ETV Bharat / business

ಯೂಟ್ಯೂಬ್​ನಿಂದ ಕೋಡಿಂಗ್ ಕಲಿತ ಯುವತಿ: ಗೂಗಲ್​ನಲ್ಲಿ ಸಿಕ್ತು 60 ಲಕ್ಷದ ಭರ್ಜರಿ ಪ್ಯಾಕೇಜ್!

ಮನಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಗುಂಟೂರಿನ ಯುವತಿಯೊಬ್ಬಳು ಉದಾಹರಣೆಯಾಗಿದ್ದಾಳೆ. ಯುವತಿ ರಾವೂರಿ ಪೂಜಿತಾ ಎಂಬಾಕೆ ಯೂಟ್ಯೂಬ್​ನಿಂದಲೇ ಕೋಡಿಂಗ್​ ಕಲಿತು, ಈಗ ಗೂಗಲ್​ ಕಂಪನಿಯಲ್ಲಿ ವರ್ಷಕ್ಕೆ 60 ಲಕ್ಷ ರೂಪಾಯಿ ಸಂಬಳದ ಕೆಲಸದ ಆಫರ್ ಗಿಟ್ಟಿಸಿಕೊಂಡಿದ್ದಾರೆ.

ಯೂಟ್ಯೂಬ್​ನಿಂದ ಕೋಡಿಂಗ್ ಕಲಿತಳು; ಗೂಗಲ್​ನಲ್ಲಿ ಸಿಕ್ತು 60 ಲಕ್ಷದ ಭರ್ಜರಿ ಪ್ಯಾಕೇಜ್!
learned coding from YouTube; A huge package of 60 lakhs found in Google!
author img

By

Published : Jan 9, 2023, 4:26 PM IST

ಹೈದರಾಬಾದ್​( ತೆಲಂಗಾಣ): ಗೂಗಲ್​​ನಲ್ಲಿ ಒಳ್ಳೆಯ ಉದ್ಯೋಗ! ವರ್ಷಕ್ಕೆ 60 ಲಕ್ಷ ರೂಪಾಯಿಗಳ ಬೃಹತ್ ಪ್ಯಾಕೇಜ್‌! ಹೌದು.. ಗುಂಟೂರಿನ ಹುಡುಗಿ ರಾವೂರಿ ಪೂಜಿತಾ ತನ್ನ ಯೌವನದ ಕನಸನ್ನು ಹೀಗೆ ನನಸಾಗಿಸಿಕೊಂಡಿದ್ದಾರೆ. ಅವರ ಯಶಸ್ಸಿನ ಗುಟ್ಟೇನು? ಲಾಕ್‌ಡೌನ್‌ಗೂ ಯುವತಿಯ ಯಶಸ್ಸಿಗೂ ಏನೋ ಸಂಬಂಧವಿದೆ. ಆದರೆ ಅದೇನೆಂದು ಆಶ್ಚರ್ಯಪಡುತ್ತೀರಾ? ಅವರ ಮಾತಿನಲ್ಲೇ ಅದೆಲ್ಲವನ್ನೂ ತಿಳಿಯೋಣ ಬನ್ನಿ.

’’ನಾನು ಬಿಟೆಕ್‌ನ ಮೊದಲ ವರ್ಷದಲ್ಲಿದ್ದಾಗ ಕೋವಿಡ್-19 ಸೋಂಕು ಪ್ರಾರಂಭವಾಯಿತು. ಆಗಲೇ ಲಾಕ್‌ಡೌನ್ ಕೂಡ ಹೇರಲಾಗಿತ್ತು. ಎಷ್ಟೋ ಜನರಂತೆ ನನಗೂ ಕಾಲೇಜಿಗೆ ಹೋಗಿ ಓದುವ ಅವಕಾಶವಿರಲಿಲ್ಲ. ಆದರೆ ಈ ಬಗ್ಗೆ ನಾನು ತೀರಾ ತಲೆಕೆಡಿಸಿಕೊಳ್ಳಲಿಲ್ಲ. ಆನ್‌ಲೈನ್‌ನಲ್ಲಿ ಕಾಲೇಜು ಸಿಬ್ಬಂದಿ ನೀಡುವ ಉಪನ್ಯಾಸಗಳನ್ನು ನಾನು ಗಮನವಿಟ್ಟು ಕೇಳುತ್ತಿದ್ದೆ. ನನ್ನ ಸಂದೇಹಗಳನ್ನು ಮತ್ತು ಸಮಸ್ಯೆಗಳನ್ನು ಸಾಧ್ಯವಾದಷ್ಟು ಶಿಕ್ಷಕರು ಮತ್ತು ಹಿರಿಯರಿಗೆ ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದೆ. ಅವರಲ್ಲಿ ಕೇಳಲು ಸಾಧ್ಯವಾಗದಿದ್ದಾಗ ಆನ್‌ಲೈನ್‌ನಲ್ಲಿ ಉತ್ತರ ಹುಡುಕಿಕೊಳ್ಳುತ್ತಿದ್ದೆ. ನನ್ನ ತಂದೆ ಖಾಸಗಿ ಬ್ಯಾಂಕ್‌ನಲ್ಲಿ ಅಧಿಕಾರಿ. ನನ್ನ ತಂಗಿ ಏಳನೇ ತರಗತಿ ಓದುತ್ತಿದ್ದಾಳೆ. ನಾನು ಏನು ಓದಬೇಕು ಹೇಗೆ ಓದಬೇಕು ಎಂದು ಮಾರ್ಗದರ್ಶನ ನೀಡುವವರು ಯಾರೂ ಇಲ್ಲ. ಹಾಗಾಗಿ ನಾನೇ ಅದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೆ ಆ ಮೂಲಕ ಯಶಸ್ಸು ಪಡೆದೆ‘‘ ಎನ್ನುತ್ತಾಳೆ ಪೂಜಿತಾ

