ETV Bharat / business

ಆರ್‌ಬಿಐನಿಂದ ಹಣಕಾಸು ನೀತಿ ಪ್ರಕಟ: ರೆಪೊ ದರದಲ್ಲಿ ಯಥಾಸ್ಥಿತಿ, ಜಿಡಿಪಿ ಬೆಳವಣಿಗೆ ಶೇ 7, ಹಣದುಬ್ಬರ ಶೇ 5.4 ಹೆಚ್ಚಳ - ಚಿಲ್ಲರೆ ಹಣದುಬ್ಬರ

ಭಾರತೀಯ ರಿಸರ್ವ್ ಬ್ಯಾಂಕ್ ಇಂದು (ಶುಕ್ರವಾರ) ಹಣಕಾಸು ನೀತಿಯನ್ನು ಪ್ರಕಟಿಸಿದೆ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದಕೊಂಡಿದೆ. ರೆಪೊ ದರ ಶೇ 6.5 ಇದೆ. ಜಿಡಿಪಿ ಬೆಳವಣಿಗೆ ಶೇ 7ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.

RBI to announce monetary policy today
ಇಂದು ಆರ್‌ಬಿಐನಿಂದ ಪ್ರಕಟವಾಗಲಿರುವ ಹಣಕಾಸು ನೀತಿ: ರೆಪೊ ದರದಲ್ಲಿ ಯಥಾಸ್ಥಿತಿ ಸಾಧ್ಯತೆ
author img

By ETV Bharat Karnataka Team

Published : Dec 8, 2023, 10:11 AM IST

Updated : Dec 8, 2023, 10:57 AM IST

ನವದೆಹಲಿ: ಬಡ್ಡಿದರಗಳು ಹೆಚ್ಚಾಗುತ್ತವೆಯೋ ಅಥವಾ ಕಡಿಮೆಯಾಗುತ್ತವೆಯೋ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಲಭಿಸಿದೆ. ಮೂರು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್​ನಿಂದ(ಆರ್‌ಬಿಐ) ನಡೆಯುತ್ತಿರುವ ಸುದೀರ್ಘ ಹಣಕಾಸು ನೀತಿ ಸಮಿತಿ ಸಭೆ ಇಂದು (ಶುಕ್ರವಾರ) ಕೊನೆಗೊಂಡಿದೆ. ಸಭೆಯ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಣಕಾಸು ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದಕೊಳ್ಳಲಾಗಿದೆ. ರೆಪೊ ದರ ಶೇ 6.5 ಇದೆ. ಜಿಡಿಪಿ ಬೆಳವಣಿಗೆ ಶೇ 7ರಷ್ಟು ಆಗಲಿದೆ ಅಂದಾಜಿಸಿದ್ದಾರೆ. ಹಣದುಬ್ಬರ ಶೇ 5.4ರಷ್ಟಿದೆ ಎಂದು ಆರ್​​ಬಿಐ ಹೇಳಿದೆ.

