ETV Bharat / business

ಆರ್ಥಿಕ ಬೆಳವಣಿಗೆಯ ಪ್ರಮುಖ ಅಡಿಪಾಯ ಭಾರತೀಯ ಸ್ಟಾರ್ಟ್ಅಪ್ ವ್ಯವಸ್ಥೆ - ಭಾರತೀಯ ಆರ್ಥಿಕತೆ

ಭಾರತದ ಸ್ಟಾರ್ಟ್​ ಅಪ್ ವ್ಯವಸ್ಥೆಯ ಬಗ್ಗೆ ಡಾ. ಹಿಮಾಚಲಂ ದಾಸರಾಜು ಅವರ ಲೇಖನ ಇಲ್ಲಿದೆ.

indian startup system is an important foundation of economic growth

author img

By ETV Bharat Karnataka Team

Published : Jan 18, 2024, 7:55 PM IST

ಅತ್ಯುತ್ತಮ ಸ್ಟಾರ್ಟ್ಅಪ್​ಗಳು ಮತ್ತು ಅವುಗಳ ಕೊಡುಗೆಯಿಂದ ಭಾರತೀಯ ಆರ್ಥಿಕತೆಯು ಪ್ರವರ್ಧಮಾನಕ್ಕೆ ಬರುತ್ತಿದೆ. ಭಾರತ ಸರ್ಕಾರವು 2016 ರ ಜನವರಿ 16 ರಂದು 'ಸ್ಟಾರ್ಟ್ ಅಪ್ ಇಂಡಿಯಾ' ಪ್ರಮುಖ ಉಪಕ್ರಮವನ್ನು ಪ್ರಾರಂಭಿಸಿತು. ಇದು ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಪೋಷಿಸಲು ಮತ್ತು ಉತ್ತೇಜಿಸಲು ಸೂಕ್ತವಾದ ಪರಿಸರ ವ್ಯವಸ್ಥೆ ರೂಪಿಸುತ್ತದೆ. ಭಾರತದಲ್ಲಿ ಸ್ಟಾರ್ಟ್ಅಪ್ ಉಪಕ್ರಮಗಳು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಮತ್ತು ಭಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

ಸ್ಟ್ಯಾಂಡಪ್ ಇಂಡಿಯಾ ಯೋಜನೆಯನ್ನು 2016 ರ ಏಪ್ರಿಲ್ 5 ರಂದು ಪ್ರಾರಂಭಿಸಲಾಯಿತು. ಇದು 10 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗಿನ ಬ್ಯಾಂಕ್ ಸಾಲಗಳಿಗೆ ಅನುಕೂಲ ಮಾಡಿಕೊಡುತ್ತದೆ. ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಅಡಿ ಅರ್ಹ ಕಂಪನಿಗಳು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಿಂದ (ಡಿಪಿಐಐಟಿ) ಸ್ಟಾರ್ಟ್ಅಪ್​ಗಳಾಗಿ ಮಾನ್ಯತೆ ಪಡೆಯಬಹುದು.

ಜನವರಿ 16, 2024 - ರಾಷ್ಟ್ರೀಯ ಸ್ಟಾರ್ಟ್ಅಪ್ ದಿನ : ಸ್ಟಾರ್ಟ್ಅಪ್ ಇಂಡಿಯಾದ ಸಂಸ್ಥಾಪನಾ ದಿನವಾದ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್ಅಪ್ ದಿನವಾಗಿ ಆಚರಿಸಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2021 ರ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್ಅಪ್ ದಿನ ಎಂದು ಅಧಿಕೃತವಾಗಿ ಘೋಷಿಸಿದರು. ಉದ್ಯಮಶೀಲತೆಯ ಮನೋಭಾವವನ್ನು ಗುರುತಿಸಲು, ಪ್ರಶಂಸಿಸಲು ಮತ್ತು ಪ್ರೋತ್ಸಾಹಿಸಲು ಮತ್ತು ದೃಢವಾದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ವಾರ್ಷಿಕವಾಗಿ ಈ ದಿನವನ್ನು ಆಚರಿಸಲು ಉದ್ದೇಶಿಸಲಾಗಿದೆ. ಇದು ಉದ್ಯಮಿಗಳಿಗೆ ತಮ್ಮ ದೃಷ್ಟಿಕೋನಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು, ಸಂಪರ್ಕಿಸಲು, ಕ್ರಿಯಾ ಯೋಜನೆ, ಸಮಸ್ಯೆಗಳು ಮತ್ತು ಅವರು ಎದುರಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಒದಗಿಸುತ್ತದೆ.

ಭಾರತದಲ್ಲಿ ಸ್ಟಾರ್ಟ್ ಅಪ್​ಗಳ ಸ್ಥಿತಿ: ಭಾರತೀಯ ಉದ್ಯಮಶೀಲ ಪರಿಸರ ವ್ಯವಸ್ಥೆಗಳು ವೇಗವಾಗಿ ಬದಲಾಗುತ್ತಿವೆ. ಭಾರತ ಸರ್ಕಾರವು ಆತ್ಮನಿರ್ಭರ ಭಾರತ್ ನಂತಹ ಯೋಜನೆಗಳೊಂದಿಗೆ ಸ್ಟಾರ್ಟ್ ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ. ಯುಎಸ್ ಮತ್ತು ಚೀನಾದ ನಂತರ 30 ಬಿಲಿಯನ್ ಡಾಲರ್ ಮೌಲ್ಯದ 100 ಕ್ಕೂ ಹೆಚ್ಚು ಯುನಿಕಾರ್ನ್​ಗಳನ್ನು (1 ಬಿಲಿಯನ್ ಡಾಲರ್ ಅಥವಾ ಹೆಚ್ಚಿನ ಹೂಡಿಕೆ) ಹೊಂದಿರುವ ಭಾರತವು ಸ್ಟಾರ್ಟ್ಅಪ್​ಗಳ ಪ್ರಮುಖ ದೇಶವಾಗಿದೆ. ಇಂದು ಭಾರತ ವಿಶ್ವದಲ್ಲಿ ಅತಿ ಹೆಚ್ಚು ಸ್ಟಾರ್ಟ್​ ಅಪ್​ಗಳನ್ನು ಹೊಂದಿದ 3 ನೇ ಅತಿದೊಡ್ಡ ದೇಶವಾಗಿದೆ. 2022ರಲ್ಲಿ ಸುಮಾರು 42 ತಂತ್ರಜ್ಞಾನ ಆಧರಿತ ಸ್ಟಾರ್ಟ್ಅಪ್​ಗಳು ಯುನಿಕಾರ್ನ್ ಕ್ಲಬ್​ಗೆ ಸೇರ್ಪಡೆಯಾಗಿವೆ.

ಅಕ್ಟೋಬರ್ 2023 ರ ಹೊತ್ತಿಗೆ ದೇಶದ 763 ಜಿಲ್ಲೆಗಳಲ್ಲಿ 1,12,718 ಡಿಪಿಐಐಟಿ - ಮಾನ್ಯತೆ ಪಡೆದ ಸ್ಟಾರ್ಟ್ಅಪ್​ಗಳೋಂದಿಗೆ ಭಾರತವು ಅಮೆರಿಕ ಮತ್ತು ಚೀನಾದ ನಂತರ ವಿಶ್ವದ ಸ್ಟಾರ್ಟ್ಅಪ್​ ದೇಶಗಳ ಪೈಕಿ 3 ನೇ ಸ್ಥಾನದಲ್ಲಿದೆ ಮತ್ತು ನಾವೀನ್ಯತೆ ಗುಣಮಟ್ಟದಲ್ಲಿಯೂ 2 ನೇ ಸ್ಥಾನದಲ್ಲಿದೆ. ('ಸ್ಟೇಟ್ ಆಫ್ ದಿ ಇಂಡಿಯನ್ ಸ್ಟಾರ್ಟ್ಅಪ್ ಇಕೋಸಿಸ್ಟಮ್ ರಿಪೋರ್ಟ್ 2023' ಪ್ರಕಾರ).

ಭಾರತೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಗಮನಾರ್ಹ ಬೆಳವಣಿಗೆಯು ಜಾಗತಿಕ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಆರ್ಥಿಕ ಸಮೀಕ್ಷೆ ವರದಿ 2022-23 ರ ಪ್ರಕಾರ, ಸ್ಟಾರ್ಟ್ಅಪ್​ಗಳು 2016 ರಲ್ಲಿ 452 ರಿಂದ 2022 ರಲ್ಲಿ 84,012 ಕ್ಕೆ ಏರಿಕೆಯಾಗಿವೆ. ಭಾರತದಲ್ಲಿನ ಈ ಎಲ್ಲ 84,012 ಸ್ಟಾರ್ಟ್ಅಪ್​ಗಳನ್ನು ಡಿಪಿಐಐಟಿ ಗುರುತಿಸಿದೆ ಮತ್ತು 9 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಇದು 2022 ರಲ್ಲಿ ಶೇ 64ರಷ್ಟು ಹೆಚ್ಚಳವಾಗಿದೆ.

2022 ರಲ್ಲಿ ಮಹಾರಾಷ್ಟ್ರ (4801 ನೋಂದಣಿಗಳು), ಉತ್ತರ ಪ್ರದೇಶ (2572) ಮತ್ತು ದೆಹಲಿ (2567) ಅಗ್ರ 3 ಸ್ಟಾರ್ಟ್ಅಪ್ ಕೇಂದ್ರಗಳಾಗಿ ಹೊರಹೊಮ್ಮಿವೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ತಂತ್ರಜ್ಞಾನಗಳು ಪ್ರಾಮುಖ್ಯತೆ ಪಡೆಯುತ್ತಿರುವ ಮಧ್ಯೆ ಶೇ 91.5ರಷ್ಟು ಪ್ರಮುಖ ಹೂಡಿಕೆದಾರರು ಎಐ ಮತ್ತು ಎಂಎಲ್​ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಜಾಗತಿಕ ಎಐ ಮಾರುಕಟ್ಟೆ 2023 ರಿಂದ 2028 ರವರೆಗೆ ಶೇ 23ರಷ್ಟು ಸಿಎಜಿಆರ್​ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ.

ಸ್ಕೈಕ್ವೆಸ್ಟ್ ವರದಿಯ ಪ್ರಕಾರ ಜಾಗತಿಕ ಇ-ಕಾಮರ್ಸ್ ಮಾರುಕಟ್ಟೆಯು 2028 ರ ವೇಳೆಗೆ 58.74 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಇ-ಕಾಮರ್ಸ್ ವಲಯ ಮಾರುಕಟ್ಟೆಯಲ್ಲಿ ಉತ್ತೇಜನ ಪಡೆದುಕೊಂಡಿದೆ ಮತ್ತು ನವೀನ ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ವಾಣಿಜ್ಯ ಸಚಿವರು (25, ಸೆಪ್ಟೆಂಬರ್ 2023) ಹೇಳಿದಂತೆ, 2016 ರಲ್ಲಿ 450 ಸ್ಟಾರ್ಟ್ಅಪ್​ಗಳಿಂದ ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಮೂಲಕ ಭಾರತವು ಈ ವರ್ಷ 1,00,000 ನೋಂದಾಯಿತ ಸ್ಟಾರ್ಟ್ಅಪ್​ಗಳನ್ನು ಮೀರಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಕ್ರೆಡಿಬಲ್ ವಾರ್ಷಿಕ ವರದಿ 2023 ರ ಪ್ರಕಾರ, ಹಣಕಾಸಿನ ಬಿಕ್ಕಟ್ಟು ಮುಂದುವರಿದಿದ್ದರಿಂದ ಮತ್ತು ಸ್ಟಾರ್ಟ್ಅಪ್​ಗಳನ್ನು ದುರ್ಬಲಗೊಳಿಸಿದ್ದರಿಂದ ಮತ್ತು 2024 ರಲ್ಲಿ ಅದೇ ಪ್ರವೃತ್ತಿ ಮುಂದುವರೆದಿದ್ದರಿಂದ ಈ ಅವಧಿಯು ಭಾರತೀಯ ಸ್ಟಾರ್ಟ್ಅಪ್ಗಳಿಗೆ ಕಠಿಣ ಸಮಯವಾಗಿತ್ತು.

