ನವದೆಹಲಿ: ದೇಶದಲ್ಲಿ 5ಜಿ ಸೇವೆಗಳನ್ನು ಒದಗಿಸಲು ಟೆಲಿಕಾಂ ಆಪರೇಟರ್‌ಗಳು ವಾರಕ್ಕೆ ಸರಾಸರಿ 2,500 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ದೇವುಸಿನ್ಹಾ ಚೌಹಾಣ್ ಹೇಳಿದ್ದಾರೆ.
ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕ್ರಮವಾಗಿ 17,687 ಮತ್ತು 3,293 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಿವೆ. "ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಅಕ್ಟೋಬರ್ 1, 2022 ರಿಂದ ದೇಶದಲ್ಲಿ 5 ಜಿ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿದ್ದಾರೆ. ನವೆಂಬರ್ 26 ರ ಹೊತ್ತಿಗೆ.. 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 20,980 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಚೌಹಾಣ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಟೆಲಿಕಾಂ ಆಪರೇಟರ್‌ಗಳು ಪ್ರಸ್ತುತ ತಮ್ಮ ಚಂದಾದಾರರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ 5G ಸೇವೆಗಳನ್ನು ಒದಗಿಸುತ್ತಿದ್ದಾರೆ. ಪ್ರಸ್ತುತ 5G ಬಳಕೆದಾರರ ಪ್ರತ್ಯೇಕ ಎಣಿಕೆಗಳನ್ನು TSP ಗಳು ನಿರ್ವಹಿಸುತ್ತಿಲ್ಲ ಎಂದು ಹೇಳಿದರು.
BSNL ಮತ್ತು MTNL ನ 5G ಸೇವೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಂವಹನ ಸಚಿವ ಅಶಿವ್ನಿ ವೈಷ್ಣವ್, BSNL ತನ್ನ 1 ಲಕ್ಷ 4G ಸೈಟ್‌ಗಳ ಅಗತ್ಯತೆಗಾಗಿ ಅಕ್ಟೋಬರ್ 2022 ರಲ್ಲಿ ಟೆಂಡರ್ ಕರೆದಿದೆ. ಇದಲ್ಲದೆ, ಜುಲೈ 2022 ರಲ್ಲಿ ಸ್ಪೆಕ್ಟ್ರಮ್ ಹರಾಜನ್ನು ನಡೆಸುವಾಗ ಸರ್ಕಾರವು ತನ್ನ 5G ಸೇವೆಗಳಿಗಾಗಿ BSNL ಗೆ ಸ್ಪೆಕ್ಟ್ರಮ್ ಅನ್ನು ಕಾಯ್ದಿರಿಸಿದೆ ಎಂದು ವೈಷ್ಣವ್ ಹೇಳಿದರು.
ಓದಿ: Wi-Fi 7 ಕ್ಷಮತೆಯ 20GB ಚಿಪ್ಸೆಟ್ ಬಿಡುಗಡೆ ಮಾಡಿದ ಕ್ವಾಲ್ಕಾಮ್