ನವದೆಹಲಿ: ಪ್ರಮುಖ ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಪಿ ಮೋರ್ಗಾನ್, ಭಾರತವನ್ನು ಹೂಡಿಕೆದಾರರ ಸ್ವರ್ಗ ಎಂದಿದ್ದು, ಭಾರತಕ್ಕೆ ಮತ್ತೊಮ್ಮೆ ಹೆಚ್ಚುವರಿ ರೇಟಿಂಗ್‌ಗೆ(ಓವರ್‌ವೇಟ್ ರೇಟಿಂಗ್) ಅಪ್‌ಗ್ರೇಡ್ ಮಾಡಿದೆ. ಮೋರ್ಗಾನ ತನ್ನ ಉದಯೋನ್ಮುಖ ಮಾರುಕಟ್ಟೆಗಳ (EM) ಮಾಡೆಲ್ ಪೋರ್ಟ್‌ಫೋಲಿಯೊದಲ್ಲಿ ಮೂರು ಪ್ರಮುಖ ಕಂಪನಿಗಳಾದ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಕಂಪನಿಗಳನ್ನು ಸೇರಿಸಿದೆ.
ಈ ಅಪ್‌ಗ್ರೇಡ್ JP ಮೋರ್ಗಾನ್ ಅನ್ನು ಮೋರ್ಗಾನ್ ಸ್ಟಾನ್ಲಿ, CLSA ಮತ್ತು ನೊಮುರಾದಂತಹ ಇತರ ಪ್ರಮುಖ ಜಾಗತಿಕ ಬ್ರೋಕರೇಜ್‌ಗಳೊಂದಿಗೆ ಸಂಯೋಜಿಸಿದೆ. ಈ ಮೂಲಕ ಭಾರತವನ್ನು ಅಧಿಕ ಸುಸ್ಥಿರ ವಿಭಾಗಕ್ಕೆ ಸೇರಿಸಲಾಗಿದೆ. ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿರುವ ಧನಾತ್ಮಕ ವರ್ತಮಾನದ ಹಿನ್ನೆಲೆಯಲ್ಲಿ ಉದಯೋನ್ಮುಖ ಮಾರುಕಟ್ಟೆಗಳ ಪೊರ್ಟ್ ಪೊಲೀಯೋಗೆ ಸೂಚಿಸಲಾಗಿದೆ. GDP ಯಲ್ಲಿನ ದೃಢವಾದ ಬೆಳವಣಿಗೆ ಮತ್ತು ದೇಶೀಯ ಬಾಂಡ್ ಮಾರುಕಟ್ಟೆಯ ವಿಸ್ತರಣೆ ಸೇರಿದಂತೆ ಹಲವಾರು ಅಂಶಗಳು ಮೋರ್ಗಾನ್ ಈ ನಿರ್ಧಾರಕ್ಕೆ ಆಧಾರವಾಗಿವೆ.
JP ಮೋರ್ಗಾನ್‌ನ ನವೀಕರಣವು ಆವರ್ತಕ ಮತ್ತು ರಚನಾತ್ಮಕ ಬಲವರ್ದನೆ ಆಧಾರದ ಮೇಲೆ ಈ ಏರಿಕೆ ನಿರ್ಧರಿತವಾಗಿದೆ. ಭಾರತದ ಬಲವಾದ GDP ಬೆಳವಣಿಗೆಯಿಂದ ಈ ಶಿಫಾರಸು ಮಾಡಲಾಗಿದೆ. ಜನಸಂಖ್ಯಾ ಪ್ರವೃತ್ತಿಗಳು ಮತ್ತು ಮೂಲಸೌಕರ್ಯ ಹೂಡಿಕೆ ಅಗತ್ಯತೆಗಳು, ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಿಗೆ ಹೋಲಿಸಿದರೆ, ಕಡಿಮೆ ಸ್ಪರ್ಧಾತ್ಮಕ ಅಪಾಯ - ಹೊಂದಾಣಿಕೆಯ ಆದಾಯಗಳು ಮತ್ತು ಬೆಳೆಯುತ್ತಿರುವ ದೇಶೀಯ ಬಾಂಡ್ ಮಾರುಕಟ್ಟೆಗಳು ಈ ರಚನಾತ್ಮಕ ಬೆಳವಣಿಗೆಗೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆದರೂ ಈ ಬಗ್ಗೆ ಎಚ್ಚರಿಕೆ ಇರಲಿ: ಆದಾಗ್ಯೂ, ಉದಯೋನ್ಮುಖ ಮಾರುಕಟ್ಟೆಯ ಈಕ್ವಿಟಿಗಳು, ಅಮೆರಿಕದ ಫೆಡರಲ್ ಬ್ಯಾಂಕ್ನ ಬಡ್ಡಿದರ ಏರಿಕೆ ವಿಚಾರ ಮತ್ತು ಡಾಲರ್‌ನ ಪ್ರಭಾವವು ಬೆಳವಣಿಗೆ ಮತ್ತು ದರಗಳ ಮೇಲೆ ಪರಿಣಾಮ ಬೀರುವುದರಿಂದ ಸವಾಲುಗಳನ್ನು ಎದುರಿಸಬಹುದು ಎಂದು ಬ್ರೋಕರೇಜ್ ಎಚ್ಚರಿಕೆಯನ್ನು ರವಾನಿಸಿದೆ.
ಉದಯೋನ್ಮುಖ ಮಾರುಕಟ್ಟೆಯ ಈಕ್ವಿಟಿಗಳಿಗೆ ಸಮರ್ಥನೀಯ ಬಿಡ್ ಅಮೆರಿಕದ ಫೆಡರಲ್ ಬ್ಯಾಂಕ್ನ ನೀತಿ ಪ್ರಕಟವಾದ ಮೇಲೆ ಕಾರ್ಯರೂಪಕ್ಕೆ ಬರಬಹುದು ಎಂದು ತನ್ನ ವರದಿಯಲ್ಲಿ ಸೂಚಿಸಿದೆ. ಇದು GDP ಹಿಂಜರಿತ ಮತ್ತು ಬಡ್ಡಿ ದರ ಕಡಿತವನ್ನು ಒಳಗೊಂಡಿರುತ್ತದೆ ಎಂದು JP ಮೋರ್ಗಾನ್ ಹೇಳಿದೆ.
ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಅನ್ನು ಅದರ EM ಮಾಡೆಲ್ ಪೋರ್ಟ್‌ಫೋಲಿಯೊಗೆ ಸೇರಿಸುವುದು ಭಾರತದ ಬೆಳವಣಿಗೆಯ ಸಾಮರ್ಥ್ಯ ಮತ್ತು ಉದಯೋನ್ಮುಖ ಮಾರುಕಟ್ಟೆಯ ಅವಕಾಶಗಳನ್ನು ವಶಪಡಿಸಿಕೊಳ್ಳುವ ಬದ್ಧತೆಯ ಬಗ್ಗೆ JP ಮೋರ್ಗಾನ್ ವಿಶ್ವಾಸವನ್ನು ವ್ಯಕ್ತಪಡಿಸಿದೆ.
JP ಮೋರ್ಗಾನ್ ಅವರ ಈ ಕ್ರಮವು ಭಾರತದ ಬೆಳವಣಿಗೆಯನ್ನು ಸೂಚಿಸುತ್ತದೆ. ಸುಧಾರಿತ ಆರ್ಥಿಕ ಮತ್ತು ಗಳಿಕೆಯ ಬೆಳವಣಿಗೆಯಿಂದಾಗಿ ಮೋರ್ಗಾನ್ ಸ್ಟಾನ್ಲಿ ಈ ಹಿಂದೆ ಭಾರತವನ್ನು ಹೆಚ್ಚುವರಿ ರೇಟಿಂಗ್‌ಗೆ ಅಪ್‌ಗ್ರೇಡ್ ಮಾಡಿದೆ, (ANI)
ಇದನ್ನು ಓದಿ: ಬಿಟ್ ಕಾಯಿನ್ ಮೌಲ್ಯ ಒಂದೇ ದಿನದಲ್ಲಿ 61 ಸಾವಿರ ರೂಪಾಯಿ ಏರಿಕೆ