ಜೆಇಇ ಪಾಸಾಗಿ ಸೀಟ್​ ಗಿಟ್ಟಿಸಿಕೊಂಡಿದ್ದೆ ಆದರೆ..?: ಹೀಗೆ ಕಷ್ಟಪಟ್ಟು ಓದಿ ಜೆಇಇಯಲ್ಲಿ ಪಾಸಾದೆ ಆ ಮೂಲಕ ನನಗೆ ಜಾರ್ಖಂಡ್ ಬಿಟ್ಸ್‌ನಲ್ಲಿ ಸೀಟು ಸಿಕ್ಕಿತು. ಆದರೆ ನನ್ನನ್ನು ಅಷ್ಟು ದೂರ ಕಳಿಸಲು ಪೋಷಕರು ಒಪ್ಪಲಿಲ್ಲ. ಹೀಗಾಗಿ ಗುಂಟೂರಿನ ಕೆಎಲ್ ವಿಶ್ವವಿದ್ಯಾನಿಲಯದಲ್ಲಿ ಬಿ.ಟೆಕ್ ಸೇರಿಕೊಂಡೆ. ನಾನು ಮೊದಲ ವರ್ಷದ ಮೊದಲ ಸೆಮಿಸ್ಟರ್‌ನಲ್ಲಿದ್ದಾಗ, ಕೆಎಲ್ ವಿಶ್ವವಿದ್ಯಾಲಯವು ಸಮಸ್ಯೆ ಪರಿಹರಿಸುವ ಕೋರ್ಸ್ ಒಂದನ್ನು ಆರಂಭಿಸಿತು. ಹೀಗೆ ನನ್ನ ಕೋಡಿಂಗ್ ಪಯಣ ಶುರುವಾಯಿತು. ಎರಡನೇ ಸೆಮಿಸ್ಟರ್‌ನ ಕೊನೆಯಲ್ಲಿ ಲಾಕ್‌ಡೌನ್ ಹೇರಲಾಯಿತು. ನನಗೆ ಆನ್‌ಲೈನ್ ತರಗತಿಗಳು ಅರ್ಥವಾಗದಿದ್ದರೆ, ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸುತ್ತಿದ್ದೆ ಮತ್ತು ಕೋಡಿಂಗ್ ಅನ್ನು ಕರಗತ ಮಾಡಿಕೊಳ್ಳಲು ಪ್ರಾರಂಭಿಸಿದೆ ಅಂತಾರೆ ರಾವೂರಿ ಪೂಜಿತಾ.

ನನ್ನ ಕೋಡಿಂಗ್ ಪಯಣ ಶುರುವಾಗಿದ್ದು ಹೀಗೆ: ಸಾಫ್ಟ್‌ವೇರ್ ಕಂಪನಿಗಳು ಕೋಡಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತವೆ. ಹೀಗಾಗಿ ಇದರ ಬಗ್ಗೆ ಕಲಿಯಲು ನಾನು ಹಲವಾರು ವೆಬ್​ಸೈಟ್​ಗಳನ್ನು ನೋಡುತ್ತಿದ್ದೆ. ನಾನು ನನ್ನ ಬಿಡುವಿನ ವೇಳೆಯನ್ನು ಕೋಡಿಂಗ್, ಇತರ ಸಮಸ್ಯೆಗಳು ಮತ್ತು ಉದ್ಯೋಗವನ್ನು ಪಡೆಯಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಯಲು ವಿನಿಯೋಗಿಸುತ್ತಿದ್ದೆ. ನಾನು ದಿನದಲ್ಲಿ ಅರ್ಧದಷ್ಟು ಸಮಯ ಆನ್‌ಲೈನ್ ತರಗತಿಗಳನ್ನು ನೋಡುತ್ತಿದ್ದೆ. ನನಗೆ ಸಿಕ್ಕ ಸಮಯದಲ್ಲಿ ಆನ್​ಲೈನ್ ಮೂಲಕ ಕಲಿಯುತ್ತಿದ್ದೆ. ಅಲ್ಲದೆ ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂದು ತಿಳಿಯಲು ನನ್ನನ್ನು ನಾನು ಪರೀಕ್ಷಿಸಿಕೊಳ್ಳುತ್ತಿದ್ದೆ ಎಂಬುದು ಪೂಜಿತಾ ಮಾತಾಗಿದೆ.