ಹೊಸ ಸವಾಲುಗಳು: ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್ಅಪ್​ಗಳು ಕೆಲ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳಿಂದಾಗಿ ಸ್ಟಾರ್ಟ್​ಅಪ್​ಗಳ ಆಯುಷ್ಯ ಮೊಟಕಾಗುತ್ತಿದೆ. ವೇಗವರ್ಧಿತ ಡಿಜಿಟಲೀಕರಣ, ಪೂರೈಕೆ ಸರಪಳಿ ಕಾರ್ಯವಿಧಾನಗಳಲ್ಲಿನ ಅಡೆತಡೆಗಳು, ನಗದು ಹರಿವಿನ ನಿರ್ವಹಣೆ, ಹಣಕಾಸು ಲಭ್ಯತೆ, ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು, ಸೂಕ್ತ ಜ್ಞಾನ ಆಧಾರಿತ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು, ಮಾರ್ಕೆಟಿಂಗ್ ತಂತ್ರಗಳು, ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವುದು ಮತ್ತು ಕಾನೂನಾತ್ಮಕ ತೊಡಕುಗಳು ಕೆಲ ನಿರ್ಣಾಯಕ ಸವಾಲುಗಳಾಗಿವೆ.

ದುರದೃಷ್ಟವಶಾತ್ ಹೊಸ ಸ್ಟಾರ್ಟ್ಅಪ್ ವೈಫಲ್ಯದ ಪ್ರಮಾಣ ಸುಮಾರು ಶೇ 90ರಷ್ಟಿದೆ. ಉತ್ಪನ್ನ-ಮಾರುಕಟ್ಟೆಯ ಕೊರತೆ, ಕಡಿಮೆ ಲಾಭದಾಯಕತೆ ಮತ್ತು ನಗದು ಹರಿವಿನ ಬಿಕ್ಕಟ್ಟು ಇದಕ್ಕೆ ಪ್ರಮುಖ ಕಾರಣವಾಗಿವೆ. 2022 ರಲ್ಲಿ 25 ಬಿಲಿಯನ್ ಡಾಲರ್​ಗೆ ಹೋಲಿಸಿದರೆ ಭಾರತೀಯ ಸ್ಟಾರ್ಟ್ಅಪ್ ಫಂಡಿಂಗ್ 2023 ರಲ್ಲಿ 7 ಬಿಲಿಯನ್ ಡಾಲರ್​ಗೆ ಇಳಿದಿದೆ. ಇದು 5 ವರ್ಷಗಳ ಕನಿಷ್ಠ ಹಾಗೂ ಶೇ 73ರಷ್ಟು ಕುಸಿತವಾಗಿದೆ ಎಂದು ಟ್ರಾಕ್ಸ್ ಎನ್​ ನ ಅಂಕಿ ಅಂಶಗಳು ತಿಳಿಸಿವೆ. 2023 ರಲ್ಲಿ ಕೇವಲ 4.2 ಬಿಲಿಯನ್ ಡಾಲರ್ ಕೊನೆಯ ಹಂತದ ಫಂಡಿಂಗ್ ಆಗಿರುವುದರಿಂದ ಈ ಕುಸಿತ ಕಂಡು ಬಂದಿದೆ. ಧನಸಹಾಯದಲ್ಲಿ ಒಟ್ಟಾರೆ ಮಂದಗತಿಯ ಹೊರತಾಗಿಯೂ ಎಐ, ಡೀಪ್ ಫೇಕ್, ಪರಿಸರ, ಹವಾಮಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳು ಹೂಡಿಕೆದಾರರ ಗಮನ ಸೆಳೆಯುತ್ತಿವೆ.

