ETV Bharat / business

ಮುಂಬೈ ಬಳಿಕ ದಿಲ್ಲಿಯಲ್ಲಿ ಆ್ಯಪಲ್​ ಮಳಿಗೆ ಆರಂಭ: ಸ್ಟೋರ್​ಗೆ ಚಾಲನೆ ನೀಡಿದ ಟಿಮ್​ ಕುಕ್​ - ಸ್ಟೋರ್​ಗೆ ಚಾಲನೆ ನೀಡಿದ ಟಿಮ್​ ಕುಕ್​

ನಿನ್ನೆಯಷ್ಟೇ ಮುಂಬೈನಲ್ಲಿ ದೇಶದ ಮೊದಲ ಮಳಿಗೆ ಆರಂಭಿಸಿದ್ದ ಆ್ಯಪಲ್​ ದೆಹಲಿಯಲ್ಲಿ ಎರಡನೇ ಸ್ಟೋರ್​ ಆರಂಭಿಸಿದೆ. ಸಾಕೇತ್‌ನ ಸೆಲೆಕ್ಟ್ ಸಿಟಿ ವಾಕ್ ಮಾಲ್‌ನಲ್ಲಿ ಈ ಸ್ಟೋರ್​ ಕಾರ್ಯಾರಂಭಗೊಂಡಿದೆ.

ದಿಲ್ಲಿಯಲ್ಲಿ ಆ್ಯಪಲ್​ ಮಳಿಗೆ ಆರಂಭ
ದಿಲ್ಲಿಯಲ್ಲಿ ಆ್ಯಪಲ್​ ಮಳಿಗೆ ಆರಂಭ
author img

By

Published : Apr 20, 2023, 1:14 PM IST

ನವದೆಹಲಿ: ಜಗತ್ತಿನ ಟೆಕ್​ ದೈತ್ಯ ಸಂಸ್ಥೆ ಆ್ಯಪಲ್​ ಭಾರತದಲ್ಲಿ ತನ್ನ ಎರಡನೇ ಚಿಲ್ಲರೆ ಮಾರಾಟ ಮಳಿಗೆಯನ್ನು ಇಂದು ಆರಂಭಿಸಿತು. ಆ್ಯಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ದಿಲ್ಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‌ನಲ್ಲಿ ಸ್ಟೋರ್ ಉದ್ಘಾಟಿಸಿದರು. ಮಳಿಗೆಯ ಬಾಗಿಲು ತೆರೆಯುವ ಮೂಲಕ ಕುಕ್​ ಅಧಿಕೃತವಾಗಿ ಚಾಲನೆ ನೀಡಿದರು. ನಿನ್ನೆಯಷ್ಟೇ ದೇಶದ ಮೊದಲ ಮಳಿಗೆಯನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಮಾಲ್‌ನಲ್ಲಿ ಮಳಿಗೆ ಆರಂಭವಾಗಿದೆ.

  • What an incredible reception, Delhi, thank you! We’re delighted to welcome our customers to our newest store—Apple Saket! pic.twitter.com/5Jmi79ixzl

    — Tim Cook (@tim_cook) April 20, 2023 " class="align-text-top noRightClick twitterSection" data=" ">

ದಿಲ್ಲಿಯಲ್ಲಿ ಆರಂಭವಾಗಿರುವ ಆ್ಯಪಲ್​ ಮಳಿಗೆ ಪಿಕಪ್ ಸ್ಟೇಷನ್ ಆಗಿದ್ದು, ಇದು ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು ಮತ್ತು ಅನುಕೂಲಕರ ಸಮಯದಲ್ಲಿ ತಮ್ಮ ಸಾಧನಗಳನ್ನು ಸ್ಟೋರ್‌ನಲ್ಲಿ ಸಂಗ್ರಹಿಸಲು ನೆರವು ನೀಡಲಿದೆ. ದೇಶದ 18 ರಾಜ್ಯಗಳ 15 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ 70ಕ್ಕೂ ಹೆಚ್ಚು ನುರಿತ ಸಿಬ್ಬಂದಿಯನ್ನು ಈ ಸ್ಟೋರ್ ಹೊಂದಿದೆ ಎಂದು ಆ್ಯಪಲ್ ಸಂಸ್ಥೆ ಹೇಳಿದೆ.

"ಭಾರತದಲ್ಲಿ ನಮ್ಮ ಎರಡನೇ ಮಳಿಗೆಯಾದ "ಆ್ಯಪಲ್ ಸಾಕೆಟ್" ಅನ್ನು ತೆರೆಯುವುದರೊಂದಿಗೆ ದಿಲ್ಲಿಯಲ್ಲಿನ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆ ನೀಡಲು ಸಂಸ್ಥೆ ಮುಂದಾಗಿದೆ. ಇದು ರೋಮಾಂಚನಕಾರಿ" ಎಂದು ಸಂಸ್ಥೆಯ ರಿಟೇಲ್‌ನ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒಬ್ರಿಯನ್ ಹೇಳಿದರು.

