ETV Bharat / business

ಜಿಯೋದಿಂದ ಮತ್ತೊಂದು ಕ್ರಾಂತಿ.. ಕೇವಲ 999ರೂಗೆ Jio Bharat V2.. ಮಾರುಕಟ್ಟೆಗೆ ಬಿಡುಗಡೆ! - ಭಾರತದಲ್ಲಿ ಇಂಟರ್​​ನೆಟ್​ ಕ್ರಾಂತಿ

JioBharat V2 4G ಫೋನ್‌ ಅನ್ನು ರಿಲಯನ್ಸ್​ ಜಿಯೋ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇತರ ಆಪರೇಟರ್‌ಗಳ ಹೋಲಿಸಿದರೆ 7 ಪಟ್ಟು ಹೆಚ್ಚು ಡೇಟಾವನ್ನು ಜಿಯೋ ನೀಡಲಿದೆ. ಇತರ ಆಪರೇಟರ್‌ಗಳ 28 ದಿನಗಳವರೆಗೆ ಧ್ವನಿ ಕರೆಗಳು ಮತ್ತು 2GB ಡೇಟಾಕ್ಕಾಗಿ ರೂ 179 ಪ್ಲಾನ್‌ಗೆ ಹೋಲಿಸಿದರೆ, ಹೊಸ ಫೋನ್​ ಜತೆ ಅನಿಯಮಿತ ಧ್ವನಿ ಕರೆಗಳು ಮತ್ತು 14 GB ಡೇಟಾಕ್ಕೆ ಕೇವಲ123 ರೂ. ದರ ಇರಲಿದೆ ಎಂದು ಜಿಯೋ ಘೋಷಿಸಿದೆ.

JioBharat V2 4G Phone with an MRP of Rs 999
ಜಿಯೋದಿಂದ ಮತ್ತೊಂದು ಕ್ರಾಂತಿ.. ಕೇವಲ 999ರೂಗೆ Jio Bharat V2.. ಮಾರುಕಟ್ಟೆಗೆ ಬಿಡುಗಡೆ!
author img

By

Published : Jul 3, 2023, 8:04 PM IST

Updated : Jul 3, 2023, 8:23 PM IST

ನವದೆಹಲಿ: ಭಾರತದಲ್ಲಿ ಇಂಟರ್​​ನೆಟ್​ ಕ್ರಾಂತಿ ಮಾಡಿ, ಕರೆಗಳ ದರವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿದ ಶ್ರಯಸ್ಸು ಜಿಯೋಗೆ ದೊರೆಯುತ್ತದೆ. ಈಗ ಮತ್ತೊಂದು ಕ್ರಾಂತಿಗೆ ಜಿಯೋ ಮುಂದಾಗಿದೆ. ರಿಲಯನ್ಸ್ ಜಿಯೋ ಸೋಮವಾರ ಭಾರತದ ಅತ್ಯಂತ ಕೈಗೆಟುಕುವ ದರ 4G ಫೋನ್ 'Jio Bharat V2' ಅನ್ನು ಕೇವಲ 999 ರೂಗಳಲ್ಲಿ ಬಿಡುಗಡೆ ಮಾಡಿದೆ. ಇದು ದೇಶದಲ್ಲಿ 4 ಜಿ ಇಂಟರ್ನೆಟ್-ಸಕ್ರಿಯಗೊಳಿಸಿದ ಅತ್ಯಂತ ಕಡಿಮೆ ದರದ ಫೋನ್‌ ಆಗಿದೆ.

  • #WATCH | Visuals of JioBharat V2 4G Phone with an MRP of Rs 999, the lowest entry price for an internet-enabled phone. The monthly plan is 30% cheaper and has 7 times more data compared to feature phone offerings of other operators. The phone has plans including Rs 123 for 28… pic.twitter.com/xBbALCAoA9

    — ANI (@ANI) July 3, 2023 " class="align-text-top noRightClick twitterSection" data=" ">

ಹೊಸ 'ಜಿಯೋ ಭಾರತ್' ಸ್ಮಾರ್ಟ್‌ಫೋನ್ ಅಸ್ತಿತ್ವದಲ್ಲಿರುವ 250 ಮಿಲಿಯನ್ ಫೀಚರ್ ಫೋನ್ (2G) ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ಮೂಲಕ 4ಜಿ ಇಂಟರ್ನೆಟ್ ಒದಗಿಸುವ ಯೋಜನೆ ಆಗಿದೆ. ಜಿಯೋ ಭಾರತ ವಿ2 ಪ್ರವೇಶ ಮಟ್ಟದ ಫೋನ್‌ಗಳಲ್ಲಿ ಇಂಟರ್ನೆಟ್-ಸಕ್ರಿಯಗೊಳಿಸುವ ಮೂಲಕ ಫೋರ್​ ಜಿ ಸೇವೆಗಳನ್ನು ನೀಡಲಿದೆ. 1 ಮಿಲಿಯನ್ ಜಿಯೋ ಭಾರತ್ ಫೋನ್‌ಗಳ ಬೀಟಾ ಪ್ರಯೋಗವು ಜುಲೈ 7 ರಿಂದ ದೇಶದಲ್ಲಿ ಪ್ರಾರಂಭವಾಗಲಿದೆ.