ಬೂಟ್ ಸ್ಟ್ರ್ಯಾಪಿಂಗ್, ಕ್ರೌಡ್ ಫಂಡಿಂಗ್, ಏಂಜಲ್ ಹೂಡಿಕೆದಾರರು, ವೆಂಚರ್​ ಕ್ಯಾಪಿಟಲಿಸ್ಟ್​ಗಳು ಮತ್ತು ಸಾಲ ಹೀಗೆ ವಿವಿಧ ಮೂಲಗಳಿಂದ ಹಣ ಪಡೆಯುವುದು ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸುವ ಮೂಲ ಅಂಶವಾಗಿದೆ. ಜಾಗತಿಕ ವೆಂಚರ್ ಫಂಡಿಂಗ್ 2022 ರಲ್ಲಿ $ 445 ಬಿಲಿಯನ್​ಗೆ ತಲುಪಿದೆ. ಭಾರತೀಯ ಸ್ಟಾರ್ಟ್ಅಪ್​ಗಳು 2021 ರಲ್ಲಿ 42 ಬಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ. ಇದು 2020 ರಲ್ಲಿ ಇದ್ದ 11.5 ಬಿಲಿಯನ್ ಡಾಲರ್​ನಿಂದ ಹೆಚ್ಚಾಗಿದೆ. ಇಂಕ್ 42 ಪ್ರಕಾರ ಲೆಟ್ಸ್ ವೆಂಚರ್, ಏಂಜೆಲ್ ಲಿಸ್ಟ್ ಇಂಡಿಯಾ, ಸ್ಟ್ರೈಡ್ ವೆಂಚರ್ಸ್, ಸಿಕ್ವೊಯಾ ಕ್ಯಾಪಿಟಲ್ ಮತ್ತು ಇನ್ನು ಕೆಲವು ಅತ್ಯಂತ ಸಕ್ರಿಯ ಹೂಡಿಕೆದಾರ ಕಂಪನಿಗಳಾಗಿವೆ. ಇದಲ್ಲದೇ, ಸ್ಟಾರ್ಟ್ಅಪ್​ಗಳು 2030 ರ ಅಂತ್ಯದ ವೇಳೆಗೆ ಭಾರತದ ಜಿಡಿಪಿಗೆ ಶೇ 5 ರಿಂದ 10ರಷ್ಟು ಕೊಡುಗೆ ನೀಡಲು ಸಜ್ಜಾಗಿವೆ.

ಭಾರತದಲ್ಲಿನ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು 2023ರಲ್ಲಿ 7 ಬಿಲಿಯನ್ ಡಾಲರ್ ಒಟ್ಟು ಧನಸಹಾಯದೊಂದಿಗೆ (ಡಿಸೆಂಬರ್ 6, 2023) ನಿಧಾನಗತಿಯ ಫಂಡಿಂಗ್ ಸಮಸ್ಯೆ ಎದುರಿಸುತ್ತಿದೆ. ಇದು 2022 ರಲ್ಲಿ ಇದ್ದ 25 ಬಿಲಿಯನ್ ಡಾಲರ್​ನಿಂದ ಶೇ 72ರಷ್ಟು ಕುಸಿತವಾಗಿದೆ. 2023ನೇ ವರ್ಷವು ಕಳೆದ 5 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಫಂಡಿಂಗ್ ಬಂದ ವರ್ಷವಾಗಿದೆ. 2022 ರಲ್ಲಿ 15.6 ಬಿಲಿಯನ್ ಡಾಲರ್ ಇದ್ದ ಕೊನೆಯ ಹಂತದ ಫಂಡಿಂಗ್ 2023 ರಲ್ಲಿ 4.2 ಬಿಲಿಯನ್ ಡಾಲರ್​ಗೆ ಇಳಿದಿದೆ (ಮೂಲ: ವಾರ್ಷಿಕ ವರದಿ: ಟ್ರಾಕ್ಸ್​ಎನ್ ಇಂಡಿಯಾ ಟೆಕ್ 2023, ಫೋರ್ಬ್ಸ್ ಇಂಡಿಯಾ, ಇಂಡಿಯಾ ಟೆಕ್ ಸ್ಟಾರ್ಟ್ಅಪ್ ಫಂಡಿಂಗ್ 2023, ಡಿಸೆಂಬರ್ 19, 2023 ರಲ್ಲಿನ ವರದಿ). 2022 ಮತ್ತು 2023 ರಲ್ಲಿ ಕೇವಲ 1140 ಹೊಸ ಸ್ಟಾರ್ಟ್ಅಪ್​ಗಳು ನೋಂದಣಿಯಾಗಿವೆ. ಇದು 2021 ರಲ್ಲಿ ಆಗಿದ್ದ 1400 ಹೊಸ ಸ್ಟಾರ್ಟ್ಅಪ್​ಗಳಿಗಿಂತ ಕಡಿಮೆಯಾಗಿದೆ.

