ETV Bharat / business

2024 ರಲ್ಲಿ ರೋಡಿ​ಗಿಳಿಯಲಿವೆ ಮಹಿಂದ್ರಾ ಎಲೆಕ್ಟ್ರಿಕ್​​​​ ವಾಹನ: ಆನಂದ್​ ಮಹಿಂದ್ರಾ - ಆನಂದ್​ ಮಹಿಂದ್ರಾ

2024ರ ಅಂತ್ಯದ ವೇಳೆಗೆ ಮೊದಲ ವಾಹನ ಬಿಡುಗಡೆಯಾಗಲಿದ್ದು, 2024-26ರಲ್ಲಿ ಒಟ್ಟು 4 ಎಲೆಕ್ಟ್ರಿಕ್ ಎಸ್‌ಯುವಿಗಳು ರಸ್ತೆಗಿಳಿಯಲಿವೆ ಎಂದು ಆನಂದ್​ ಮಹಿಂದ್ರಾ ಹೇಳಿದ್ದಾರೆ. ದೇಶೀಯ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ವಿಭಾಗದಲ್ಲಿ ಕಂಪನಿಯು ಶೇಕಡಾ 70 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

MAHINDRA ELECTRIC SUV LAUNCH IN 2024 REVEALS ANAND MAHINDRA
2024 ರಲ್ಲಿ ರೋಡ್​​​ಗಿಳಿಯಲಿವೆ ಮಹಿಂದ್ರಾ ಎಲೆಕ್ಟ್ರಿಕ್​​​​ ವಾಹನ
author img

By

Published : Aug 16, 2022, 10:46 AM IST

.Mahindra electric SUV launch : ಸತತವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್​ - ಡೀಸೆಲ್​ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್​ ವಾಹನಿಗೆ ಬೇಡಿಕೆ ಹೆಚ್ಚುತ್ತಿದೆ. ಈ ನಡುವೆ ಸರ್ಕಾರಗಳು ಕೂಡಾ ಎಲೆಕ್ಟ್ರಿಕಲ್​ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಅತ್ತ ಗ್ರಾಹಕರಲ್ಲೂ ಹೆಚ್ಚಿನ ಜಾಗೃತಿ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸಲು ಮಹೀಂದ್ರಾ ನಿರ್ಧರಿಸಿದೆ. ಈ ಸಂಬಂಧ ಮಾತನಾಡಿರುವ ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾ, ಇದು ಮಾರುಕಟ್ಟೆ ಪ್ರವೇಶಿಸಿಲು ಸೂಕ್ತ ಸಮಯ ಎಂದಿದ್ದಾರೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ 5 ಎಲೆಕ್ಟ್ರಿಕ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಸ್ (ಎಸ್‌ಯುವಿ) ಬಿಡುಗಡೆ ಮಾಡಲಾಗುವುದು ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಎಕ್ಸ್‌ಯುವಿ ಮತ್ತು ಬಿಇ ಬ್ರಾಂಡ್‌ಗಳ ಅಡಿ ಎಲೆಕ್ಟ್ರಿಕ್​ ವಾಹನಗಳನ್ನು ಮಾರುಕಟ್ಟೆಗೆ ತರಲಾಗುವುದು ಎಂದು ತಿಳಿದು ಬಂದಿದೆ.