"ಭಾರತದಲ್ಲಿ ಇನ್ನೂ 250 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರು 2G ಫೋನ್​ಗಳನ್ನು ಬಳಕೆ ಮಾಡುತ್ತಿದ್ದಾರೆ. ಹೀಗೆ 2 ಜಿಯಲ್ಲಿ 'ಬಂಧಿ'ಯಾಗಿರುವ ಬಳಕೆದಾರರನ್ನು ತನ್ನತ್ತ ಸೆಳೆದು ಜಿಯೋ 4 ಜಿ ಸೇವೆ ನೀಡಲು ಮುಂದಾಗಿದೆ. ಜಗತ್ತು ಈಗ 5G ಕ್ರಾಂತಿಯ ತುದಿಯಲ್ಲಿ ನಿಂತಿದೆ. ಈ ಸಮಯದಲ್ಲಿ ಇಂಟರ್ನೆಟ್‌ನ ಮೂಲಭೂತ ವೈಶಿಷ್ಟ್ಯಗಳನ್ನು ಒದಗಿಸಲು ಜಿಯೋ ಮುಂದಾಗಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.

ಆರು ವರ್ಷಗಳ ಹಿಂದೆ ಜಿಯೋವನ್ನು ಪ್ರಾರಂಭಿಸಿದಾಗ, “ಇಂಟರ್‌ನೆಟ್ ಅನ್ನು ಎಲ್ಲರಿಗೂ ಒದಗಿಸುವ ಯೋಜನೆ ಹೊಂದಿದ್ದೆವು ಮತ್ತು ತಂತ್ರಜ್ಞಾನದ ಪ್ರಯೋಜನಗಳನ್ನು ಪ್ರತಿಯೊಬ್ಬ ಭಾರತೀಯರಿಗೂ ರವಾನಿಸಲು ಜಿಯೋ ಯಾವುದೇ ಅವಕಾಶವನ್ನು ಕೈ ಚಲ್ಲುವುದಿಲ್ಲ ಎಂದು ಆಗ ಸ್ಪಷ್ಟಪಡಿಸಿದ್ದೆವು. ಕೆಲವರಿಗೆ ತಂತ್ರಜ್ಞಾನ ಸವಲತ್ತುಗಳಾಗಿ ಉಳಿಯುವುದಿಲ್ಲ. ಅವು ಜನಜೀವನದ ಭಾಗವಾಗಲಿವೆ ಎಂದು ಆಕಾಶ್ ಅಂಬಾನಿ ಹೇಳಿದರು.

ಹೊಸ ಮೊಬೈಲ್​ ಮೂಲಕ 30 ಪ್ರತಿಶತದಷ್ಟು ಅಗ್ಗದ ಮಾಸಿಕ ಯೋಜನೆ ಮತ್ತು ಇತರ ಟೆಲಿಕಾಂ ಆಪರೇಟರ್​ಗಳಿಗಿಂತ 7 ಪಟ್ಟು ಹೆಚ್ಚು ಡೇಟಾದೊಂದಿಗೆ ನಾವು ಮಾರುಕಟ್ಟೆಗೆ ಬರುತ್ತಿದ್ದೇವೆ ಎಂದು ಜಿಯೋ ಅಧ್ಯಕ್ಷರು ಹೇಳಿದರು. ಇದು ಅನಿಯಮಿತ ಕರೆಗಳಿಗೆ ತಿಂಗಳಿಗೆ ಕೇವಲ 123 ರೂ ಮತ್ತು 14 ಜಿಬಿ ಡೇಟಾ ಕೊಡುಗೆಯಾಗಿ ನೀಡಲಿದೆ. ಇತರ ಆಪರೇಟರ್‌ಗಳು 179 ಪ್ಲಾನ್‌ಗೆ ಹೋಲಿಸಿದರೆ ಈ ಪ್ಲಾನ್​ ಅಗ್ಗವಾಗಿರಲಿದೆ ಎಂದು ಆಕಾಶ್​ ಅಂಬಾನಿ ತಿಳಿಸಿದ್ದಾರೆ.

ಇದನ್ನು ಓದಿ:Digital Payments: ಡಿಜಿಟಲ್​ ಪಾವತಿ ಈಗ ಬಲು ಸುಲಭ.. ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ!

Last Updated : Jul 3, 2023, 8:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.