ETV Bharat / business

Twitter new rule: ಟ್ವಿಟರ್ ಡೌನ್‌ ಬೆನ್ನಲ್ಲೇ ಬಂತು ಹೊಸ ನಿಯಮ! ನಿಮಗಿದು ಗೊತ್ತೇ? - ಟ್ವಿಟರ್

ಟ್ವಿಟರ್ ಮಾಲೀಕ ಎಲಾನ್​ ಮಸ್ಕ್​ ಮತ್ತೊಂದು ಹೊಸ ನಿಯಮ ತಂದಿದ್ದಾರೆ. ದಿನಕ್ಕೆ ಇಂತಿಷ್ಟು ಟ್ವೀಟ್​ ಮಾತ್ರ ನೋಡುವ, ಓದುವ ಮಿತಿ ಹೇರಿದ್ದಾರೆ.

ಟ್ವಿಟರ್
ಟ್ವಿಟರ್
author img

By

Published : Jul 2, 2023, 11:37 AM IST

ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಮೈಕ್ರೋಬ್ಲಾಗಿಂಗ್​ ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್​ ದಿನಕ್ಕೊಂದು ನಿಯಮಗಳನ್ನು ಹೊರತರುತ್ತಿದೆ. ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಅವರು ಟ್ವಿಟರ್ ಖರೀದಿಸಿದ ಬಳಿಕ ಹತ್ತಾರು ನಿರ್ಬಂಧಗಳನ್ನು ವಿಧಿಸುತ್ತಲೇ ಇದ್ದಾರೆ. ಇದೀಗ ಹೊಸದಾಗಿ 'ಪರಿಶೀಲಿಸಿದ ಖಾತೆಗಳಿಗೆ ದಿನಕ್ಕೆ 6,000, ಪರಿಶೀಲಿಸದ ಅಕೌಂಟ್​​ಗಳಿಗೆ ಕೇವಲ 600 ಟ್ವೀಟ್​ಗಳನ್ನು ಮಾತ್ರ ನೋಡುವ ಮಿತಿ' ಹೇರಲಾಗಿದೆ. ಇದರಿಂದ ಬಳಕೆದಾರರು ತೊಂದರೆಗೆ ಒಳಗಾಗಿದ್ದಾರೆ.

ಶನಿವಾರ ಟ್ವಿಟರ್​ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಭಾನುವಾರ ಕೂಡ ಬಳಕೆಗೆ ಲಭ್ಯವಿರಲಿಲ್ಲ. ಈ ಬಗ್ಗೆ ಸಾವಿರಾರು ಬಳಕೆದಾರರು ದೂರು ಸಲ್ಲಿಸಿದ್ದಾರೆ. ಇದಾದ ಬಳಿಕವೇ ಹೊಸ ಮಿತಿ ಹೇರಿದ್ದು ಗೊತ್ತಾಗಿದೆ. ಖಾತೆಗೆ ವಿಧಿಸಲಾದ ತಿಂಗಳ ಮೊತ್ತ ಪಾವತಿಸದೇ ಉಚಿತವಾಗಿ ಬಳಕೆ ಮಾಡುತ್ತಿರುವ ಜನರಿಗೆ ಹೆಚ್ಚಿನ ಟ್ವೀಟ್​ಗಳು ಲಭ್ಯವಾಗದಂತೆ ನಿರ್ಬಂಧ ಹಾಕಲಾಗಿದೆ. ಕೇವಲ 600 ಟ್ವೀಟ್​ ಮಾತ್ರ ನೋಡುವ, ಪೋಸ್ಟ್​ ಮಾಡುವ ಅವಕಾಶವಿದೆ.

ವಿಶ್ವಾದ್ಯಂತ 200 ಮಿಲಿಯನ್‌ಗಿಂತಲೂ ಹೆಚ್ಚು ಟ್ವಿಟರ್‌ ಬಳಕೆದಾರರು ಇದ್ದಾರೆ. ನಿನ್ನೆಯಿಂದ ಪ್ರಪಂಚದ ಹಲವು ಭಾಗಗಳಲ್ಲಿ ಸಾಮಾಜಿಕ ಮಾಧ್ಯಮ ಸ್ಥಗಿತಗೊಂಡಿದೆ. ಇದರಿಂದ TwitterDown ಹ್ಯಾಶ್‌ಟ್ಯಾಗ್ ಟ್ರೆಂಡ್​ ಆಗಿತ್ತು. ಟ್ವೀಟ್‌ಗಳು ಮತ್ತು ಪೋಸ್ಟ್​ ವೀಕ್ಷಿಸಲು ಜನರು ಲಾಗ್‌ ಇನ್ ಆಗಲು ಪರದಾಡಿದರು.

