ETV Bharat / business

ಮುಗಿದ ಕಿತ್ತಾಟ.. ಮೊದಲ ಆಫರ್​ನಂತೆಯೇ ಟ್ವಿಟ್ಟರ್​ ಖರೀದಿಸಲು ಎಲಾನ್​ ಮಸ್ಕ್​ ಒಪ್ಪಿಗೆ - ಎಲಾನ್​ ಮಸ್ಕ್​ ಟ್ವಿಟ್ಟರ್ ಖರೀದಿ

ಕೊನೆಗೂ ಎಲಾನ್​ ಮಸ್ಕ್​ ಟ್ವಿಟ್ಟರ್​ ಖರೀದಿಗೆ ಅಂಕಿತ ಹಾಕಿದ್ದಾರೆ. ಮೊದಲು ನೀಡಿದ ಆಫರ್​ನಂತೆಯೇ ಟ್ವಿಟ್ಟರ್ ಷೇರುಗಳನ್ನು ಖರೀದಿ ಮಾಡಲು ಕಂಪನಿ ಪತ್ರ ಬರೆದಿದ್ದಾರೆ. ಇದನ್ನು ಟ್ವಿಟ್ಟರ್​ ಅಧಿಕೃತವಾಗಿ ಒಪ್ಪಿಕೊಂಡಿದೆ.

twitter-confirms-elon-musk-buyout-offer
ಟ್ಟರ್​ ಖರೀದಿಸಲು ಎಲಾನ್​ ಮಸ್ಕ್​ ಓಕೆ
author img

By

Published : Oct 5, 2022, 7:00 AM IST

ವಾಷಿಂಗ್ಟನ್: ನಕಲಿ ಖಾತೆಗಳ ನಿಖರತೆಗಾಗಿ ನಿಂತಿದ್ದ ಟ್ವಿಟ್ಟರ್​ ಖರೀದಿ ಒಪ್ಪಂದ ಕೊನೆಗೂ ಚುಕ್ತಾ ಆಗಿದ್ದು, ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್​ ಮೊದಲು ಆಫರ್​ ಮಾಡಿದಂತೆಯೇ ಪ್ರತಿ ಷೇರಿಗೆ 54.20 ಡಾಲರ್​ ನೀಡಿ ಖರೀದಿಸಲು ಒಪ್ಪಿದ್ದಾರೆ ಎಂದು ಟ್ವಿಟ್ಟರ್​ ಅಧಿಕೃತವಾಗಿ ಘೋಷಿಸಿದೆ.

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ಅನ್ನು 44 ಶತಕೋಟಿಗೆ ಖರೀದಿಸಲು ಎಲಾನ್​ ಮಸ್ಕ್​ ವರ್ಷಾರಂಭದಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಬಳಿಕ ನಕಲಿ ಖಾತೆಗಳ ವಿಚಾರಕ್ಕೆ ಒಪ್ಪಂದವನ್ನು ಕಡಿದುಕೊಳ್ಳುವುದಾಗಿ ಹೇಳಿದ್ದರು.

ಇದರ ವಿರುದ್ಧ ಟ್ವಿಟ್ಟರ್​ ಕಾನೂನು ಹೋರಾಟ ನಡೆಸಿತ್ತು. ಶೇ.5 ಕ್ಕಿಂತ ನಕಲಿ ಖಾತೆಗಳಿವೆ ಎಂದು ಕಂಪನಿ ಮಾಹಿತಿ ನೀಡಿತ್ತು. ಆದರೆ, ಅದಕ್ಕಿಂತಲೂ ಹೆಚ್ಚಿವೆ ಎಂದು ಎಲಾನ್​ ವಾದಿಸಿ ಒಪ್ಪಂದವನ್ನೇ ಮುರಿದುಕೊಳ್ಳುವುದಾಗಿ ಹೇಳಿದ್ದರು.

ಇದೀಗ ಮನಸು ಬದಲಾಯಿಸಿರುವ ವಿಶ್ವದ ಶ್ರೀಮಂತ ಎಲಾನ್​ ಮಸ್ಕ್​ "ತಾನು ಮೊದಲು ನೀಡಿದ ಆಫರ್​ನಂತೆಯೇ ಪ್ರತಿ ಷೇರಿಗೆ 54.20 ಡಾಲರ್​ಗೆ ಟ್ವಿಟ್ಟರ್​ ಖರೀದಿ ಮಾಡುವುದಾಗಿ ಟ್ವಿಟ್ಟರ್​ಗೆ ಪತ್ರ ಬರೆದಿದ್ದಾರೆ.

ಹೆಚ್ಚಿದ ಟ್ವಿಟ್ಟರ್​ ಷೇರು, ಇಳಿದ ಟೆಸ್ಲಾ: ಎಲಾನ್​ ಮಸ್ಕ್​ ಟ್ವಿಟ್ಟರ್ ಖರೀದಿ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ಷೇರು ಮಾರುಕಟ್ಟೆಯಲ್ಲಿ ಟ್ವಿಟ್ಟರ್​ ದರಗಳು 12.7 ರಷ್ಟು ಏರಿಕೆ ಕಂಡಿವೆ. ಇದೇ ವೇಳೆ ಟೆಸ್ಲಾದ ಷೇರುಗಳು ಶೇ.3 ರಷ್ಟು ಕುಸಿದಿವೆ. ಒಪ್ಪಂದವನ್ನು ಮುಂದುವರಿಸುವುದಾಗಿ ಎಲಾನ್​ ಮಸ್ಕ್ ಘೋಷಿಸಿದ್ದರಿಂದ ತನ್ನ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿದ್ದಾರೆ.

ಓದಿ: ಸೆಪ್ಟೆಂಬರ್‌ನಲ್ಲಿ 11 ಲಕ್ಷ ಕೋಟಿ ರೂ ಮೈಲಿಗಲ್ಲು ದಾಟಿದ ಯುಪಿಐ ಪೇಮೆಂಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.