ETV Bharat / business

ದಾಖಲೆ ಮಟ್ಟದಲ್ಲಿ ರಾಸಾಯನಿಕಗಳ ರಫ್ತು ಮಾಡಿದ ಭಾರತ - ಭಾರತದ ರಾಸಾಯನಿಕಗಳ ರಫ್ತು ಪ್ರಮಾಣ ಕಳೆದ ಏಳು ವರ್ಷಗಳಲ್ಲಿ ಶೇ 100 ಕ್ಕಿಂತ ಹೆಚ್ಚಿನ ಬೆಳವಣಿಗೆ

ಸಾವಯವ, ಅಜೈವಿಕ ರಾಸಾಯನಿಕಗಳು, ಕೃಷಿ ರಾಸಾಯನಿಕಗಳು, ಬಣ್ಣಗಳು ಮತ್ತು ವಿಶೇಷ ರಾಸಾಯನಿಕಗಳ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಸಾಧಿಸಲಾಗಿದೆ. ಇತ್ತೀಚಿನ ಅಧಿಕೃತ ಅಂಕಿ- ಅಂಶಗಳ ಪ್ರಕಾರ, ಭಾರತೀಯ ರಾಸಾಯನಿಕ ಉದ್ಯಮವು ಜಾಗತಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

India's chemical exports hit a record high of over $ 29 billion
ದಾಖಲೆ ಮಟ್ಟದಲ್ಲಿ ರಾಸಾಯನಿಕಗಳ ರಫ್ತು ಮಾಡಿದ ಭಾರತ
author img

By

Published : Apr 28, 2022, 9:53 AM IST

ನವದೆಹಲಿ: ಭಾರತದ ರಾಸಾಯನಿಕಗಳ ರಫ್ತು ಪ್ರಮಾಣ ಕಳೆದ ಏಳು ವರ್ಷಗಳಲ್ಲಿ ಶೇ 100 ಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ರಾಸಾಯನಿಕ ರಫ್ತು ದಾಖಲೆಯ ಗರಿಷ್ಠ 29 ಶತಕೋಟಿ ಡಾಲರ್​​ ತಲುಪಿದೆ ಎಂದು ಮೂಲಗಳು ತಿಳಿಸಿವೆ. 2021-22 ರಲ್ಲಿ, ಭಾರತದ ಸರಕು ರಫ್ತುಗಳು ಸಾರ್ವಕಾಲಿಕ ದಾಖಲೆಯ ಗರಿಷ್ಠ $418 ಶತಕೋಟಿ ತಲುಪಿದೆ. ಇದು 2013-14 ರ ಸಮಯದಲ್ಲಿದ್ದ $ 14.21 ಶತಕೋಟಿ ರಫ್ತು ಪ್ರಮಾಣಕ್ಕಿಂತ ಶೇ 106ರಷ್ಟು ಹೆಚ್ಚಾಗಿದೆ.

ಅಧಿಕಾರಿಗಳ ಪ್ರಕಾರ, ಸಾವಯವ, ಅಜೈವಿಕ ರಾಸಾಯನಿಕಗಳು, ಕೃಷಿ ರಾಸಾಯನಿಕಗಳು, ಬಣ್ಣಗಳು ಮತ್ತು ವಿಶೇಷ ರಾಸಾಯನಿಕಗಳ ಸಾಗಣೆಯಲ್ಲಿನ ಬೇಡಿಕೆ ಹೆಚ್ಚಳದಿಂದಾಗಿ ರಾಸಾಯನಿಕಗಳ ರಫ್ತು ಬೆಳವಣಿಗೆಯನ್ನು ಸಾಧಿಸಲಾಗಿದೆ. ಇತ್ತೀಚಿನ ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಭಾರತೀಯ ರಾಸಾಯನಿಕ ಉದ್ಯಮವು ಜಾಗತಿಕ ಪ್ರಾಮುಖ್ಯತೆ ಪಡೆದುಕೊಂಡಿದೆ.

