ಬೆಂಗಳೂರು: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಇಂದು ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಅಂತಾ ತಿಳೀಯೋಣ..
ಬೆಂಗಳೂರು ಪೆಟ್ರೋಲ್, ಡೀಸೆಲ್ ದರಗಳು ಯಾವುದೇ ಬದಲಾವಣೆ ಆಗಿಲ್ಲ. ಪೆಟ್ರೋಲ್- 101.96, ಡೀಸೆಲ್- 87.91 ಮತ್ತು ಸ್ಪೀಡ್ ಪೆಟ್ರೋಲ್ ದರ 104.90 ರೂ. ಇದೆ. ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ಯಥಾಸ್ಥಿತಿಯಲ್ಲಿದೆ, ಪೆಟ್ರೋಲ್-103.26ರೂ., ಡೀಸೆಲ್-89.04ರೂ. ಇದೆ. ದಾವಣಗೆರೆಯಲ್ಲಿಯೂ ಪೆಟ್ರೋಲ್, ಡಿಸೇಲ್ ದರ ಯಥಾಸ್ಥಿತಿಯಲ್ಲಿದೆ. ಪೆಟ್ರೋಲ್-103.60ರೂ., ಡೀಸೆಲ್-89.50ರೂ. ಇದೆ. ಮಂಗಳೂರಿನಲ್ಲಿ ಪೆಟ್ರೋಲ್-101.48 (35 ಪೈಸೆ ಹೆಚ್ಚಳ)ರೂ., ಡೀಸೆಲ್- 87.44 (31 ಪೈಸೆ ಹೆಚ್ಚಳ)ರೂ. ಇದೆ. ಹುಬ್ಬಳ್ಳಿಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಲ್ಲಿ ಪೆಟ್ರೋಲ್-101.65ರೂ., ಡೀಸೆಲ್ 87.65ರೂ.ಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಅಗ್ನಿಪಥ್ ಉದ್ಯಮಕ್ಕೆ ಶಿಸ್ತುಬದ್ಧ, ತರಬೇತಿ ಪಡೆದ ಉದ್ಯೋಗಿಗಳನ್ನು ನೀಡುತ್ತದೆ: ಟಾಟಾ ಸನ್ಸ್ ಅಧ್ಯಕ್ಷ
ದೆಹಲಿಯಲ್ಲಿ ಪೆಟ್ರೋಲ್-96.72ರೂ., ಡೀಸೆಲ್-89.62ರೂ. ಇದೆ. ಲಕ್ನೋದಲ್ಲಿ ಪೆಟ್ರೋಲ್-96.57ರೂ., ಡೀಸೆಲ್-89.76ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್-106.03ರೂ., ಡೀಸೆಲ್-92.76ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್-102.63ರೂ., ಡೀಸೆಲ್-94.24ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್-111.35ರೂ., ಡೀಸೆಲ್-92.28ರೂ. ಇದೆ.