ಹೈದರಾಬಾದ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ 2022ರ ಕ್ಲರ್ಕ್ ಹುದ್ದೆ ಪರೀಕ್ಷೆಯ ಪ್ರವೇಶ ಪತ್ರಗಳು ಇಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿವೆ. sbi.co.in ನಲ್ಲಿ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಎಸ್‌ಬಿಐ ಕ್ಲರ್ಕ್ ಪ್ರವೇಶ ಪತ್ರ 2022 ಅನ್ನು ಡೌನ್‌ಲೋಡ್ ಮಾಡಬಹುದು. ಎಸ್‌ಬಿಐ ಕ್ಲರ್ಕ್ 2022 ರ ಪೂರ್ವಭಾವಿ ಪರೀಕ್ಷೆಯನ್ನು ನವೆಂಬರ್ 2022 ರಲ್ಲಿ ನಡೆಸಲಾಗುವುದು. ಎಸ್‌ಬಿಐ ಕ್ಲರ್ಕ್ ಪ್ರಿಲಿಮಿನರಿ ಪರೀಕ್ಷೆಯ ನಿಖರ ದಿನಾಂಕವನ್ನು ಪರೀಕ್ಷಾ ಅಧಿಕಾರಿಗಳು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
ಎಸ್‌ಬಿಐ ಕ್ಲರ್ಕ್ ಪ್ರವೇಶ ಪತ್ರ 2022 ಡೌನ್‌ಲೋಡ್ ಮಾಡುವುದು ಹೇಗೆ:
- ಎಸ್ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - sbi.co.in
- ಮುಖಪುಟದಲ್ಲಿ ಎಸ್‌ಬಿಐ ಕ್ಲರ್ಕ್ ಅಡ್ಮಿಟ್ ಕಾರ್ಡ್ 2022 ಲಿಂಕ್ ಅನ್ನು ನೋಡಿ
- ನಿಮ್ಮ ಎಸ್‌ಬಿಐ ಕ್ಲರ್ಕ್ 2022 ಅಪ್ಲಿಕೇಶನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಇತರ ರುಜುವಾತುಗಳನ್ನು ನಮೂದಿಸಿ
- ಲಾಗಿನ್ ಮಾಡಿ ನಿಮ್ಮ ಎಸ್‌ಬಿಐ ಕ್ಲರ್ಕ್ 2022 ಪ್ರವೇಶ ಕಾರ್ಡ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
- ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಜೂನಿಯರ್ ಅಸೋಸಿಯೇಟ್ಸ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ಹುದ್ದೆಗಾಗಿ 5,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಎಸ್‌ಬಿಐ ಕ್ಲರ್ಕ್ ನೇಮಕಾತಿ ಪರೀಕ್ಷೆ 2022 ಅನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: ಎಟಿಎಂ ನಗದು ವಿತ್ಡ್ರಾ ನಿಯಮ ಬದಲಾವಣೆ: ಹೊಸ ನಿಯಮವೇನು ಗೊತ್ತೇ?