ETV Bharat / business

Stock Market: ಷೇರುಪೇಟೆಯಲ್ಲಿ ಹೂಂಕರಿಸಿದ ಗೂಳಿ: ಹೂಡಿಕೆದಾರರಿಗೆ ₹3 ಲಕ್ಷ ಕೋಟಿ ಲಾಭ!

author img

By

Published : Jun 28, 2023, 5:58 PM IST

ಭಾರತೀಯ ಷೇರು ಮಾರುಕಟ್ಟೆ ಲಾಭದತ್ತ ಮುನ್ನುಗ್ಗುತ್ತಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್​ 64 ಸಾವಿರ, ನಿಫ್ಟಿ 19 ಸಾವಿರ ಅಂಕ ದಾಖಲಿಸಿ ಉತ್ತಮ ವಹಿವಾಟು ನಡೆಸಿವೆ.

ಷೇರುಪೇಟೆಯಲ್ಲಿ ಹೂಂಕರಿಸಿದ ಗೂಳಿ
ಷೇರುಪೇಟೆಯಲ್ಲಿ ಹೂಂಕರಿಸಿದ ಗೂಳಿ

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಬುಧವಾರ ಹೊಸ ಎತ್ತರಕ್ಕೆ ಜಿಗಿದಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 64000 ಅಂಕಗಳ ಗಡಿ ದಾಟಿದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ50 ಕೂಡ ಪ್ರಪ್ರಥಮವಾಗಿ 19000 ಅಂಕಗಳನ್ನು ಮೀರಿ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿತು. ಷೇರು ಮಾರುಕಟ್ಟೆಯು ಕಳೆದ ಮೂರು ದಿನಗಳಿಂದ ಏರಿಕೆ ಗತಿಯಲ್ಲೇ ಸಾಗುತ್ತಿರುವ ಕಾರಣ ಹೂಡಿಕೆದಾರರು 3 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಲಾಭ ಕಂಡಿದ್ದಾರೆ. ದಿನದ ಕೊನೆಯಲ್ಲಿ ಸೆನ್ಸೆಕ್ಸ್​ 499 ಅಂಕ(+0.79%)ಏರಿಕೆ ದಾಖಲಿಸಿದರೆ, 63915.42 ತಲುಪಿದರೆ, ನಿಫ್ಟಿ 154 ಅಂಕ(+0.82%)ಗಳಿಗೆ ವಹಿವಾಟು ಮುಗಿಸಿತು.

ದಿನದ ಆರಂಭದಲ್ಲಿಯೇ ಮಾರುಕಟ್ಟೆ ವಹಿವಾಟು ಏರುಗತಿಯಲ್ಲಿ ಸಾಗಿತು. ಷೇರು ಮಾರುಕಟ್ಟೆಯ ಏರಿಕೆಯಲ್ಲಿ ಹಲವು ಕಂಪನಿಗಳ ಷೇರುಗಳು ಭಾರಿ ಏರಿಕೆ ಕಂಡವು. ಇದರಲ್ಲಿ ಟೈಟಾನ್, ಎನ್​ಟಿಪಿಸಿ, ಟಾಟಾ ಮೋಟಾರ್ಸ್, ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳೂ ಇವೆ. 30 ಸೆನ್ಸೆಕ್ಸ್ ಷೇರುಗಳಲ್ಲಿ 29 ಹಸಿರು ಹಾದಿಯಲ್ಲಿ ವಹಿವಾಟು ನಡೆಸಿದವು. ನಿಫ್ಟಿಯ 50 ಷೇರುಗಳಲ್ಲಿ 47 ಶರ ವೇಗದಲ್ಲಿ ವಹಿವಾಟು ನಡೆಸಿದವು. 3 ಷೇರುಗಳು ಕುಸಿತ ಕಂಡಿದ್ದು ಬಿಟ್ಟರೆ, ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ಗ್ರಾಹಕರಿಗೆ ಸಂಬಂಧಿಸಿದ ಷೇರುಗಳು ಲಾಭ ಗಳಿಸಿದವು.

