ನವದೆಹಲಿ: ಫೇಸ್‌ಬುಕ್ ವಾಟ್ಸ್ಆ್ಯಪ್ಗಳ ಒಡೆತನ ಹೊಂದಿರುವ ಮೆಟಾ ಕಂಪನಿಯ ಭಾರತದ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದಿನ ಮುಖ್ಯಸ್ಥರಾಗಿದ್ದ ಅಜಿತ್ ಮೋಹನ್ ಅವರು ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಜಾಗವನ್ನು ದೇವನಾಥನ್ ತುಂಬಲಿದ್ದಾರೆ.
ವಾಟ್ಸಾಪ್‌ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಭಾರತದಲ್ಲಿ ಮೆಟಾ ಸಂಸ್ಥೆಯ ಸಾರ್ವಜನಿಕ ನೀತಿ ನಿರ್ದೇಶಕ ರಾಜೀವ್ ಅಗರ್ವಾಲ್ ಕೂಡ ಇತ್ತೀಚೆಗೆ ಕಂಪನಿಯಿಂದ ಹೊರಬಂದಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಟೆಕ್ ಕಂಪನಿಗಳನ್ನು ನಿಯಂತ್ರಿಸುವ ಕಾನೂನುಗಳನ್ನು ಬಿಗಿ ಮಾಡುತ್ತಿರುವ ಮತ್ತು ಭಾರತದಲ್ಲಿ ಫೇಸ್‌ಬುಕ್ ಮೇಲೆ ಹಲವು ನಿಯಂತ್ರಣ ಹೇರುತ್ತಿರುವ ಮಧ್ಯೆಯೇ ದೇವನಾಥನ್ ಅವರ ನೇಮಕವಾಗಿದೆ. ಈ ಎಲ್ಲಾ ಸವಾಲುಗಳನ್ನು ಅವರು ಎದುರಿಸಿ ಕಂಪನಿಯನ್ನು ದೇಶದಲ್ಲಿ ನಿಭಾಯಿಸುವ ಸವಾಲು ಅವರ ಮುಂದಿದೆ.
ದೇಶದಲ್ಲಿ ನಕಲಿ ಸುದ್ದಿ ಮತ್ತು ದ್ವೇಷದ ಪೋಸ್ಟ್ಗಳ ಮೇಲೆ ನಿಯಂತ್ರಿಸುವ ಕಂಪನಿ ಎಡವುತ್ತಿದೆ ಎಂಬ ಆಪಾದನೆ ಕೇಳಿಬಂದಿದೆ. ಸಂಧ್ಯಾ ದೇವನಾಥನ್ ಅವರು 2016 ರಿಂದ ಮೆಟಾದಲ್ಲಿ ಉದ್ಯೋಗಿಯಾಗಿದ್ದಾರೆ.
ಓದಿ: ಮೆಟಾ ಕಂಪನಿಯ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಅಜಿತ್ ಮೋಹನ್ ರಾಜೀನಾಮೆ