ನ್ಯೂಯಾರ್ಕ್: ಬ್ಲೂಟಿಕ್ಗೆ ಹಣ ಪಾವತಿಸಬೇಕು ಎಂಬ ನಿಯಮ ಸಡಿಲಿಸಿದ್ದ ಟ್ವಿಟರ್ ಇದೀಗ ಮತ್ತೆ ಚಂದಾದಾರಿಕೆ ಪಡೆಯುವ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಹೇಳಿದೆ. ಸಾಮಾನ್ಯ ಬಳಕೆದಾರರಿಗೆ ಮಾಸಿಕ 8 ಯುಎಸ್ ಡಾಲರ್, ಐಫೋನ್ಗೆ 11 ಡಾಲರ್ ಪಾವತಿಸಲು ಕಂಪನಿ ಹೇಳಿದೆ.
ವಿಶ್ವದ ನಂಬರ್ 1 ಸಿರಿವಂತ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಟ್ವಿಟರ್ ಅನ್ನು 44 ಶತಕೋಟಿ ಡಾಲರ್‌ಗೆ ಖರೀದಿಸಿದ ಬಳಿಕ ಬ್ಲೂಟಿಕ್ ಸೇವೆಗೆ ಹಣ ಸಂದಾಯ ಮಾಡಬೇಕು ಎಂದು ಷರತ್ತು ವಿಧಿಸಿದ್ದರು. ಇದಕ್ಕೆ ವಿಶ್ವದೆಲ್ಲೆಡೆಯಿಂದ ಆಕ್ಷೇಪ ಕೇಳಿಬಂದಿತ್ತು. ಟ್ವಿಟರ್ ವಿರುದ್ಧ ಕೇಳಿಬಂದ ಈ ವಿರೋಧದಿಂದಾಗಿ ಅದರ ಷೇರು ಮೌಲ್ಯ ವಿಪರೀತ ಪ್ರಮಾಣದಲ್ಲಿ ಕುಸಿದಿತ್ತು.
ಅಷ್ಟೇ ಅಲ್ಲ ಮಸ್ಕ್ ಅವರ ಟೆಸ್ಲಾದ ಷೇರುಗಳೂ ಜಾರಿದ್ದವು. ಬಳಿಕ ಪ್ರೀಮಿಯಂ ಸೇವೆಯನ್ನು ಕೆಲಕಾಲ ತಾತ್ಕಾಲಿಕವಾಗಿ ಕೈಬಿಟ್ಟಿದ್ದರು. ಇದೀಗ ಮತ್ತೆ ಪ್ರೀಮಿಯಂ ಚಂದಾದಾರಿಕೆ ಮುಂದುವರಿಸುವುದಾಗಿ ಹೇಳಿರುವ ಕಂಪನಿ, ಸಾಮಾನ್ಯ ಬಳಕೆದಾರರಿಗೆ ತಿಂಗಳಿಗೆ 8 ಡಾಲರ್ ಮತ್ತು ಐಫೋನ್ ಬಳಕೆದಾರರಿಗೆ ಮಾಸಿಕ 11 ಡಾಲರ್ ವೆಚ್ಚ ಭರಿಸಬೇಕು. ಇದರಿಂದ ಚಂದಾದಾರರು ಕಡಿಮೆ ಜಾಹೀರಾತುಗಳ ಅಡಚಣೆ, ದೀರ್ಘ ವಿಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಮಾಧ್ಯಮ ಕಂಪನಿ ಹೇಳಿದೆ.
ಇದನ್ನೂ ಓದಿ: ಸರ್ವರ್ ಡೌನ್ ಸಮಸ್ಯೆ ನಿವಾರಣೆ: ಗೂಗಲ್ ಜಿಮೇಲ್ ಸೇವೆ ಮರುಸ್ಥಾಪನೆ