ಬೆಂಗಳೂರು: ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಗುರುವಾರ 2023-23ನೇ ವರ್ಷದ ನಾಲ್ಕನೇ ತ್ರೈಮಾಸಿಕ ಪ್ರಕಟಿಸಿದ್ದು, ಭಾರೀ ನಿವ್ವಳ ಲಾಭವನ್ನು ಕಂಡಿದೆ. ಇನ್ಫೋಸಿಸ್ ನಿವ್ವಳ ಲಾಭ 24.108 ಕೋಟಿ ರೂ ಎಂದು ವರದಿಯಾಗಿದೆ. ಕಂಪನಿ ತಿಳಿಸುವಂತೆ ಕಂಪನಿ, 2023ರ ಆರ್ಥಿಕ ವರ್ಷದಲ್ಲಿ ಕಳೆದ ವರ್ಷದ ಲಾಭಕ್ಕಿಂತ ಹೆಚ್ಚಿನ ಲಾಭ ಪಡೆದಿದೆ. ಕಳೆದ ವರ್ಷ 121,641 ಕೋಟಿ ಲಾಭ ಪಡೆದರೆ, ಈ ಬಾರಿ 146,767 ಕೋಟಿ ಲಾಭ ಕಂಡಿದೆ. ನಿವ್ವಳ ಲಾಭದಲ್ಲಿ ಕಳೆದ ವರ್ಷ 22,146 ಕೋಟಿ ಲಾಭ ಕಂಡರೆ ಈ ವರ್ಷ 24, 108 ಕೋಟಿ ಲಾಭ ಹೊಂದಿದೆ ಎಂದು ವರದಿ ಆಗಿದೆ.
ಸಂಸ್ಥೆ 2022-23ರ ನಾಲ್ಕನೇ ತ್ರೈಮಾಸಿಕವನ್ನು 37, 441 ಕೋಟಿ ಲಾಭದೊಂದಿಗೆ ಆರ್ಥಿಕ ವರ್ಷವನ್ನು ಮುಗಿಸಿದೆ. ನಿವ್ವಳ ಲಾಭ 6,134 ಕೋಟಿ ಆಗಿದೆ. ಕಂಪನಿ ಆಡಳಿತ ಮಂಡಳಿಯ ಮಾರ್ಚ್ 31ರ ಅಂತ್ಯಕ್ಕೆ ಪ್ರತಿ ಈಕ್ವಿಟಿ ಷೇರಿಗೆ ರೂ.17.50 ಅಂತಿಮ ಲಾಭಾಂಶವನ್ನು ಶಿಫಾರಸು ಮಾಡಿದೆ.
ಉದ್ಯೋಗಿಗಳ ಸಂಖ್ಯೆ: ಇನ್ಫೋಸಿಸ್ ಪ್ರಕಾರ, ಮಾರ್ಚ್ 31, 2023ರಲ್ಲಿ ಸಂಸ್ಥೆ 3,34,234 ಉದ್ಯಮಿಗಳಲ್ಲಿ ಸಾಫ್ಟ್ವೇರ್ ಉದ್ಯೋಗಿಗಳನ್ನು ಹೊಂದಿದೆ. ಕಳೆದ ತ್ರೈಮಾಸಿಕದಲ್ಲಿ 1,627 ಉದ್ಯೋಗಿಗಳನ್ನು ಸಂಸ್ಥೆ ನೇಮಿಸಿಕೊಂಡಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿಕೊಂಡರೆ ಈ ಸಂಖ್ಯೆ ಕಡಿಮೆಯಾಗಿದ್ದು, ಇದು ಶೇ 46ರಷ್ಟು ಇಳಿಕೆ ಕಂಡಿದೆ. 2023ರ ಆರ್ಥಿಕ ವರ್ಷದಲ್ಲಿ 51 ಸಾವಿರ ಜನ ಫ್ರೆಶರ್ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಹಣದುಬ್ಬರ ಒತ್ತಡ, ಉಕ್ರೇನ್- ರಷ್ಯಾ ಯುದ್ದ, ಪ್ರತಿಭೆಯ ಬೇಡಿಕೆ ಇಳಿ ಮುಖಗಳು ಕೂಡ ಉದ್ಯೋಗ ನೇಮಕಾತಿ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಸಂಸ್ಥೆಯ ಲಾಭದ ಕುರಿತು ಮಾತನಾಡಿರುವ ಸಿಇಒ ಸಲೀಲ್ ಪರೇಖ್, ಪರಿಸರ ಬದಲಾದಂತೆ ಸಂಸ್ಥೆ ದಕ್ಷತೆ, ವೆಚ್ಚ ಮತ್ತು ಬಲವರ್ಧನೆ ಅವಕಾಶ ನೀಡಿದೆ. ಇದರಿಂದ ಗ್ರಾಹಕರ ಆಸಕ್ತಿ ವ್ಯಕ್ತವಾಗಿದ್ದು, ಪರಿಣಾಮ ದೊಡ್ಡ ದೊಡ್ಡ ಯೋಜನೆಗಳನ್ನು ಪಡೆಯಲಾಗಿದೆ. ಸಂಸ್ಥೆ ಹಲವಾರು ದೊಡ್ಡ ಯೋಜನೆ, ಅವಕಾಶದ ಜೊತೆಗೆ ಗ್ರಾಹಕರ ವೆಚ್ಚ ಮತ್ತು ದಕ್ಷತೆಯ ಕಾರ್ಯಕ್ರಮದ ಬಲವರ್ಧನೆ ಅವಕಾಶ ಪಡೆದಿದೆ ಎಂದಿದ್ದಾರೆ.
ಮಾರುಕಟ್ಟೆಯ ಅನುಸಾರ ನಿರೀಕ್ಷಿತ ಲಾಭವಲ್ಲ: ಇನ್ಫೋಸಿಸ್ನ ಮೂರನೇ ತ್ರೈಮಾಸಿಕದ ನಿವ್ವಳ ಲಾಭಕ್ಕೆ ಹೋಲಿಕೆ ಮಾಡಿದರೆ, ನಾಲ್ಕನೇ ತ್ರೈಮಾಸಿಕದ ಲಾಭ ಇಳಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆ 6,586 ಕೋಟಿ ಲಾಭ ಮಾಡಿದರೆ, ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆ 6,600 ಕೋಟಿ ಲಾಭ ಪಡೆದಿದೆ. ಈ ಹಿನ್ನೆಲೆ ಇದು ನಿರಾಶಾದಾಯಕ ಕಾರ್ಯ ನಿರ್ವಹಣೆ ಆಗಿದೆ ಎಂದು ಗ್ಲೋಬಲ್ ಫೈನಾನ್ಷಿಯಲ್ ಸರ್ವಿಸಸ್ ತಜ್ಞರು ತಿಳಿಸಿದ್ದಾರೆ. ಇನ್ನು ಮುಂದಿನ ವರ್ಷದ ಅಂದರೆ 2023-24ರ ಆರ್ಥಿಕ ವರ್ಷದಲ್ಲಿ ಶೇ 4ರಿಂದ ಶೇ7ರವರೆಗೆ ಏರಿಕೆ ಕಾಣುವ ನಿರೀಕ್ಷೆ ಹೊಂದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕ್ರಿಫ್ಟೊ ಜಾಗತಿಕ ನೀತಿಗಳ ಬಗ್ಗೆ G20 ನಾಯಕರ ಒಪ್ಪಿಗೆ ಇದೆ; ನಿರ್ಮಲಾ ಸೀತಾರಾಮನ್