ಕಳೆದ ನಾಲ್ಕು ನೀತಿಗಳಿಂದ ಆರ್‌ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ ಅಂಕಿ - ಅಂಶಗಳು ನಿರೀಕ್ಷೆಗಿಂತ ಉತ್ತಮವಾಗಿವೆ. ಈ ಹಿಂದೆ ಹಣದುಬ್ಬರ ದರದಲ್ಲಿ ಮೃದುತ್ವ ಕಾಯ್ದು ಕೊಳ್ಳಲಾಗಿದೆ. ಸದ್ಯ ಹಣದುಬ್ಬರವನ್ನು ಶೇ 5.4ಕ್ಕೆ ಹೆಚ್ಚಿಸಲಾಗಿದೆ. ಈ ಬಾರಿಯೂ ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ರೆಪೊ ದರವನ್ನು ಕೊನೆಯದಾಗಿ ಇದೇ ವರ್ಷದ ಫೆಬ್ರವರಿಯಲ್ಲಿ ಹೆಚ್ಚಳ ಮಾಡಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಕೊನೆಯದಾಗಿ ರೆಪೋ ದರವನ್ನು ಶೇಕಡಾ 6.5ಕ್ಕೆ ಏರಿಕೆ ಮಾಡಿತ್ತು. ಆಹಾರ ಪದಾರ್ಥಗಳ ಕಡಿಮೆ ಬೆಲೆಯಿಂದಾಗಿ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 4.87 ಕ್ಕೆ ಇಳಿಕೆ ಕಂಡಿತ್ತು. ಅದರ ಅಕ್ಟೋಬರ್ ವಿತ್ತೀಯ ನೀತಿ ಪರಾಮರ್ಶೆಯಲ್ಲಿ, ಎಂಪಿಸಿ 2023-24ರಲ್ಲಿ ಚಿಲ್ಲರೆ ಹಣದುಬ್ಬರ ಶೇ 5.4ಕ್ಕೆ ಏರಿಕೆ ಕಂಡಿದೆ ಎಂದು ಹೇಳಿದೆ. ಚಿಲ್ಲರೆ ಹಣದುಬ್ಬರವನ್ನು ಶೇಕಡಾ ಎರಡರಷ್ಟು ವ್ಯತ್ಯಾಸದೊಂದಿಗೆ ಶೇಕಡಾ 4ರಲ್ಲಿ ಇರಿಸಲು ಸರಕಾರವು ಆರ್​ಬಿಐಗೆ ಜವಾಬ್ದಾರಿ ನೀಡಿದೆ.

ತರಕಾರಿಗಳ ಬೆಲೆಯಲ್ಲಿನ ಕುಸಿತವಾಗಿದ್ದರಿಂದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 4.87ಕ್ಕೆ ಇಳಿಕೆಯಾಗಿತ್ತು. ಐದು ತಿಂಗಳಲ್ಲೇ ಇದು ಕನಿಷ್ಠಕ್ಕೆ ಇಳಿಕೆ ಕಂಡಿತ್ತು. ಸೆಪ್ಟೆಂಬರ್‌ನಲ್ಲಿ ಶೇ 5.02ರಷ್ಟಿತ್ತು. ಆಹಾರ ಪದಾರ್ಥಗಳ ಹಣದುಬ್ಬರವು ಶೇ 6.62 ರಿಂದ 6.61ಕ್ಕೆ ಇಳಿದಿತ್ತು. ವಿತ್ತೀಯ ನೀತಿಯಲ್ಲಿ ಬಡ್ಡಿದರಗಳನ್ನು ನಿರ್ಧರಿಸುವಾಗ ರಿಸರ್ವ್ ಬ್ಯಾಂಕ್ ಚಿಲ್ಲರೆ ಹಣದುಬ್ಬರ ದರವನ್ನು ಗಣನೆಗೆ ತೆಗೆದುಕೊಳ್ಳಲಿದೆ.

ಈ ಹಿಂದೆ ಆರು ಸಲ ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ ಇತ್ತೀಚಿನ ತ್ರೈ ಮಾಸಿಕಗಳಲ್ಲಿ ಯಾವುದೇ ಬದಲಾವಣೆ ಮಾಡಲು ಆರ್​ಬಿಐ ಮುಂದಾಗಿಲ್ಲ. 7ನೇ ಬಾರಿಗೆ ಆರ್‌ಬಿಐ ರೆಪೋ ದರವನ್ನು 25 ಬಿಪಿಎಸ್ ಏರಿಕೆ ಮಾಡಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ, ಭಾರತೀಯ ಕೇಂದ್ರ ಬ್ಯಾಂಕ್​ ರೆಪೊ ರೇಟ್​ನಲ್ಲಿ ಯಾವುದೇ ಬದಲಾವಣೆ ಮಾಡಲು ಮುಂದಾಗಿಲ್ಲ. ಈಗ ಸತತವಾಗಿ ಐದನೇ ಬಾರಿ ರೆಪೊ ದರವನ್ನು ಸ್ಥಿರವಾಗಿರಿಸುವ ಮೂಲಕ ಹೂಡಿಕೆದಾರರು ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇದನ್ನೂ ಓದಿ: ಫೋಬ್ಸ್​ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರು: ಸಚಿವೆ ನಿರ್ಮಲಾಗೆ ಸತತ 5ನೇ ವರ್ಷವೂ ಸ್ಥಾನ

Last Updated : Dec 8, 2023, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.