರಿಕ): ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸತತ 10 ಬಾರಿ ರೆಪೋ ದರ ಏರಿಕೆ ಮಾಡಿದ್ದ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಈ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ಮುಂದಿನ ತಿಂಗಳಿನಿಂದ ವರ್ಷಾಂತ್ಯದಲ್ಲಿ ಇನ್ನೂ 2 ಬಾರಿ ದರ ಏರಿಕೆ ಮಾಡುವ ಸೂಚನೆ ನೀಡಿದೆ.
ಸದ್ಯಕ್ಕೆ ದೇಶದಲ್ಲಿ ರೆಪೋ ದರ ಶೇ.5.1 ರಷ್ಟು ಇದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಪ್ರಮಾಣ ಕಳೆದ 16 ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ. ಸಾಲದ ಮೇಲಿನ ಹೆಚ್ಚಿನ ದರಗಳು ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ ಉನ್ನತಾಧಿಕಾರಿಗಳು ದರ ಹೆಚ್ಚಳವು ಹಣದುಬ್ಬರ ಮತ್ತು ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದು ತಿಳಿಯಲು ಇನ್ನಷ್ಟು ಸಮಯ ಬೇಕಿದೆ ಎಂದು ಹೇಳಿದ್ದಾರೆ.
ಜೂನ್ 14 ರಂದು ಬಿಡುಗಡೆಯಾದ ಆರ್ಥಿಕ ಮುನ್ಸೂಚನೆಗಳ ಪ್ರಕಾರ, ಸೆಂಟ್ರಲ್ ಬ್ಯಾಂಕಿನ 18 ನೀತಿ ನಿರೂಪಕರು ರೆಪೋ ದರವನ್ನು ಈ ವರ್ಷ ಸುಮಾರು 5.6 ಪ್ರತಿಶತಕ್ಕೆ ಏರಿಸಲು ಯೋಜಿಸಿದ್ದಾರೆ. 18 ನೀತಿ ನಿರೂಪಕರಲ್ಲಿ 12 ಮಂದಿ ಕನಿಷ್ಠ ಎರಡು ಕ್ವಾರ್ಟರ್ ಪಾಯಿಂಟ್ ದರ ಹೆಚ್ಚಳಕ್ಕೆ ಸೂಚಿಸಿದ್ದಾರೆ. ನಾಲ್ವರು ಒಂದು ಕ್ವಾರ್ಟರ್ ಪಾಯಿಂಟ್ ಹೆಚ್ಚಳ ಬೆಂಬಲಿಸಿದರು. ಕೇವಲ ಇಬ್ಬರು ಮಾತ್ರ ದರ ಬದಲಾವಣೆಗೆ ವಿರೋಧಿಸಿದರು. ಮೂರು ತಿಂಗಳ ಹಿಂದೆ ಹೆಚ್ಚಳ ಮಾಡಲಾಗಿದ್ದ ದರ ಏರಿಕೆ ಹೆಚ್ಚಿನ ಅವಧಿಗೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಿದ್ದಾರೆ.
ಹಣದುಬ್ಬರ ಶೇ.2 ಕ್ಕೆ ನಿಯಂತ್ರಣ: ಹಣದುಬ್ಬರ ಹೆಚ್ಚಾದಂತೆ ಅದು ಜನಜೀವನದ ಮೇಲೆ ತೀವ್ರ ಪತಿಣಾಮ ಉಂಟು ಮಾಡುತ್ತದೆ ಎಂಬುದನ್ನು ಬಲ್ಲೆವು. ಹೀಗಾಗಿ ಹಣದುಬ್ಬರವನ್ನು ಶೇಕಡಾ 2 ರಷ್ಟು ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಹಣದುಬ್ಬರವನ್ನು ತಗ್ಗಿಸುವ ಪ್ರಕ್ರಿಯೆಯು ಕ್ರಮೇಣವಾಗಿ ತರಲಾಗುವುದು. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಫೆಡರಲ್ ಬ್ಯಾಂಕ್ ಮುಖ್ಯಸ್ಥ ಜೆರೋಮ್ ಪೊವೆಲ್ ತಿಳಿಸಿದರು.
