ETV Bharat / business

ಅಲ್ಪ ಕುಸಿತ ಕಂಡ ಷೇರು ಮಾರುಕಟ್ಟೆ: ಮುಂದುವರಿದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಆತಂಕ

ಅಮೆರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಮತ್ತೆ ಹೆಚ್ಚಿಸುವ ನಿರೀಕ್ಷೆ ಇದೆ. ಈ ಆತಂಕದಿಂದ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಇನ್ನೂ ನಕಾರಾತ್ಮಕ ಪ್ರವೃತ್ತಿ ಮುಂದುವರೆದಿದೆ.

author img

By

Published : Feb 23, 2023, 2:08 PM IST

BSE Sensex nifty
BSE Sensex nifty

ಮುಂಬೈ: ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ಆತಂಕದಿಂದ ಪ್ರಮುಖ ಷೇರು ಸೂಚ್ಯಂಕಗಳು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡವು. ವಿದೇಶಿ ಬಂಡವಾಳದ ಹೊರ ಹರಿವು ಮತ್ತು ಯುಎಸ್ ಮಾರುಕಟ್ಟೆಯಲ್ಲಿ ಮಿಶ್ರ ಪ್ರವೃತ್ತಿಯು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಿತು.

ಇಂದಿನ ವಹಿವಾಟಿನ ಈ ಸಮಯದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 92.7 ಪಾಯಿಂಟ್ ಕುಸಿದು 59,652.28 ಅಂಕಗಳಿಗೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 34.5 ಅಂಕ ಕುಸಿದು 17,519.80ಕ್ಕೆ ತಲುಪಿದೆ. ಇದರ ನಂತರ, ಎರಡೂ ಸೂಚ್ಯಂಕಗಳು ಮತ್ತಷ್ಟು ಕುಸಿತ ಕಂಡವು ಮತ್ತು ಸೆನ್ಸೆಕ್ಸ್ 279.27 ಪಾಯಿಂಟ್‌ಗಳಿಂದ 59,465.71 ಪಾಯಿಂಟ್‌ಗಳಿಗೆ ಕುಸಿದು, ನಿಫ್ಟಿ 60.80 ಪಾಯಿಂಟ್‌ಗಳ ಕುಸಿತದೊಂದಿಗೆ 17,493.50 ಪಾಯಿಂಟ್‌ಗಳಿಗೆ ತಲುಪಿದೆ.

ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಎಚ್‌ಡಿಎಫ್‌ಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಕೊಟಕ್ ಮಹೀಂದ್ರ ಬ್ಯಾಂಕ್ ನಷ್ಟ ಅನುಭವಿಸಿದವು. ಮತ್ತೊಂದೆಡೆ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಸನ್ ಫಾರ್ಮಾ ಏರಿಕೆ ಕಂಡವು.

ಏಷ್ಯಾ ಷೇರು ಮಾರುಕಟ್ಟೆಗಳ ವಹಿವಾಟು: ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಚೀನಾ ಇತರ ಏಷ್ಯಾದ ಷೇರು ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಅಮೆರಿಕ ಮಾರುಕಟ್ಟೆಗಳು ಬುಧವಾರ ಮಿಶ್ರ ಪ್ರವೃತ್ತಿಯೊಂದಿಗೆ ಬಂದ್ ಆಗಿದ್ದವು. ಬುಧವಾರ 30-ಷೇರುಗಳ ಸೆನ್ಸೆಕ್ಸ್ 59,744.98 ಪಾಯಿಂಟ್‌ಗಳಲ್ಲಿ 927.74 ಪಾಯಿಂಟ್‌ಗಳು ಅಥವಾ 1.53 ಪ್ರತಿಶತದಷ್ಟು ಕುಸಿದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಕೂಡ 272.40 ಪಾಯಿಂಟ್‌ಗಳು ಅಥವಾ ಶೇಕಡಾ 1.53 ರಷ್ಟು ಇಳಿಕೆಯಾಗಿ 17,554.30 ಪಾಯಿಂಟ್‌ಗಳ ನಾಲ್ಕು ತಿಂಗಳ ಕನಿಷ್ಠ ಮಟ್ಟದಲ್ಲಿ ಕೊನೆಗೊಂಡಿತು. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.45 ಪ್ರತಿಶತ ಏರಿಕೆಯಾಗಿ $ 80.96 ಕ್ಕೆ ತಲುಪಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಕರೆನ್ಸಿ ಎದುರು ರೂಪಾಯಿ ಮೌಲ್ಯ 11 ಪೈಸೆ ಏರಿಕೆಯಾಗಿ 82.77ಕ್ಕೆ ತಲುಪಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ ರೂಪಾಯಿ 82.78 ಕ್ಕೆ ಪ್ರಾರಂಭವಾಯಿತು ಮತ್ತು ನಂತರ ಅದರ ಹಿಂದಿನ ಮುಕ್ತಾಯದ ಬೆಲೆಗಿಂತ 11 ಪೈಸೆಯ ಹೆಚ್ಚಳವನ್ನು ದಾಖಲಿಸುವ ಮೂಲಕ 82.77 ಕ್ಕೆ ತಲುಪಿತು.

ಬುಧವಾರದಂದು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 82.88ಕ್ಕೆ ತಲುಪಿತ್ತು. ಏತನ್ಮಧ್ಯೆ, ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಸ್ಥಾನವನ್ನು ತೋರಿಸುವ ಡಾಲರ್ ಸೂಚ್ಯಂಕವು ಶೇಕಡಾ 0.23 ರಷ್ಟು ಕುಸಿದು 104.34 ಕ್ಕೆ ತಲುಪಿದೆ. ಷೇರು ಮಾರುಕಟ್ಟೆಯ ತಾತ್ಕಾಲಿಕ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಎಫ್‌ಐಐ (ಎಫ್‌ಐಐ) ಬುಧವಾರ 579.82 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: ಹೂಡಿಕೆದಾರರ ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ: ಕೇಂದ್ರ, ಸೆಬಿಗೆ ಸುಪ್ರೀಂ ಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.