ETV Bharat / business

ಡಿಜಿಟಲ್​ ಸಾಲದ ವೇಳೆ ಮೈಯೆಲ್ಲಾ ಕಣ್ಣಾಗಿರಲಿ.. ಈ ಕ್ರಮಗಳನ್ನು ಪಾಲಿಸಿದ್ರೆ ನಿಮಗೆ ನೆಮ್ಮದಿ - ಈಟಿವಿ ಭಾರತ ಕನ್ನಡ

ಡಿಜಿಟಲ್​ ಸಾಲ ಪಡೆಯಬೇಕಾದರೆ ಎಚ್ಚರ- ಸಾಲ ಪಡೆಯುವಾಗ ಮುನ್ನೆಚ್ಚರಿಕೆ ಮರೆಯಬೇಡಿ- ತ್ವರಿತವಾಗಿ ಸಿಗುವ ಸಾಲದ ಬಗ್ಗೆ ಜಾಗರೂಕರಾಗಿರಿ

digital loan
ಡಿಜಿಟಲ್​
author img

By

Published : Jan 7, 2023, 1:01 PM IST

ಹೈದರಾಬಾದ್: ಈ ಹಿಂದೆ ನೀವು ಬ್ಯಾಂಕ್​ಗಳಲ್ಲಿ ಸಾಲ ಪಡೆಯುವಾಗ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೀರಿ. ಆದರೆ ಈಗ ಹಾಗಿಲ್ಲ. ನಿಮ್ಮ ಬ್ಯಾಂಕ್​ ಕೆಲಸಗಳನ್ನು ಸುಲಭವಾಗಿಸಲು ಡಿಜಿಟಲ್​ ವ್ಯವಸ್ಥೆಯಿದೆ. ಇದರಿಂದ ಸುಲಭವಾಗಿ ಮತ್ತು ತ್ವರಿತವಾಗಿ ಸಾಲ ಪಡೆಯಬಹುದಾಗಿದೆ.

ಈ ಕಾರಣಕ್ಕಾಗಿ ನೀವು ಡಿಜಿಟಲ್​ ಸಾಧಕ-ಬಾಧಕಗಳನ್ನು ಗಮನಿಸದೆ ಸಾಲವನ್ನು ತೆಗೆದುಕೊಳ್ಳುತ್ತಿದ್ದೀರಿ. ನೀವು ಬ್ಯಾಂಕ್​ನೊಂದಿಗೆ ವ್ಯವಹರಿಸುವಷ್ಟು ಸಮಯವನ್ನು ಡಿಜಿಟಲ್​ ಸಾಲದ ವಿಷಯದಲ್ಲಿ ಪರಿಗಣಿಸಬೇಕಿಲ್ಲ ಮತ್ತು ಯಾವುದೇ ಅಪ್ಲಿಕೇಶನ್ ಅಥವಾ ದಾಖಲೆಗಳ ಅಗತ್ಯವಿಲ್ಲ. ಜೊತೆಗೆ ಸಾಲ ಮಂಜೂರು ಆಗಿದೆಯೇ? ಅಥವಾ ಆಗಿಲ್ಲವೇ? ಎಂದು ತಿಳಿಯಲು ದಿನಗಳವರೆಗೆ ಕಾಯುವ ಪ್ರಮೇಯವಿಲ್ಲ. ಹಾಗಾಗಿ ನೀವು ಡಿಜಿಟಲ್​ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸಿದ್ದೀರಿ.

ನೀವು ಎಷ್ಟು ಸಾಲವನ್ನು ಪಡೆಯಲು ಬಯಸುತ್ತೀರಿ ಎಂಬುದು ನಿಮಗೆ ಮುಂಚಿತವಾಗಿ ತಿಳಿದಿರುತ್ತದೆ. ಈಗಿನ ಫಿನ್​ಟೆಕ್​ ಕಂಪನಿಗಳು ಸಾಲ ನೀಡುವಲ್ಲಿ ಪೈಪೋಟಿ ನಡೆಸುತ್ತಿವೆ. 'ಡಿಜಿಟಲ್​ ಲೆಂಡಿಂಗ್​' ಮೂಲಕ ಆನ್​ಲೈನ್​ ವೆಬ್​ಸೈಟ್​ ಅಥವಾ ಅಪ್ಲಿಕೇಶನ್​ಗಳ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಫಿನ್​ಟೆಕ್​ ಸ್ಟಾರ್ಟ್​ಅಪ್​ಗಳು ಮುಖ್ಯವಾಗಿ ಹಣಗಳನ್ನು ಸಾಲಗಾರರ ಖಾತೆಗಳಿಗೆ ನಿಮಿಷಗಳಲ್ಲಿ ಜಮಾ ಮಾಡುತ್ತದೆ. ಆದರೆ ನೀವು ತರಾತುರಿಯಾಗಿ (ಅವಸರ) ಅಂತಹ ಸಾಲಗಳನ್ನು ಪಡೆದಲ್ಲಿ ಮುಂದಿನ ದಿನಗಳಲ್ಲಿ ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಸಾಲ ಪ್ರಕ್ರಿಯೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.. ಈಗಾಗಲೇ ಸಾಲದ ಹೊರೆಯಿಂದ ಕಿರುಕುಳ ಅನುಭವಿಸುತ್ತಿರುವ ಸಾಲಗಾರರ ಕುರಿತಾದ ವರದಿಯನ್ನು ಆಗೊಮ್ಮೆ ಈಗೊಮ್ಮೆ ಕೇಳುತ್ತಲೇ ಇರುತ್ತೇವೆ. ಹಾಗಾಗಿಯೇ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮೊದಲು ಎಷ್ಟು ಸಾಲ ಬೇಕು ಎಂಬುದನ್ನು ನಿರ್ಣಯಿಸಬೇಕು. ನಂತರ ತೆಗೆದುಕೊಳ್ಳಬೇಕಾದ ಸಾಲದ ಪ್ರಮಾಣವನ್ನು ನಿರ್ಧರಿಸಬೇಕು. ಸಾಲವನ್ನು ತೆಗೆದುಕೊಳ್ಳುವಾಗ ಸಂಸ್ಕರಣಾ ಶುಲ್ಕ, ಪೂರ್ವ ಪಾವತಿ ಮತ್ತು ವಿಳಂಬ ಪಾವತಿ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು. ಒಂದು ವೇಳೆ ಈ ವೆಚ್ಚಗಳು ಹೆಚ್ಚಾದಲ್ಲಿ ನಿಮ್ಮ ಸಾಲದ ಮೊತ್ತವು ಕಡಿಮೆಯಾಗುತ್ತದೆ. ಈ ಬಗ್ಗೆ ಸಾಲ ತೆಗೆದುಕೊಳ್ಳುವವರು ಎಚ್ಚರ ವಹಿಸಬೇಕಾಗುತ್ತದೆ.