ಅದಾನಿ ಗ್ರೂಪ್​ನಲ್ಲಿ ಜಿಕ್ಯೂಜಿ ಕಂಪನಿ ಹೂಡಿಕೆ, ಮಾನ್ಸೂನ್ ಆರಂಭ, ಹೆಚ್​ಡಿಎಫ್​ಸಿ ಬ್ಯಾಂಕ್ ಮತ್ತು ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನ ವಿಲೀನ ಘೋಷಣೆಯಂತಹ ಅಂಶಗಳು ಷೇರು ಮಾರುಕಟ್ಟೆಯ ಗತಿಯನ್ನೇ ಬದಲಿಸಿ, ಉತ್ತಮ ಏರಿಕೆಗೆ ಕಾರಣವಾದವು. ಅದಾನಿ ಸಮೂಹದ ಷೇರುಗಳ ಲಾಭದಿಂದಾಗಿ ನಿಫ್ಟಿ ಇದೇ ಮೊದಲ ಬಾರಿಗೆ 19000 ಅಂಕಗಳನ್ನು ದಾಟಿತು. ಜಿಕ್ಯೂಜಿ(GQG) ಹೂಡಿಕೆಯಿಂದಾಗಿ ನಿಫ್ಟಿಯ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್‌ಗಳು ಕ್ರಮವಾಗಿ ಶೇಕಡಾ 4.54 ಮತ್ತು 3.42 ರಷ್ಟು ಲಾಭದೊಂದಿಗೆ ವಹಿವಾಟು ನಡೆಸಿದವು.

64 ಸಾವಿರ ದಾಟಿದ ಸೆನ್ಸೆಕ್ಸ್​​: ಸೆನ್ಸೆಕ್ಸ್ ಜೂನ್ 22 ರಂದು ತನ್ನ ಹಿಂದಿನ ಗರಿಷ್ಠ ದಾಖಲೆಯನ್ನು ಮೀರಿ 63,601.71 ಅಂಕಗಳನ್ನು ದಾಟುವ ಮೂಲಕ ಹೊಸ ದಾಖಲೆ ಬರೆದಿತ್ತು. ಇದು ಷೇರು ಮಾರುಕಟ್ಟೆಯ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ, ಇಂದು ಬೆಳಗ್ಗೆ ಎಲ್ಲ ದಾಖಲೆ ಮೀರಿ 64050.44 ಅಂಕಗಳಿಗೆ ತಲುಪಿ ಹೊಸ ದಾಖಲೆ ನಿರ್ಮಿಸಿತ್ತು.

ಹೆಚ್ಚಿದ ವಿದೇಶಿ ಹೂಡಿಕೆ: ಭಾರತೀಯ ಷೇರು ಮಾರುಕಟ್ಟೆ ಶರವೇಗದಲ್ಲಿ ಹೆಚ್ಚಲು ವಿದೇಶಿ ಹೂಡಿಕೆಯೇ ಕಾರಣವಾಗಿದೆ. ಜೂನ್​ ತಿಂಗಳಿನಲ್ಲಿ 3 ಬಿಲಿಯನ್​ ಡಾಲರ್​ ಹೂಡಿಕೆಯಾಗಿದ್ದರೆ, ಕಳೆದ ನಾಲ್ಕು ತಿಂಗಳಲ್ಲಿ ಅದು 11 ಬಿಲಿಯನ್​ ಅಮೆರಿಕನ್​ ಡಾಲರ್​ ತಲುಪಿದೆ. ಇದು 2020 ರಲ್ಲಾದ ಒಟ್ಟಾರೆ ಹೂಡಿಕೆಯ ಅರ್ಧ ಭಾಗದಷ್ಟಾಗಿದೆ. ವಿಪರೀತ ವಿದೇಶಿ ಹೂಡಿಕೆಯಿಂದಾಗಿ ಮಾರುಕಟ್ಟೆ ವಹಿವಾಟು ಏರಿಕೆಯತ್ತ ಸಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಪರಿಣಾಮ: ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಧನಾತ್ಮಕ ವಹಿವಾಟು ಕೂಡ ಭಾರತೀಯ ಷೇರು ಮಾರುಕಟ್ಟೆಗೆ ಲಾಭ ತಂದು ಕೊಟ್ಟಿದೆ. ಅಮೆರಿಕ ಅಥವಾ ಚೀನಾದ ಮಾರುಕಟ್ಟೆ ಉತ್ತಮ ವಹಿವಾಟು ದಾಖಲಿಸುತ್ತಿದೆ. ಇದು ದೇಶೀಯವಾಗಿಯೂ ಉತ್ಕರ್ಷ ಹೆಚ್ಚಿಸಿದೆ. ನಿನ್ನೆ(ಮಂಗಳವಾರ) ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳು ತೀವ್ರ ಹಿಂಜರಿಕೆ ಕಂಡಿದ್ದವು. ಆದರೂ, ಭಾರತೀಯ ಷೇರು ಮಾರುಕಟ್ಟೆಗಳು ವೇಗ ಪಡೆದುಕೊಂಡಿದ್ದವು.

ಇದನ್ನೂ ಓದಿ: ಕಬ್ಬಿನ ಎಫ್​ಆರ್​ಪಿ 10 ರೂಪಾಯಿ ಹೆಚ್ಚಿಸಿದ ಕೇಂದ್ರ ಸರ್ಕಾರ: ಪ್ರತಿ ಕ್ವಿಂಟಲ್​ಗೆ ₹315 ನಿಗದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.