2024ರ ಅಂತ್ಯದ ವೇಳೆಗೆ ಮೊದಲ ವಾಹನ ಬಿಡುಗಡೆಯಾಗಲಿದ್ದು, 2024-26ರಲ್ಲಿ ಒಟ್ಟು 4 ಎಲೆಕ್ಟ್ರಿಕ್ ಎಸ್‌ಯುವಿಗಳು ರಸ್ತೆಗಿಳಿಯಲಿವೆ ಎಂದು ಆನಂದ್​ಮಹಿಂದ್ರಾ ಹೇಳಿದ್ದಾರೆ. ದೇಶೀಯ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ವಿಭಾಗದಲ್ಲಿ ಕಂಪನಿಯು ಶೇಕಡಾ 70 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ಕಂಪನಿಯ ಎಲೆಕ್ಟ್ರಿಕ್ ವಾಹನ ವಿಭಾಗ EV Co ನಲ್ಲಿ 250 ಮಿಲಿಯನ್ ಡಾಲರ್ (ಸುಮಾರು ರೂ. 1,925 ಕೋಟಿ) ಹೂಡಿಕೆ ಮಾಡಲು ಬ್ರಿಟಿಷ್ ಇಂಟರ್ನ್ಯಾಷನಲ್ ಇನ್ವೆಸ್ಟ್ಮೆಂಟ್ (BII) ಸಿದ್ಧವಾಗಿದೆ ಎಂದು ಆನಂದ್ ಮಹಿಂದ್ರಾ ಇದೇ ವೇಳೆ ಹೇಳಿದ್ದಾರೆ. 2024-27ರ ನಡುವೆ ಒಟ್ಟು $1 ಬಿಲಿಯನ್ (ಅಂದಾಜು ರೂ.7,900 ಕೋಟಿ) ಹೂಡಿಕೆ ಮಾಡಬೇಕಿದೆ. ಮಹಿಂದ್ರ EV ಗಳನ್ನು ಹೊಸ Inglo ಪ್ಲಾಟ್‌ಫಾರ್ಮ್‌ನಲ್ಲಿ ತರಲಾಗುವುದು ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಮಹೀಂದ್ರಾ ಗ್ರೂಪ್ ಎಂಡಿ ಮತ್ತು ಸಿಇಒ ಅನೀಶ್ ಷಾ ಅವರು 2027 ರ ವೇಳೆಗೆ ಎಸ್‌ಯುವಿ ಮಾರಾಟದಲ್ಲಿ ಶೇಕಡಾ 25 ರಷ್ಟು ಎಲೆಕ್ಟ್ರಿಕ್ ವಾಹನಗಳು ಇರಲಿವೆ ಎಂದು ಹೇಳಿದ್ದಾರೆ. 2021-22ರಲ್ಲಿ ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 2.25 ಲಕ್ಷ ಎಸ್‌ಯುವಿಗಳನ್ನು ಮಾರಾಟ ಮಾಡಿದೆ.

ವೋಕ್ಸ್‌ವ್ಯಾಗನ್‌ನೊಂದಿಗೆ ಎಂಒಯು: ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಸಹಕರಿಸಲು ಅಂತಾರಾಷ್ಟ್ರೀಯ ಆಟೋಮೊಬೈಲ್ ದೈತ್ಯ ವೋಕ್ಸ್‌ವ್ಯಾಗನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮಹಿಂದ್ರಾ ಗ್ರೂಪ್ ಸೋಮವಾರ ಪ್ರಕಟಿಸಿದೆ. ಇದರ ಭಾಗವಾಗಿ, ಫೋಕ್ಸ್‌ವ್ಯಾಗನ್ ಹೊಸ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಇಂಗ್ಲೋಗೆ ಅಗತ್ಯವಿರುವ MEB (ಮಾಡ್ಯುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್) ಎಲೆಕ್ಟ್ರಿಕ್ ಉಪಕರಣಗಳನ್ನು ಪೂರೈಸಬೇಕಾಗುತ್ತದೆ. 5 ಎಲೆಕ್ಟ್ರಿಕ್ SUV ಗಳ ಜೊತೆಗೆ, ವೋಕ್ಸ್‌ವ್ಯಾಗನ್ ತನ್ನ ಜೀವಿತಾವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ MEB ಉಪಕರಣಗಳನ್ನು ಪೂರೈಸಿದೆ.

ಇದನ್ನು ಓದಿ:ಜಾಗತಿಕ ವಾಹನ ಮಾರಾಟದಲ್ಲಿ ಹ್ಯುಂಡೈಗೆ 3ನೇ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.