ಇದನ್ನೂ ಓದಿ: Twitter New Rule: ಖಾತೆ ಇಲ್ಲದೇ ಇನ್ಮುಂದೆ ಟ್ವಿಟರ್​ ಜಾಲಾಡಲು ಸಾಧ್ಯವಿಲ್ಲ; ಹೊಸ ನಿಯಮ ತಂದ ಮಸ್ಕ್​

ಡೇಟಾ ಕಳವು ತಡೆಗೆ ಕ್ರಮ: ಹೊಸ ನಿರ್ಬಂಧದ ಬಗ್ಗೆ ಎಲಾನ್​ ಮಸ್ಕ್​ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದು, ಡೇಟಾ ಕಳ್ಳತನವನ್ನು ತಡೆಯುವ ಭಾಗವಾಗಿ ಈ ತಾತ್ಕಾಲಿಕ ಕ್ರಮವನ್ನು ಜಾರಿ ಮಾಡಲಾಗಿದೆ. ಪರಿಶೀಲಿಸದ ಖಾತೆಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದ ಬಗ್ಗೆಯೂ ವಿವರಿಸಿದ್ದು, ದಿನಕ್ಕೆ 600 ಪೋಸ್ಟ್‌ಗಳನ್ನು ಓದಲು ಸೀಮಿತಗೊಳಿಸಲಾಗಿದೆ. ಹಣ ಪಾವತಿಸಿ ಪರಿಶೀಲಿಸಿಕೊಂಡ ಖಾತೆಗಳು ದಿನಕ್ಕೆ 6,000 ಪೋಸ್ಟ್‌ಗಳವರೆಗೆ ನೋಡಲು ಅವಕಾಶವಿದೆ. ಈ ನಿಯಮ ತಾತ್ಕಾಲಿಕ ಎಂದು ಮಸ್ಕ್​ ಹೇಳಿದ್ದಾರೆ. ಹೊಸದಾಗಿ ನಿಗದಿ ಮಾಡಲಾದ ನಿಯಮದಂತೆ 600 ಟ್ವೀಟ್​ ಸ್ಕ್ರಾಲ್​ ಮಾಡಿದ ಬಳಿಕ ಖಾತೆ ತನ್ನಿಂದತಾನೇ ಲಾಗೌಟ್​ ಆಗಲಿದೆ. ಇದು ವಿಶ್ವದ ಎಲ್ಲ ಬಳಕೆದಾರರಿಗೆ ಅನ್ವಯ ಎಂದು ಕಂಪನಿ ಹೇಳಿದೆ.

ಹೊಸ ಹೊಸ ನಿಯಮ..: ವಿಶ್ವದ ಸಿರಿವಂತ ವ್ಯಕ್ತಿಯಾದ ಎಲಾನ್​ ಮಸ್ಕ್​ ಟ್ವಿಟರ್​ ಅನ್ನು 44 ಮಿಲಿಯನ್​ ಡಾಲರ್​ಗೆ ಖರೀದಿ ಮಾಡಿದ ಬಳಿಕ ಖಾತೆಗಳ ವೆರಿಫೈಡ್​ಗೆ ತಿಂಗಳಿಗೆ 8 ಡಾಲರ್​ ಚಂದಾದಾರಿಕೆ ತಂದಿದ್ದರು. ಇದು ಟ್ವಿಟರ್ ಆದಾಯವನ್ನು ಹೆಚ್ಚಿಸುವ ಪ್ರಯತ್ನವಾಗಿತ್ತು. ಇದರ ಜಾರಿಯ ಬಳಿಕ ಕಂಪನಿಯ ಆದಾಯ ತೀವ್ರವಾಗಿ ಕುಸಿದಿತ್ತು. ಸರಿಸುಮಾರು ಮುಕ್ಕಾಲು ಭಾಗದಷ್ಟು ಆದಾಯ ಖೋತಾ ಆಗಿತ್ತು ಇದನ್ನು ತಡೆಯಲು ಅಲ್ಲಿನ ಸಿಬ್ಬಂದಿಯನ್ನು ಮಸ್ಕ್​ ಕೈಬಿಟ್ಟಿದ್ದರು.

ಇದಲ್ಲದೇ, ಟ್ವಿಟರ್​ ಜಾಲಾಡಬೇಕಾದರೆ ಸ್ವತಃ ಅಕೌಂಟ್​ ಹೊಂದಿರಬೇಕು. ನಿಗದಿತ ಖಾತೆ ಮೂಲಕವೇ ಟ್ವೀಟ್​ಗಳ ಓದಲು ಸಾಧ್ಯವಾಗುವಂತೆ ಮಾಡಲಾಗಿದೆ. ಯಾವುದೇ ಟ್ವೀಟ್​ ಓದಬೇಕು ಎಂದರೂ ಟ್ವಿಟರ್​ ಖಾತೆಯಿಂದ ಲಾಗಿನ್​ ಆಗುವುದು ಕಡ್ಡಾಯ.

ಇದನ್ನೂ ಓದಿ: ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಟ್ವಿಟರ್​.. ಸಂಕಷ್ಟ ಎದುರಿಸಿದ ಬಳಕೆದಾರರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.