ಇಂದು ಆಗಬೇಕಾಗಿರುವುದೇನು?: ಉದ್ಯಮಿಗಳು ತಮ್ಮ ಕಾರ್ಯಾಚರಣೆಯ ದಕ್ಷತೆ ಮತ್ತು ಲಾಭದಾಯಕತೆ ಹೆಚ್ಚಿಸುವ ಮೂಲಕ ನಿಧಿಸಂಗ್ರಹದತ್ತ ಗಮನ ಹರಿಸಬೇಕು ಮತ್ತು ಹೆಚ್ಚಿನ ಹೂಡಿಕೆದಾರರನ್ನು ಧನಸಹಾಯಕ್ಕಾಗಿ ಆಕರ್ಷಿಸಬೇಕು. ತಂತ್ರಜ್ಞಾನ ಕೌಶಲ್ಯ ನವೀಕರಣ, ಜಾಗತಿಕ ಸ್ಪರ್ಧೆಗೆ ಸನ್ನದ್ಧತೆ, ವರ್ಧಿತ ಉತ್ಪಾದಕತೆ ಮತ್ತು ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟ ಕಡ್ಡಾಯವಾಗಿದೆ. ಬಳಕೆದಾರ ಸ್ನೇಹಿ ಕಾನೂನು ಚೌಕಟ್ಟು, ನವೋದ್ಯಮಗಳಿಗೆ ತೆರಿಗೆ ರಜಾದಿನ, ಹಣಕಾಸು, ಮಾರ್ಕೆಟಿಂಗ್ ಮತ್ತು ಸರ್ಕಾರದ ಬೆಂಬಲ ಅಗತ್ಯವಿದೆ. ಭಾರತವನ್ನು ಉದ್ಯೋಗ ಸೃಷ್ಟಿಕರ್ತರ ದೇಶವಾಗಿ ಪರಿವರ್ತಿಸುವ ಅವಶ್ಯಕತೆಯಿದೆ.

ಉದ್ಯಮಶೀಲತೆ ಮತ್ತು ಉದ್ಯಮಶೀಲತೆಯ ಚಟುವಟಿಕೆಯ ಉತ್ತಮ ಮನೋಭಾವ ಹೊಂದಿರುವ ದೇಶವು ನವೀನ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬಹುದು. ಈಗಿರುವ 3 ನೇ ಸ್ಥಾನದಿಂದ ಕೆಳಗಿಳಿಯದೆ ಮತ್ತು ಜಾಗತಿಕ ಮಟ್ಟದಲ್ಲಿ ಮುಂದುವರಿಯುತ್ತ ನಮ್ಮ ಸ್ಟಾರ್ಟ್ಅಪ್ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಸ್ಟಾರ್ಟ್ಅಪ್​ಗಳನ್ನು ಕಾಳಜಿಯಿಂದ ಪೋಷಿಸುವುದು ಅತ್ಯಗತ್ಯ. ಸ್ಟಾರ್ಟ್ಅಪ್ ಉದ್ಯಮಿಗಳ ಆವಿಷ್ಕಾರಗಳು ಮತ್ತು ಅವಿರತ ಪ್ರಯತ್ನಗಳನ್ನು ಪ್ರಶಂಸಿಸುವುದು ಅಗತ್ಯ. ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್​ಗಳು ಮತ್ತು ಯುನಿಕಾರ್ನ್​ಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಪುಗಾಲಿಟ್ಟ ಯುವ ಮತ್ತು ಕ್ರಿಯಾತ್ಮಕ ಉದ್ಯಮಿಗಳು ಈ ರಾಷ್ಟ್ರೀಯ ಸ್ಟಾರ್ಟ್ಅಪ್ ದಿನದಂದು (16-01-2024) ಮೆಚ್ಚುಗೆಗೆ ಅರ್ಹರಾಗಿದ್ದಾರೆ.

(ಲೇಖನ : ಡಾ. ಹಿಮಾಚಲಂ ದಾಸರಾಜು, ಪ್ರೊಫೆಸರ್ ಆಫ್ ಕಾಮರ್ಸ್ (ನಿವೃತ್ತ), ಕಾಮನ್ವೆಲ್ತ್ ವಿಸಿಟಿಂಗ್ ಫೆಲೋ, ಯುಕೆ, ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿ)

ಇದನ್ನೂ ಓದಿ : ಎಂಎಸ್​ಎಂಇಗಳಿಗೆ ಸಾಲದ ಕೊರತೆ; ಸರ್ಕಾರ, ಹಣಕಾಸು ಸಂಸ್ಥೆಗಳಿಂದ ತಕ್ಷಣದ ಕ್ರಮ ಅಗತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.