ಏಕೆಂದರೆ ದೇಶವು ಆರನೇ ಅತಿದೊಡ್ಡ ರಾಸಾಯನಿಕಗಳ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಏಷ್ಯಾದಲ್ಲಿ ರಾಸಾಯನಿಕಗಳ ಮೂರನೇ ಅತಿದೊಡ್ಡ ಉತ್ಪಾದಕವಾಗಿದೆ. ರಾಸಾಯನಿಕಗಳ ರಫ್ತುದಾರರಾಗಿ, ಭಾರತವು ಪ್ರಸ್ತುತ ರಾಸಾಯನಿಕಗಳ ಜಾಗತಿಕ ರಫ್ತಿನಲ್ಲಿ 14ನೇ ಸ್ಥಾನದಲ್ಲಿದೆ. ಪ್ರಸ್ತುತ, ಭಾರತವು ಪ್ರಪಂಚದ ಪ್ರಮುಖ ಬಣ್ಣಗಳ ಉತ್ಪಾದಕವಾಗಿದೆ ಮತ್ತು ಸರಕುಗಳ ಜಾಗತಿಕ ರಫ್ತಿನ ಸುಮಾರು 16 -18ಗೆ ಕೊಡುಗೆ ನೀಡುತ್ತದೆ. ಭಾರತೀಯ ಬಣ್ಣವನ್ನು 90 ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಕೃಷಿ ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ ಭಾರತ: ಇತ್ತೀಚಿನ ಉತ್ಪಾದನಾ ದತ್ತಾಂಶಗಳ ಪ್ರಕಾರ, ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಕೃಷಿ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ ಮತ್ತು ವಿಶ್ವದ ತಾಂತ್ರಿಕ ದರ್ಜೆಯ ಕೀಟನಾಶಕಗಳಲ್ಲಿ ಅರ್ಧಕ್ಕಿಂತ ಹೆಚ್ಚು ಉತ್ಪಾದಿಸುತ್ತದೆ. ಭಾರತವು ತನ್ನ ಅರ್ಧದಷ್ಟು ಕೃಷಿ ರಾಸಾಯನಿಕ ಉತ್ಪಾದನೆಯನ್ನು ಇತರ ದೇಶಗಳಿಗೆ ರಫ್ತು ಮಾಡುತ್ತದೆ. ಭಾರತವು ವಿಶ್ವದಲ್ಲಿ ಕ್ಯಾಸ್ಟರ್ ಆಯಿಲ್‌ನ ಅತಿದೊಡ್ಡ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ.

ಜಾಗತಿಕ ಖರೀದಿದಾರರ ನೆಲೆ: ಭಾರತ 175 ಕ್ಕೂ ಹೆಚ್ಚು ದೇಶಗಳಿಗೆ ರಸಾಯನಿಕಗಳನ್ನು ರಫ್ತು ಮಾಡುತ್ತಿದೆ. ಅಮೆರಿಕ ಮತ್ತು ಚೀನಾ ಸೇರಿದಂತೆ ವಿಶ್ವದ ಉನ್ನತ ಆರ್ಥಿಕತೆ ಹೊಂದಿರುವ ರಾಷ್ಟ್ರಗಳನ್ನೂ ಒಳಗೊಂಡಿದೆ. ಈ ಎರಡು ದೈತ್ಯ ರಾಷ್ಟ್ರಗಳನ್ನು ಹೊರತುಪಡಿಸಿ, ಭಾರತವು ಹೊಸ ಮಾರುಕಟ್ಟೆಗಳಾದ ಟರ್ಕಿ, ರಷ್ಯಾ ಮತ್ತು ಈಶಾನ್ಯ ಏಷ್ಯಾದ ದೇಶಗಳು ಹಾಗೂ ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಮಕಾವೊ ಮತ್ತು ಮಂಗೋಲಿಯಾ ಮಾರುಕಟ್ಟೆಗಳಿಗೆ ರಾಸಾಯನಿಕಗಳನ್ನು ಪೂರೈಸುತ್ತದೆ. ನಿರಂತರ ಪ್ರಯತ್ನದ ಮೂಲಕ ರಾಸಾಯನಿಕ ರಫ್ತು ಹೆಚ್ಚಳವನ್ನು ಸಾಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:ರಾಜಕೀಯವಾಗಿ ತಟಸ್ಥವಾದಾಗ ಮಾತ್ರ ಟ್ವಿಟರ್ ಸಾರ್ವಜನಿಕ ನಂಬಿಕೆ ಗಳಿಸಲು ಸಾಧ್ಯ: ಎಲಾನ್​ ಮಸ್ಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.