ನವದೆಹಲಿ: ಮಳೆ ಕೊರತೆ ಮತ್ತು ಭತ್ತದ ಬಿತ್ತನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅಕ್ಕಿ, ಬೇಳೆಕಾಳುಗಳ ಬೆಲೆ ದುಬಾರಿಯಾಗಲಿದೆ. ಗ್ರಾಹಕ ಸೂಚ್ಯಂಕ ದರದಲ್ಲಿ ಅಕ್ಕಿ ಶೇ 4.4 ಮತ್ತು ಬೇಳೆಕಾಳುಗಳು ಶೇ 6 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮೋತಿಲಾಲ್ ಒಸ್ವಾಲ್ ಫೈನಾನ್ಸ್ ವರದಿ ತಿಳಿಸಿದೆ.
ಮಾನ್ಸೂನ್ ಕೊರತೆ ಹಲವು ರಾಜ್ಯಗಳಲ್ಲಿ ಅಕ್ಕಿ ಇಳುವರಿ ತಗ್ಗಿಸಿದೆ. ಉತ್ತರ ಪ್ರದೇಶದಲ್ಲಿ ಮಳೆ ಸಾಮಾನ್ಯಕ್ಕಿಂತ ಶೇ 14ರಷ್ಟು ಕಡಿಮೆಯಾದರೆ, ಕರ್ನಾಟಕದಲ್ಲಿ ಶೇ 10ರಷ್ಟು, ಆಂಧ್ರಪ್ರದೇಶದಲ್ಲಿ ಶೇ 9ರಷ್ಟು, ಜಾರ್ಖಂಡ್ನಲ್ಲಿ ಶೇ 37ರಷ್ಟು ಕುಂಠಿತವಾಗಿದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಅಧಿಕ ಮಳೆಯಿಂದಾಗಿ ಕ್ರಮವಾಗಿ ಶೇ 38 ಮತ್ತು ಶೇ 39ರಷ್ಟು ಬಿತ್ತನೆ ಕಡಿಮೆಯಾಗಿದೆ. ಕಡಿಮೆ ನೀರಾವರಿ ಪ್ರಮುಖ ರಾಜ್ಯಗಳಲ್ಲಿ ಬೇಳೆಕಾಳು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಬೆಳೆಗಳ ಏರಿಳಿತವೂ ಕಳೆದ ಐದು ತಿಂಗಳಿನಿಂದ ದ್ವಿಗುಣಗೊಂಡಿದೆ ಎಂದು ವರದಿ ಹೇಳುತ್ತಿದೆ.
ಎಲ್ಲೆಲ್ಲಿ ಮಳೆ ಕುಂಠಿತ?: ಖಾರಿಫ್ ಬಿತ್ತನೆಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 0.8ರಷ್ಟು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಭತ್ತದ ಕೃಷಿ ಶೇ 4.9ರಷ್ಟು ಹೆಚ್ಚಿದೆ. ಆದಾಗ್ಯೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಬೇಳೆಕಾಳು ಶೇ 7.9ರಷ್ಟು ಕಡಿಮೆ ಇದೆ. ಸೆಣಬು, ಹತ್ತಿ ಮತ್ತು ಎಣ್ಣೆಕಾಳುಗಳ ಉತ್ಪಾದನೆಯೂ ಕಡಿಮೆಯಾಗಿದೆ. ಒರಟು ಧಾನ್ಯಗಳು ಮತ್ತು ಕಬ್ಬಿನ ಬಿತ್ತನೆ ಸಾಮಾನ್ಯದಂತೆ ಮುಂದುವರೆದಿದೆ.
ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಸಾಮಾನ್ಯ ಮಳೆಯಿಂದಾಗಿ ಉತ್ತಮ ಭತ್ತದ ಬಿತ್ತನೆ ನಡೆಸಲಾಗಿದೆ. ಆದಾಗ್ಯೂ ಮಳೆ ಕೊರತೆಯು ಪ್ರಮುಖ ಅಕ್ಕಿ ಬೆಳೆಯುವ ರಾಜ್ಯದಲ್ಲಿ ಒಟ್ಟಾರೆ ಉತ್ಪಾದನೆಯ ಮೇಲೆ ಶೇ 56ರಷ್ಟು ಪರಿಣಾಮ ಬೀರಲಿದೆ. ಪಶ್ಚಿಮ ಬಂಗಾಳದಲ್ಲಿ ಶೇ 14ರಷ್ಟು, ಉತ್ತರ ಪ್ರದೇಶದಲ್ಲಿ ಶೇ 14 ಮತ್ತು ಆಂಧ್ರ ಪ್ರದೇಶದಲ್ಲಿ ಶೇ 9ರಷ್ಟು, ಛತ್ತೀಸ್‌ಗಢದಲ್ಲಿ ಶೇ 11ರಷ್ಟು, ಬಿಹಾರದಲ್ಲಿ ಶೇ 28ರಷ್ಟು, ಒಡಿಶಾದಲ್ಲಿ ಶೇ 6ರಷ್ಟು ಮತ್ತು ಅಸ್ಸಾಂನಲ್ಲಿ ಶೇ 17ರಷ್ಟು ಉತ್ಪಾದನೆ ಕುಂಠಿತವಾಗಿರುವುದು ಕಳವಳಕಾರಿಯಾಗಿದೆ. ಹೆಚ್ಚಿನ ನೀರಾವರಿ ಹೊಂದಿರುವ ಪ್ರದೇಶಗಳಾದ ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾನ್ಸೂನ್ ಕೊರತೆ ಕಡಿಮೆ ಪ್ರಭಾವ ಬೀರಿದೆ.
ಹೀಗಿದೆ ಮಳೆ ಪ್ರಮಾಣ..: ಮಳೆಯು ಜುಲೈ ಅವಧಿಯಲ್ಲಿ ಶೇ 5ರಷ್ಟು ಹೆಚ್ಚುವರಿಯಾಗಿ ಸುರಿದರೂ ಆಗಸ್ಟ್ನಲ್ಲಿ ಕ್ಷೀಣಿಸಿದೆ. ಆಗಸ್ಟ್ 12ನೇ ತಾರೀಖಿನವರೆಗೆ ಶೇ 2ರಷ್ಟು ಕೊರತೆ ಉಂಟಾಗಿದೆ. ಆಗಸ್ಟ್ನಲ್ಲಿ ಮಾನ್ಸೂನ್ ಇಲ್ಲಿಯವರೆಗೂ ಕೊರತೆ ಕಂಡಿದ್ದು, ದೀರ್ಘಾವಧಿಯ ಸರಾಸರಿಗೆ ಹೋಲಿಕೆ ಮಾಡಿದಾಗ ಶೇ 30ರಷ್ಟು ಕೊರತೆ ಉಂಟುಮಾಡಿದೆ. ಅದರಲ್ಲೂ ದಕ್ಷಿಣ ಭಾರತದ ಪ್ರದೇಶದಲ್ಲಿ ಇದು ಬರಕ್ಕೆ ಕಾರಣವಾಗಿವೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: MSP: 9 ವರ್ಷಗಳಲ್ಲಿ ಜೋಳ, ಸಜ್ಜೆ, ರಾಗಿಯ ಕನಿಷ್ಠ ಬೆಂಬಲ ಬೆಲೆ ಶೇ 100ರಿಂದ 150ರಷ್ಟು ಹೆಚ್ಚಳ