ಬೆಂಗಳೂರು: ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದ ಹಣದುಬ್ಬರದ ಸ್ಥಿತಿ ಉತ್ತಮವಾಗಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಚೇರಮನ್ ದಿನೇಶ ಖಾರಾ ಮಂಗಳವಾರ ಹೇಳಿದ್ದಾರೆ. ಸರಕು ಪೂರೈಕೆ ಅಡೆತಡೆಗಳನ್ನು ನಿವಾರಿಸುವ ಕ್ರಮಗಳನ್ನು ಕೈಗೊಳ್ಳಲಾಗಿರುವುದು ಮತ್ತು ಕಚ್ಚಾ ತೈಲಗಳ ಬೆಲೆಗಳಲ್ಲಿನ ಇಳಿಕೆಗಳು ಹಣದುಬ್ಬರ ಕಡಿಮೆಯಾಗಲು ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದುಬ್ಬರದ ವಿಚಾರಕ್ಕೆ ಬಂದರೆ ಬಹುಶಃ ಸೆಪ್ಟೆಂಬರ್ ಅಂತ್ಯದ ವೇಳೆಗೆ ನೀವು ನೋಡುತ್ತಿರುವ ಈಗಿನ ಪರಿಸ್ಥಿತಿಗೆ ಹೋಲಿಸಿದರೆ ವಿಷಯಗಳು ಇನ್ನೂ ಉತ್ತಮವಾಗಿರಬಹುದು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ಗಳಿಗಾಗಿ ಬ್ಯಾಂಕ್‌ನ ಅತ್ಯಾಧುನಿಕ ಮೀಸಲು ಶಾಖೆ ಪ್ರಾರಂಭಿಸುವುದಾಗಿ ಘೋಷಿಸಿದ ನಂತರ ಎಸ್‌ಬಿಐ ಅಧ್ಯಕ್ಷರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಆರ್‌ಬಿಐನ ನೀತಿ ದರಗಳು ಹಣದುಬ್ಬರದ ಪ್ರಮುಖ ಅಂಶವಾಗಿವೆ ಎಂದು ಖಾರಾ ತಿಳಿಸಿದರು.
ಮುಂದಿನ ಎಂಪಿಸಿ ಸಭೆ ನಡೆಯುವವರೆಗೆ ನಾವು ಕಾಯ್ದು ನೋಡಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ಅಂಥ ಸಮಯದವರೆಗೆ, ಪೂರೈಕೆ ವಿಷಯದಲ್ಲಿನ ನಿರ್ಬಂಧಗಳನ್ನು ಪರಿಹರಿಸಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಇದನ್ನು ಓದಿ:ಕ್ರೆಡಿಟ್ ಕಾರ್ಡ್ ಲಿಮಿಟ್ ಇರೋದೆ 45 ಸಾವಿರ.. ಆದರೆ ಗ್ರಾಹಕ ಬಳಸಿದ್ದು 41 ಲಕ್ಷ.. ಅದ್ಹೇಗೆ