ಅನುಭವಿಕರನ್ನು ಮಾತನಾಡಿಸಿ ನನ್ನ ಕೋಡಿಂಗ್​​ ಕಲಿಕೆ ಉತ್ತಮ ಪಡಿಸಿಕೊಂಡೆ: Leatcode, CodeChef, Prepbytes, BinarySearch.com ಇತ್ಯಾದಿ ಸೈಟ್‌ಗಳು ಕೋಡಿಂಗ್‌ ಕಲಿಯಲು ಉತ್ತಮವಾಗಿವೆ. ಸಮಯ ನಿರ್ವಹಣೆ ಹೇಗೆ ಎಂಬುದನ್ನು ಕಲಿತುಕೊಂಡೆ. ಆನ್‌ಲೈನ್ ಅಸೆಸ್ಮೆಂಟ್ ಮತ್ತು ಸಂದರ್ಶನಗಳಿಗಾಗಿ ತಯಾರಿ ಮಾಡಿಕೊಂಡೆ. ಆಗಾಗ ಮಾಕ್ ಸಂದರ್ಶನಗಳಿಗೆ ಹಾಜರಾಗುತ್ತಿದ್ದೆ. ಆನ್‌ಲೈನ್‌ನಲ್ಲಿ ಅನುಭವಿಕರನ್ನು ಮಾತನಾಡಿಸಿ ಅವರ ಅನುಭವಗಳನ್ನು ತಿಳಿದುಕೊಳ್ಳುತ್ತಿದ್ದೆ. ಇವೆಲ್ಲವೂ ಇಂಟರ್ವ್ಯೂ ಎದುರಿಸಲು ನನಗೆ ತುಂಬಾ ಸಹಾಯಕವಾದವು. ಗೂಗಲ್, ಅಡೋಬ್ ಮತ್ತು ಅಮೆಜಾನ್ ಕಂಪನಿಗಳಲ್ಲಿ ನಾನು ಯಶಸ್ಸನ್ನು ಸಾಧಿಸಿದೆ. ಇದು ನನಗೆ ತುಂಬಾ ಸಂತೋಷ ನೀಡಿದೆ ಎಂದು ಪೂಜಿತಾ ಆತ್ಮ ವಿಶ್ವಾಸದಿಂದ ಹೇಳುತ್ತಾರೆ.

ಇದುವೇ ನನ್ನ ಜೀವನದ ಗುರಿ: ಅಮೆಜಾನ್ ಮತ್ತು ಅಡೋಬ್ ಕಂಪನಿಗಳು 45 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ನೀಡಲು ಮುಂದೆ ಬಂದಿವೆ. ಆದರೆ ನಾನು ಗೂಗಲ್​​ನ 60 ಲಕ್ಷ ರೂಪಾಯಿ ಪ್ಯಾಕೇಜ್ ಆಯ್ಕೆ ಮಾಡಿಕೊಂಡಿದ್ದೇನೆ. ಮುಂದಿನ ವಾರ ಇಂಟರ್ನ್‌ಶಿಪ್‌ಗೆ ಹೋಗುತ್ತಿದ್ದೇನೆ. ಕೆಲಸದಲ್ಲಿ ಮನ್ನಣೆ ಮತ್ತು ಪಾಂಡಿತ್ಯ ಗಳಿಸಿದ ನಂತರ ಜನರಿಗೆ ಉಪಯೋಗವಾಗುವಂಥ ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದು ನನ್ನ ಗುರಿಯಾಗಿದೆ.

ಇದನ್ನೂ ಓದಿ: ಓದಿದ್ದು 7ನೇ ತರಗತಿ; YouTube ನೋಡಿಯೇ ತೋಟಗಾರಿಕೆ ಬೆಳೆ ಕಲಿತರು, ವರ್ಷಕ್ಕೀಗ ₹8 ಲಕ್ಷ ಸಂಪಾದನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.