ಇದಲ್ಲದೇ ವೈಯಕ್ತಿಕ ಸಾಲ ಪಡೆಯುವಾಗ ನೆನಪಿಟ್ಟುಕೊಳ್ಳಲೇಬೇಕಾದ ಪ್ರಮುಖ ವಿಷಯವೆಂದರೆ, ಕಂತುಗಳು ನಿಮ್ಮ ಒಟ್ಟು ಆದಾಯದ 40 ಪ್ರತಿಶತಕ್ಕಿಂತ ಹೆಚ್ಚಿರಬಾರದು. ಪಾವತಿಗಳೇ ಹೆಚ್ಚಾದಲ್ಲಿ ಅದು ನಿಮ್ಮ ಹಣಕಾಸಿನ ಗುರಿಯನ್ನೇ ಬದಲಾಯಿಸಬೇಕಾಗುತ್ತದೆ. ಅಂದರೆ ನಿಮಗೆ ಸಾಲದ ಹಣ ಕಡಿಮೆ ಸಿಗುತ್ತದೆ.

ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸುವ ಮೊದಲು, ನೀವು ಉತ್ತಮ ಕ್ರೆಡಿಟ್​ ಸ್ಕೋರ್​ ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಕ್ರೆಡಿಟ್​ ಸ್ಕೋರ್​ ಎಂಬುದು ಅಸ್ತಿತ್ವದಲ್ಲಿರುವ ಅಥವಾ ಹಿಂದಿನ ಸಾಲಗಳಲ್ಲಿ ನಿಮ್ಮ ಮರುಪಾವತಿ ದಾಖಲೆಯನ್ನು ಆಧರಿಸಿದೆ. ನಿಮ್ಮ ಕ್ರೆಡಿಟ್​ ಸ್ಕೋರ್​ 750 ಕ್ಕಿಂತ ಹೆಚ್ಚಿರಬೇಕು. ಇದಕ್ಕಿಂತ ಕಡಿಮೆ ಸ್ಕೋರ್​ ಇದ್ದಲ್ಲಿ ಸಾಲ ಪಡೆಯಲು ಕಷ್ಟವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಾಲ ನೀಡುವ ಸಂಸ್ಥೆಗಳು ಹೆಚ್ಚಿನ ಬಡ್ಡಿ ದರವನ್ನು ವಿಧಿಸುತ್ತವೆ. ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸುವುದು ಮತ್ತು ಕಡಿಮೆ ಮೊತ್ತದೊಂದಿಗೆ ಕ್ರೆಡಿಟ್​ ಕಾರ್ಡ್​ ಅನ್ನು ಬಳಸುವುದರಿಂದ ಸ್ಕೋರ್​ ಹೆಚ್ಚಿಸಬಹುದು.

ಸಾಲ ತೆಗೆದುಕೊಳ್ಳುವ ಮುನ್ನ ಎಚ್ಚರ: ಆದರೆ ನೀವು ಸಾಲಗಾರನನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಿ. ಇತ್ತೀಚಿನ ಕೆಲವು ಕಂಪನಿಗಳು ಹಗರಣದಲ್ಲಿ ಸಿಲುಕಿವೆ. ನಾವು ನಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿದಾಗ ಅಂತಹ ಸಂಸ್ಥೆಗಳು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಅಥವಾ ವೈಯಕ್ತಿಕ ದಾಖಲೆಯಲ್ಲಿರುವ ನಮ್ಮ ಸಹಿಯನ್ನು ಬಳಸಿಕೊಂಡು ವಂಚನೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಮುಂಚಿತವಾಗಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಸುರಕ್ಷಿತವಾಗಿ ಸಾಲ ಪಡೆಯಲು ಆರ್​ಬಿಐ ಅನುಮೋದಿತ ಸಂಸ್ಥೆಗಳನ್ನು ಆಯ್ದುಕೊಳ್ಳಿ.

ಇದನ್ನೂ ಓದಿ: ಕೆಲವು ತೆರಿಗೆ ಉಳಿತಾಯ ಯೋಜನೆಗಳು ನಿಮ್ಮ ಹಣಕಾಸು ಯೋಜನೆ ಹಳಿತಪ್ಪಿಸುತ್ತವೆಯೇ?.. ಇಲ್ಲಿವೆ ಕೆಲವು ಟಿಪ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.