ETV Bharat / business

ತಿರುಪತಿ ತಿಮ್ಮಪ್ಪನ ಆದಾಯ ₹4 ಸಾವಿರ ಕೋಟಿ: ಹುಂಡಿಯಿಂದ ಬಂತು ₹1,591 ಕೋಟಿ ಹಣ - ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತಿರುಪತಿ ತಿಮ್ಮಪ್ಪನ ಹಣ

ತಿರುಮಲ ತಿರುಪತಿ ದೇವಸ್ಥಾನ 2023-24 ನೇ ಸಾಲಿನಲ್ಲಿ 4 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ ಎಂದು ಟಿಟಿಡಿ ತಿಳಿಸಿದೆ. ಭಕ್ತರ ಕಾಣಿಕೆ ಹಣ ಹುಂಡಿಯಿಂದಲೇ 1,591 ಕೋಟಿ ರೂ ಸಂಗ್ರಹವಾಗಿದೆ.

ತಿರುಪತಿ ತಿಮ್ಮಪ್ಪನ ಆದಾಯ
ತಿರುಪತಿ ತಿಮ್ಮಪ್ಪನ ಆದಾಯ
author img

By

Published : Mar 22, 2023, 9:53 AM IST

ತಿರುಪತಿ: ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು 2023-24ನೇ ಸಾಲಿನಲ್ಲಿ 4,411.68 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸಿದೆ. ಇದರಲ್ಲಿ ಹುಂಡಿ ಮೂಲಕವೇ 1,591 ಕೋಟಿ ರೂ ಸಂಗ್ರಹವಾಗಿದೆ. ಕೋವಿಡ್ ನಂತರ ಹುಂಡಿಯ ಆದಾಯ ಅಪಾರವಾಗಿ ಹೆಚ್ಚಾಗಿದೆ. ದಿನಕ್ಕೆ ಸರಾಸರಿ 4.42 ಕೋಟಿ ರೂ. ಬರುತ್ತಿದೆ. ಮುಂದಿನ ವರ್ಷವೂ ಇದೇ ಮಟ್ಟದಲ್ಲಿರಲಿದೆ ಎನ್ನುವುದು ಟ್ರಸ್ಟ್ ಲೆಕ್ಕಾಚಾರ.

2022-23 ರ ಆದಾಯಕ್ಕೆ ಹೋಲಿಸಿದರೆ ಈ ಬಾರಿಯ ಆದಾಯ 1,315.28 ಕೋಟಿ ರೂ. ಹೆಚ್ಚಾಗಿದೆ. ಇದರಲ್ಲಿ ನೌಕರರು, ಗುತ್ತಿಗೆ ಸೇವೆಗಳ ಸಿಬ್ಬಂದಿಯ ವೇತನಕ್ಕಾಗಿ 1,532 ಕೋಟಿ ರೂ. ಖರ್ಚಾದರೆ, ವಿವಿಧ ಉಪಕರಣಗಳ ಖರೀದಿಗೆ 690.50 ಕೋಟಿ ರೂ. ವೆಚ್ಚವಾಗಲಿದೆ. ಇತರೆ ವೆಚ್ಚಗಳಿಗೆ 600 ಕೋಟಿ ರೂ. ವ್ಯಯವಾಗಲಿದೆ.

ಹೀಗೆ ಬಂದ ಹಣದಲ್ಲಿ ಪ್ರಸ್ತುತ ವರ್ಷ 291.85 ಕೋಟಿ ರೂ. ಉಳಿತಾಯವಾಗಲಿದೆ ಎಂಬುದೊಂದು ಅಂದಾಜು. ಟಿಟಿಡಿ ಇತ್ತೀಚೆಗೆ ಕೆಲವು ವಸತಿ ನಿಲಯಗಳು ಹಾಗೂ ಕಲ್ಯಾಣ ಮಂಟಪಗಳ ಬಾಡಿಗೆಯನ್ನು ಏರಿಸಿತ್ತು. ಮುಂಬರುವ ವರ್ಷದಲ್ಲಿ ಇದು ಇನ್ನಷ್ಟು ಆದಾಯ ತಂದುಕೊಡಲಿದೆ. ವಸತಿ ಮತ್ತು ಕಲ್ಯಾಣ ಮಂಟಪಗಳಿಂದ ಪ್ರಸಕ್ತ ವರ್ಷದ ಆದಾಯ 118 ಕೋಟಿ ರೂ. ಆಗಿದೆ. ಮುಂದಿನ ವರ್ಷದಲ್ಲಿ ಇದು 129 ಕೋಟಿ ರೂ. ದಾಟಲಿದೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚಿದ ಬಡ್ಡಿ ಆದಾಯ: ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ನಗದು ಮತ್ತು ಚಿನ್ನದ ಮೇಲಿನ ಬಡ್ಡಿ ಪ್ರಸಕ್ತ ಹಣಕಾಸು ವರ್ಷದಲ್ಲಿ 813 ಕೋಟಿ ರೂಪಾಯಿ ಬರಲಿದೆ ಎಂದು ಟಿಟಿಡಿ ಹೇಳುತ್ತಿದೆ. ಬರುವ ಆರ್ಥಿಕ ವರ್ಷದಲ್ಲಿ 990 ಕೋಟಿ ರೂ.ಗೆ ಇದು ಹೆಚ್ಚಲಿದೆ. ಅಂದರೆ ಈಗಿನ ಬಡ್ಡಿ ಆದಾಯಕ್ಕಿಂತ 177 ಕೋಟಿ ರೂ. ಏರಿಕೆಯಾಗಲಿದೆ.

