ETV Bharat / business

ಗ್ರಾಹಕರಿಗೆ ಭರ್ಜರಿ ಗಿಫ್ಟ್​ ನೀಡಿದ ಅಂಬಾನಿ: ದೀಪಾವಳಿಗೆ ಸಿಗಲಿದೆ ಕೈಗೆಟಕುವ ದರದಲ್ಲಿ 5G ಸೇವೆ

ದೀಪಾವಳಿ ಹಬ್ಬಕ್ಕೆ ದೇಶದ ಪ್ರಮುಖ ನಗರಗಳಲ್ಲಿ ರಿಲಯನ್ಸ್ ಜಿಯೋ 5G ಲಾಂಚ್​​ ಮಾಡಲಾಗುವುದು ಎಂದು ಮುಖೇಶ್ ಅಂಬಾನಿ ಘೋಷಿಸಿದ್ದಾರೆ.

Reliance Jio
Reliance Jio
author img

By

Published : Aug 29, 2022, 3:09 PM IST

Updated : Aug 29, 2022, 3:37 PM IST

ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ಈಗಾಗಲೇ 5G ತರಂಗಾಂತರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ 7,864 ಕೋಟಿ ರೂಪಾಯಿ ವ್ಯಯಿಸಿ ಹೆಚ್ಚಿನ ಸ್ಪೆಕ್ಟ್ರಮ್‌ ಖರೀದಿಸಿದೆ. ಇದರ ಬೆನ್ನಲ್ಲೇ ಇಂದು ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ.

ರಿಲಯನ್ಸ್​ ಇಂಡಸ್ಟ್ರೀಸ್​​ನ 45ನೇ ವಾರ್ಷಿಕ ಸಭೆಯ ಉದ್ದೇಶಿಸಿ ಮಾತನಾಡಿರುವ ಮುಖೇಶ್ ಅಂಬಾನಿ, ಗ್ರಾಹಕರಿಗೆ ದೀಪಾವಳಿ ಗಿಫ್ಟ್​ ನೀಡಿದ್ದಾರೆ. ವಿಶ್ವದ ಅತ್ಯಂತ ವೇಗದ 5ಜಿ ರೋಲ್​​ಔಟ್‌ಗೆ ಸಿದ್ಧಗೊಂಡಿದೆ. ದೀಪಾವಳಿ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಮೆಟ್ರೋ ನಗರಗಳು ಒಳಗೊಂಡಂತೆ ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು.

ಗ್ರಾಹಕರಿಗೆ ಭರ್ಜರಿ ಗಿಫ್ಟ್​ ನೀಡಿದ ಅಂಬಾನಿ

ಡಿಸೆಂಬರ್ 2023 ರ ಸಂದರ್ಭಕ್ಕೆ ಭಾರತದ ಪ್ರತೀ ಪಟ್ಟಣ, ತಾಲೂಕು ಮತ್ತು ತಹಸಿಲ್‌ಗಳಿಗೆ ಜಿಯೋ 5G ಸೇವೆ ತಲುಪಿಸಲು ನಿರ್ಧರಿಸಲಾಗಿದೆ ಎಂದು ಅವರು ಇದೇ ವೇಳೆ ಹೇಳಿದರು. ಜಿಯೋ 5ಜಿ ಸೇವೆಯನ್ನು ಪ್ರತಿಯೊಬ್ಬರಿಗೂ, ಪ್ರತಿ ಸ್ಥಳಕ್ಕೂ ಹಾಗೂ ಅತ್ಯುನ್ನತ ಗುಣಮಟ್ಟದಲ್ಲಿ ನೀಡಬೇಕೆಂಬ ಮಹತ್ವಾಕಾಂಕ್ಷೆ ನಮ್ಮದು. ಅದಕ್ಕಾಗಿ ಕೈಗೆಟಕುವ ದರದಲ್ಲಿ ನೀಡಲಾಗುವುದು ಎಂದು ಅವರು ಪ್ರಕಟಿಸಿದರು. ನೆಟ್​​ವರ್ಕ್​​​ನಲ್ಲಿ ಚೀನಾ ಮತ್ತು ಯುಎಸ್‌ಗಿಂತಲೂ ಮುಂದಿರುವ ನಾವು, ಡೇಟಾ ಚಾಲಿತ ಆರ್ಥಿಕತೆ ಮಾಡಲು ಬದ್ಧರಾಗಿದ್ದೇವೆ ಎಂದೂ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 5G ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಮುಕ್ತಾಯ: ರಿಲಯನ್ಸ್ ಜಿಯೋದಿಂದ ಗರಿಷ್ಠ ಬಿಡ್‌

ದೇಶದ ಮೊಟ್ಟಮೊದಲ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹1.50 ಲಕ್ಷ ಕೋಟಿ ಆದಾಯ ಹರಿದು ಬಂದಿದೆ. ಹೈ ಸ್ಪೀಡ್ ಇಂಟರ್ನೆಟ್‌ಗಾಗಿ ನೀಡಲಾದ ಈ ಸ್ಪೆಕ್ಟ್ರಮ್‌ನ ಹರಾಜು ಮೊತ್ತ ಕಳೆದ ವರ್ಷ ಮಾರಾಟವಾದ 4ಜಿ ಸ್ಪೆಕ್ಟ್ರಮ್‌ ಹರಾಜಿಗಿಂತ ದುಪ್ಪಟ್ಟಾಗಿದೆ.

  • Reliance Jio has prepared world’s fastest 5G rollout plan. By Diwali 2022 we'll launch Jio 5G across multiple key cities, incl metro cities of Delhi, Mumbai, Chennai & Kolkata. By Dec 2023, we will deliver Jio 5G to every town, taluka & tehsil of India: Mukesh Ambani, CMD, RIL pic.twitter.com/kOkvzFueq5

    — ANI (@ANI) August 29, 2022 " class="align-text-top noRightClick twitterSection" data=" ">

ಜಿಯೋ 88,078 ಕೋಟಿ ರೂಪಾಯಿ ಮೌಲ್ಯದ ಸ್ಪೆಕ್ಟ್ರಂ ಖರೀದಿಸಿ ಅಗ್ರ ಬಿಡ್​​​ದಾರನಾಗಿ ಹೊರಹೊಮ್ಮಿದೆ. ರಿಲಯನ್ಸ್ ಜಿಯೋ 24,740 MHz, ವೊಡಾಫೋನ್ ಐಡಿಯಾ 1800 MHz, ಭಾರ್ತಿ ಏರ್‌ಟೆಲ್ 19,867 MHz ತರಂಗಾಂತರ ಕೊಂಡುಕೊಂಡಿವೆ. ಜಿಯೋ 5ಜಿ ನೆಟ್​​ವರ್ಕ್​ ಸ್ಥಾಪನೆಗೆ ರಿಲಿಯನ್ಸ್​​ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ರಿಲಿಯನ್ಸ್​ ಜಿಯೋ ಅಧ್ಯಕ್ಷ ಆಕಾಶ್​ ಅಂಬಾನಿ ಮಾಹಿತಿ ನೀಡಿದ್ದಾರೆ.

Last Updated : Aug 29, 2022, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.