ಸದ್ಯಕ್ಕೆ ಯಾವುದೇ ದರ ಬದಲಾವಣೆಗೆ ನೀತಿ ನಿರೂಪಕರು ಒಪ್ಪಿಗೆ ನೀಡಿಲ್ಲವಾದರೂ ಮುಂದಿನ ದಿನಗಳಲ್ಲಿ ಹಣದುಬ್ಬರದ ಪರಿಣಾಮ ಉಂಟಾಗದಿರಲು ನೀತಿ ನಿರೂಪಕರು ಮುಂದಿನ ಜುಲೈನಲ್ಲಿ ದರ ಹೆಚ್ಚಳವನ್ನು ಮಾಡಲು ಸಲಹೆ ನೀಡಿದ್ದಾರೆ. ಹೆಚ್ಚುವರಿ ದರ ಏರಿಕೆಗೆ ಕಾರಣ ಎಂದರೆ ಸಾಧಾರಣ ಆರೋಗ್ಯಕರ ಆರ್ಥಿಕತೆ ಮತ್ತು ಹಣದ ಮುಗ್ಗಟ್ಟು ಉಂಟಾಗದಿರಲು ದರ ಏರಿಕೆ ಅನಿವಾರ್ಯ ಎಂಬುದನ್ನು ಅವರು ಕಂಡುಕೊಂಡಿದ್ದಾರೆ ಎಂದು ಜೆರೋಮ್ ಪೊವೆಲ್ ಹೇಳಿದರು.
3.9 ಬೆಳವಣಿಗೆ ದರ ನಿರೀಕ್ಷೆ: ಆರ್ಥಿಕ ತಜ್ಞರು ನೀಡಿದ ಮುನ್ಸೂಚನೆಗಳು ಈ ವರ್ಷ 1 ಪ್ರತಿಶತದಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಾರ್ಚ್‌ನಲ್ಲಿನ ಅಂದಾಜಿಗಿಂತ ಶೇಕಡಾ 0.4 ಕ್ಕಿಂತ ಹೆಚ್ಚಾಗಿದೆ. ಇದು ಆಹಾರ ಮತ್ತು ಇಂಧನ ಬೆಲೆಗಳನ್ನು ಹೊರತುಪಡಿಸಿ, ವರ್ಷಾಂತ್ಯದ ವೇಳೆಗೆ ಶೇಕಡಾ 3.9 ರಷ್ಟು ಬೆಳವಣಿಗೆ ಕಾಣಲಿದೆ. ಮೂರು ತಿಂಗಳ ಹಿಂದಿನ ಅಂದಾಜಿಗಿಂತೂ ಇದು ಹೆಚ್ಚಿನದ್ದಾಗಿದೆ.
ಕೇಂದ್ರ ಬ್ಯಾಂಕ್‌ನ ದರ ಏರಿಕೆಯು ಗ್ರಾಹಕರ ಹಣದುಬ್ಬರದಲ್ಲಿ ಸ್ಥಿರವಾದ ಕುಸಿತದೊಂದಿಗೆ ಹೊಂದಿಕೆಯಾಗಿದೆ. ಕಳೆದ ಜೂನ್‌ನಲ್ಲಿ ಶೇಕಡಾ 9.1 ರ ಗರಿಷ್ಠ ಮಟ್ಟದಿಂದ ಮೇ ವೇಳೆಗೆ ಶೇಕಡಾ 4 ಕ್ಕೆ ತಲುಪಿದೆ. ಆದರೆ ಕೋರ್ ಹಣದುಬ್ಬರವು ದೀರ್ಘಕಾಲಿಕವಾಗಿ ಹೆಚ್ಚಾಗಿರುತ್ತದೆ. 12 ತಿಂಗಳ ಹಿಂದಿನ ಹಣದುಬ್ಬರಕ್ಕೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಹಣದುಬ್ಬರವು ಶೇಕಡಾ 5.3 ರಷ್ಟಿದೆ. ಇದು ಫೆಡರಲ್ ಬ್ಯಾಂಕ್‌ನ ಶೇಕಡಾ 2 ಗುರಿಗಿಂತ ಹೆಚ್ಚಾಗಿದೆ.
ಇದನ್ನೂ ಓದಿ: Global Wind Day 2023: ಇಂದು ವಿಶ್ವ ವಾಯು ದಿನ.. ಈ ದಿವಸದ ಆಚರಣೆಯ ಉದ್ದೇಶ, ಮಹತ್ವವೇನು?