ವಾಷಿಂಗ್ಟನ್: ಅಮೆರಿಕ ಪಡೆಗಳು ಹಾಗೂ ಪ್ರಮುಖ ಭಯೋತ್ಪಾದಕರು ಹಾಗೂ ಮಧ್ಯ ಪ್ರಾಚ್ಯ ಮತ್ತು ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡಿದ ಅಮೆರಿಕನ್ ಪಡೆಗಳ ಬಯೋಮೆಟ್ರಿಕ್ ಡೇಟಾವನ್ನು ಇಬೇ (eBay) ಯಲ್ಲಿ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಅಮೆರಿಕದ ಮಿಲಿಟರಿಯ ಹಳೆ ಉಪಕರಣಗಳ ಜತೆ ಈ ದತ್ತಾಂಶ ಮಾರಾಟ ಮಾಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಹ್ಯಾಕರ್ಸ್ ಗುಂಪು ಈ ಸಾಧನವನ್ನು ಖರೀದಿಸಿದ್ದು, ಇದರಲ್ಲಿ ಫಿಂಗರ್ಪ್ರಿಂಟ್, ಕಣ್ಣಿನ ಐರಿಸ್ ಸ್ಕಾನ್, ಫೋಟೋ ಮತ್ತು ವಿವರಣೆ ಸೇರಿದಂತೆ ಡಿಫಾಲ್ಟ್ ಪಾಸ್ವರ್ಡ್ ಸೇರಿದಂತೆ ಎಲ್ಲ ದಾಖಲೆ ಹೊಂದಿದೆ ಎಂದು ದಿ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಆಫ್ಘಾನಿಸ್ತಾನದಿಂದ ನಾಟೋ ಪಡೆಗಳನ್ನು ಹಿಂದಿರುಗಿಸಿಕೊಂಡ ಸಂದರ್ಭದಲ್ಲಿ ಕೆಲವು ಉಪಕರಣಗಳನ್ನು ಬಿಟ್ಟು ಬರಲಾಗಿದೆ. ಈ ರೀತಿಯ ಸಾಧನವನ್ನು ಜರ್ಮನ್ ಮೂಲದ ಸಿಸಿಸಿ ಸಂಶೋಧಕರು ಪರೀಕ್ಷೆ ಮಾಡಿದಾಗ, ಅದರಲ್ಲಿ ದೊಡ್ಡಮಟ್ಟದ ಬಯೋಮೆಟ್ರಿಕ್ ಸೇರಿದಂತೆ ಇತರ ವೈಯಕ್ತಿಕ ದಾಖಲೆಗಳು ಪತ್ತೆಯಾಗಿದೆ. ಈ ದತ್ತಾಂಶಗಳು ಅಫ್ಘಾನಿಸ್ತಾನ ಮತ್ತು ಇರಾಕ್ನ ಜನರಿಗೆ ಪ್ರಾಣಾಪಾಯ ತಂದೊಡ್ಡಿದೆ ಎಂದು ಬ್ಲಾಗ್ನಲ್ಲಿ ತಿಳಿಸಲಾಗಿದೆ.
ಅಮೆರಿಕ ಸೇನಾ ಬಳಕೆಯ ಉಪಕರಣಗಳನ್ನು ನಾವು ಪತ್ತೆ ಹಚ್ಚಿದ್ದು, ಆಫ್ಘನ್ ಮತ್ತು ಇರಾಕಿನ ಸರಿ ಸುಮಾರು 2,600 ಮಂದಿಯ ಹೆಸರು, ಫಿಂಗರ್ಪ್ರಿಂಟ್ಸ್, ಐರಿಸ್ ಸ್ಕಾನ್ ಮತ್ತು ಫೋಟೋ ಅಸುರಕ್ಷಿತ ಬಯೋಮೆಟ್ರಿಕ್ ದತ್ತಾಂಶ ಪತ್ತೆಯಾಗಿದೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದ ವಿವಿಧ ಸಾಧನಗಳು ಇಬ್ಬರು ಅಮೆರಿಕ ಮಿಲಿಟರಿ ಸಿಬ್ಬಂದಿಯ ಹೆಸರುಗಳು ಮತ್ತು ಬಯೋಮೆಟ್ರಿಕ್ ಡೇಟಾ, ಹಿಂದಿನ ನಿಯೋಜನೆಯ ಸ್ಥಳಗಳ ಜಿಪಿಎಸ್ ನಿರ್ದೇಶಾಂಕಗಳು ಮತ್ತು ಹೆಸರುಗಳು ಇವೆ. ಅಷ್ಟೇ ಅಲ್ಲ ಫಿಂಗರ್‌ಪ್ರಿಂಟ್‌ಗಳು, ಐರಿಸ್ ಸ್ಕ್ಯಾನ್‌ಗಳು ಮತ್ತು 2,632 ಜನರ ಫೋಟೋಗಳೊಂದಿಗೆ ಬೃಹತ್ ಬಯೋಮೆಟ್ರಿಕ್ಸ್ ಡೇಟಾಬೇಸ್ ಅನ್ನು ಒಳಗೊಂಡಿವೆ.
ಈ ಡಿವೈಸ್ನ ದತ್ತಾಂಶಗಳನ್ನು ಕಡೆಯದಾಗಿ 2012ರ ಮಧ್ಯಭಾಗದಲ್ಲಿ ಕಾಬೂಲ್ ಮತ್ತು ಕಂದಾಹರ್ನಲ್ಲಿ ಬಳಕೆ ಮಾಡಲಾಗಿದೆ. ಅತ್ಯಂತ ಅಪಾಯಕಾರಿ ತಂತ್ರಜ್ಞಾನವನ್ನು ಅಜಾಗರೂಕತೆಯ ನಿರ್ವಹಣೆ ನಂಬಲು ಅಸಾಧ್ಯ ಎಂದು ಸಿಸಿಸಿ ಸಂಶೋಧನ ಗುಂಪಿನ ಮುಖ್ಯಸ್ಥ ಮತ್ತೀಸ್ ಮಾರ್ಕ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘನ್ ಮಹಿಳೆಯರ ಮೇಲೆ ತಾಲಿಬಾನ್ ಕೆಂಗಣ್ಣು.. ನಿರ್ಬಂಧಗಳಿಗೆ ವಿಶ್ವಸಂಸ್ಥೆ ತೀವ್ರ ಕಳವಳ