"ನಮ್ಮ ತಂಡದ ಸದಸ್ಯರು ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸಲು ಕಾತರರಾಗಿದ್ದಾರೆ. ಅವರ ಮನಸ್ಸಿಗೆ ಹಿತವಾಗುವ ಹಾಗೆ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು ಸಜ್ಜಾಗಿದ್ದಾರೆ. ಈ ಮೂಲಕ ಸೃಜನಶೀಲತೆ ಹೊರಹಾಕಲು, ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡಲಿದ್ದಾರೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ತಾಂತ್ರಿಕ ಮತ್ತು ಹಾರ್ಡ್‌ವೇರ್​ನ ಬೆಂಬಲಕ್ಕಾಗಿ ಸಂಸ್ಥೆಯ ಪರಿಣಿತರಿಂದ ಸಹಾಯ ಪಡೆಯಲು ಗ್ರಾಹಕರು Apple Saket ನಲ್ಲಿನ ಜೀನಿಯಸ್ ಬಾರ್‌ನಲ್ಲಿ ಕಾಯ್ದಿರಿಸಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.

"ಮಳಿಗೆಯ ಜೀನಿಯಸ್ ಬಾರ್ ವಿಭಾಗ Apple ID ಅನ್ನು ಮರುಪಡೆಯುವುದು, AppleCare ಯೋಜನೆಯನ್ನು ಆಯ್ಕೆ ಮಾಡುವುದು ಅಥವಾ ಚಂದಾದಾರಿಕೆಗಳನ್ನು ಮಾರ್ಪಡಿಸುವುದರಿಂದ ಹಿಡಿದು ಎಲ್ಲದಕ್ಕೂ ಸಹಾಯ ಮಾಡಲಿದೆ. ಇದು ಗ್ರಾಹಕರ ಸ್ನೇಹಿಯಾಗಿ ಕೆಲಸ ಮಾಡಲಿದೆ ಎಂಬುದು ಸಂಸ್ಥೆಯ ಸ್ಪಷ್ಟನೆ.

ಮುಂಬೈನಲ್ಲಿರುವ ಆ್ಯಪಲ್ ಬಿಕೆಸಿ ಸ್ಟೋರ್​ಗೆ ಹೋಲಿಸಿದರೆ ದೆಹಲಿಯ ಸಾಕೇತ್​ನಲ್ಲಿರುವ ಆ್ಯಪಲ್ ಸ್ಟೋರ್ ಅರ್ಧದಷ್ಟಿದೆ. ಸಾಕೇತ್​ನಲ್ಲಿರುವ ಸ್ಟೋರ್ ಗಾತ್ರದಲ್ಲಿ ಚಿಕ್ಕದಾದರೂ ವಿನ್ಯಾಸ ಇತ್ಯಾದಿ ಎಲ್ಲವೂ ಬಹುತೇಕ ಮುಂಬೈ ಸ್ಟೋರ್​ನ ರೀತಿಯಲ್ಲಿದೆ ಎಂದು ಹೇಳಲಾಗುತ್ತಿದೆ.

ಮುಂಬೈನಲ್ಲಿ ಮೊದಲ ಮಳಿಗೆ: ಆ್ಯಪಲ್‌ ಸಂಸ್ಥೆ ದೇಶದ ಮೊದಲ ಚಿಲ್ಲರೆ ಅಂಗಡಿಯನ್ನು ಮಂಗಳವಾರವಷ್ಟೇ ಮುಂಬೈನಲ್ಲಿ ಕಾರ್ಯಾರಂಭ ಮಾಡಿತು. ಸಂಸ್ಥೆಯ ಸಿಇಒ ಟಿಮ್ ಕುಕ್ ಅವರು ಮಳಿಗೆಯ ಬಾಗಿಲನ್ನು ತೆರೆಯುವ ಮೂಲಕ ಅಧಿಕೃತವಾಗಿ ಸ್ಟೋರ್​ಗೆ ಚಾಲನೆ ನೀಡಿದ್ದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಮಾಲ್‌ನಲ್ಲಿ ಈ ಆ್ಯಪಲ್ ಮಳಿಗೆ ತಲೆ ಎತ್ತಿದೆ. ಹೊಸ ಮಳಿಗೆಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಆ್ಯಪಲ್ ಸ್ಟೋರ್ ಬೇರೆ ಸ್ಮಾರ್ಟ್​ಫೋನ್​ಗಳ ಮಳಿಗೆಗಿಂತ ವಿಭಿನ್ನವಾಗಿದೆ. ಇಲ್ಲಿ ಆ್ಯಪಲ್​ನ ಐಫೋನ್, ಐಪ್ಯಾಡ್, ಐಪಾಡ್, ಮ್ಯಾಕ್ ಕಂಪ್ಯೂಟರ್, ಮ್ಯಾಕ್ ಲ್ಯಾಪ್​ಟಾಪ್, ಮ್ಯಾಕ್ ಟಿವಿ ಇತ್ಯಾದಿ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಇಲ್ಲಿ ಸೇಲ್ಸ್ ಜೊತೆಗೆ ಆಫ್ಟರ್ ಸೇಲ್ಸ್ ಅಂಡ್ ಸರ್ವಿಸ್ ಕೂಡ ಇರುತ್ತದೆ.

ಓದಿ: ಮಾಧುರಿ ದೀಕ್ಷಿತ್​ರೊಂದಿಗೆ ವಡಾ ಪಾವ್ ಸವಿದ ಆ್ಯಪಲ್ ಸಿಇಒ ಟಿಮ್ ಕುಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.