2022- 23ರ ಸಾಲಿನ ವರ್ಷದ ಆದಾಯವನ್ನು ಆರಂಭದಲ್ಲಿ 3,096.40 ಕೋಟಿಗಳಷ್ಟು ರೂ. ಅಂದಾಜಿಸಲಾಗಿತ್ತು. ಬಳಿಕ ಅದು ಹೆಚ್ಚಾಗಿ 4,385.25 ಕೋಟಿ ರೂ.ಗೆ ತಲುಪಲಿದೆ ಎಂದು ಪರಿಷ್ಕೃತ ಅಂದಾಜಿನಲ್ಲಿ ತಿಳಿಸಲಾಗಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸುಮಾರು 1,613 ಕೋಟಿ ರೂ. ಮೀರಿ ಆದಾಯ ಬರಲಿದೆ ಎಂಬುದು ಅಂದಾಜು.

ದೇವಸ್ಥಾನದ ಹೆಸರಲ್ಲಿದೆ ಕೋಟ್ಯಂತರ ರೂ. ಆಸ್ತಿ: ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ಒಟ್ಟು 15,938.68 ಕೋಟಿ ರೂ. ನಗದು ಠೇವಣಿ ಇಡಲಾಗಿದೆ. ಅದರ ಜೊತೆಗೆ ವಿವಿಧ ಬ್ಯಾಂಕ್​ಗಳಲ್ಲಿ 10,258.37 ಕೆಜಿ (10 ಟನ್) ಚಿನ್ನ ಕೂಡ ಇಡಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಕಳೆದ ವರ್ಷ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ಬಹಿರಂಗವಾಗಿತ್ತು.

ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಯಾವ ಬ್ಯಾಂಕ್​ಗಳಲ್ಲಿ ಹೆಚ್ಚಿನ ಬಡ್ಡಿದರ ನೀಡುತ್ತಾರೋ ಆ ಬ್ಯಾಂಕ್​ಗಳಲ್ಲಿ ಠೇವಣಿ ಮಾಡುತ್ತಿದ್ದೇವೆ. ಬ್ಯಾಂಕ್‌ಗಳಲ್ಲಿ ನಗದು ಮತ್ತು ಚಿನ್ನವನ್ನು ಠೇವಣಿ ಮಾಡಲು, ಅರ್ಹ ಶೆಡ್ಯೂಲ್ಡ್ ಬ್ಯಾಂಕ್‌ಗಳು ಮತ್ತು ಸಂಸ್ಥೆಗಳಿಂದ ಕೊಟೇಷನ್​ಗಳನ್ನು ಆಹ್ವಾನಿಸಲಾಗಿದೆ ಎಂದು ಟಿಟಿಡಿ ತಿಳಿಸಿತ್ತು.

ನಗದು, ಚಿನ್ನಾಭರಣ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿರುವ ತಿರುಮಲ ದೇವರ ಆಸ್ತಿ ಮೌಲ್ಯ ಸುಮಾರು 2.25 ಲಕ್ಷ ಕೋಟಿ ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಟಿಟಿಡಿ ಮಂಡಳಿ ದೇಶದ ನಾನಾ ಭಾಗಗಳಲ್ಲಿ ಕೃಷಿಭೂಮಿ, ಫ್ಲ್ಯಾಟ್​ಗಳು ಹಾಗೂ ಕಟ್ಟಡಗಳು ಸೇರಿ ಒಟ್ಟು 960 ಆಸ್ತಿಗಳನ್ನು ಹೊಂದಿದೆ ಎಂಬ ವಿಚಾರ ಶ್ವೇತಪತ್ರದಲ್ಲಿದೆ. ಇವುಗಳ ಮೌಲ್ಯ 75 ಸಾವಿರ ಕೋಟಿ ರೂ. ಇದು ಕೇವಲ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೌಲ್ಯ. ಮಾರುಕಟ್ಟೆ ಮೌಲ್ಯ ಎರಡೂವರೆಯಿಂದ ಮೂರು ಪಟ್ಟು ಹೆಚ್ಚು ಅಂದರೆ ರೂ.1.87 ಲಕ್ಷ ಕೋಟಿಯಿಂದ ರೂ.2.10 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಪರಾರಿಯಾಗಲು ಮರ್ಸಿಡಿಸ್ ಬೆಂಜ್, ಎಸ್‌ಯುವಿ ಕಾರು, ಬೈಕ್‌ ಬಳಸಿದ ಅಮೃತ್‌ಪಾಲ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.