ನವದೆಹಲಿ: ಕಡಿಮೆ ಜನಸಂಚಾರ ಇರುವ ಪ್ರದೇಶದ ಆಯ್ದ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ಗೆ ಶೇಕಡಾ 25ರಷ್ಟು ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ವಂದೇ ಭಾರತ್, ವಿಸ್ಟಾಡೋಮ್ ಹಾಗು ಅನುಭೂತಿ ಸೇರಿದಂತೆ ಇನ್ನಿತರ ರೈಲುಗಳು ರಿಯಾಯಿತಿಯಡಿ ಬರಲಿವೆ.
ಶೇಕಡಾ 50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ಆಯ್ದ ಪ್ರದೇಶಗಳ ಆಯ್ದ ರೈಲುಗಳಿಗೆ ಡಿಸ್ಕೌಂಟ್ ಟಿಕೆಟ್ ದರ ಸಿಗಲಿದೆ. ಈ ಪ್ರದೇಶಗಳಲ್ಲಿ ರೈಲು ಸಂಚಾರವನ್ನು ಹೆಚ್ಚಿಸುವ ಸಲುವಾಗಿ ಈ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಲಾಗಿದೆ.
-
.@RailMinIndia introduces Discount Scheme in AC Chair Car and Executive Classes of all trains having AC Sitting Accommodation including Anubhuti & Vistadome Coaches
— PIB India (@PIB_India) July 8, 2023 " class="align-text-top noRightClick twitterSection" data="
The element of discount shall be upto maximum 25% on the basic fare
Read here: https://t.co/WrI24I2Crt
">.@RailMinIndia introduces Discount Scheme in AC Chair Car and Executive Classes of all trains having AC Sitting Accommodation including Anubhuti & Vistadome Coaches
— PIB India (@PIB_India) July 8, 2023
The element of discount shall be upto maximum 25% on the basic fare
Read here: https://t.co/WrI24I2Crt.@RailMinIndia introduces Discount Scheme in AC Chair Car and Executive Classes of all trains having AC Sitting Accommodation including Anubhuti & Vistadome Coaches
— PIB India (@PIB_India) July 8, 2023
The element of discount shall be upto maximum 25% on the basic fare
Read here: https://t.co/WrI24I2Crt
ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಘೋಷಿಸಲಾದ ರಿಯಾಯಿತಿ ದರದ ಯೋಜನೆಯನ್ನು ಯಾವೆಲ್ಲ ರೈಲುಗಳಿಗೆ ನೀಡಬೇಕು ಎಂಬುದನ್ನು ರೈಲ್ವೇ ವಲಯಗಳ ಪ್ರಧಾನ ವಾಣಿಜ್ಯ ವ್ಯವಸ್ಥಾಪಕರೇ ನಿರ್ಧರಿಸಬೇಕು. ಅವರಿಗೆ ಡಿಸ್ಕೌಂಟ್ ನೀಡುವ ಅಧಿಕಾರವನ್ನು ರೈಲ್ವೆ ಸಚಿವಾಲಯ ನೀಡಿದೆ.
ಈ ರಿಯಾಯಿತಿ ಯೋಜನೆಯು ಎಲ್ಲ ಸಾಮಾನ್ಯ ರೈಲುಗಳ ಜೊತೆಗೆ ಅನುಭೂತಿ ಮತ್ತು ವಿಸ್ಟಾಡೋಮ್, ವಂದೇ ಭಾರತ್ನ ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಆಸನಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.
ರಿಸರ್ವೇಶನ್ ರಿಯಾಯಿತಿ ಇಲ್ಲ: ಮೂಲ ಟಿಕೆಟ್ನ ದರದಲ್ಲಿ ಮಾತ್ರ ಗರಿಷ್ಠ ಶೇ.25ರಷ್ಟು ರಿಯಾಯಿತಿ ಸಿಗಲಿದೆ. ರಿಸರ್ವೇಶನ್ ಶುಲ್ಕ, ಸೂಪರ್ ಫಾಸ್ಟ್ ಸರ್ಚಾರ್ಜ್, ಜಿಎಸ್ಟಿ, ಇತರ ಶುಲ್ಕಗಳು ಈಗಿನಂತೆಯೇ ಇರಲಿವೆ. ಈ ರಿಯಾಯಿತಿಯನ್ನು ಜನಸಂಚಾರದ ಆಧಾರದ ಮೇಲೆ ಯಾವುದೇ ರೈಲು ಅಥವಾ ಕ್ಲಾಸ್ಗಳಿಗೆ ಅನ್ವಯಿಸಬಹುದು ಎಂದೂ ರೈಲ್ವೆ ತಿಳಿಸಿದೆ.
ಕಳೆದ ಒಂದು ತಿಂಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಬುಕ್ಕಿಂಗ್ ಆದ ರೈಲುಗಳು, ಮಾರ್ಗಗಳಿಗೆ ಈ ಯೋಜನೆಯನ್ನು ನೀಡಬಹುದು. ಇದು ಪ್ರಯಾಣಿಕರ ಆರಂಭದ ನಿಲ್ದಾಣದಿಂದ ಕಡೆಯ ನಿಲ್ದಾಣದವರೆಗೆ, ನಿಲ್ದಾಣದಿಂದ ಮುಂದಿನ ನಿಲ್ದಾಣ, ಮಧ್ಯದ ನಿಲ್ದಾಣಗಳಿಗೂ ಈ ರಿಯಾಯಿತಿ ಸಿಗಲಿದೆ.
ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಹಣ ವಾಪಸ್ ಸಿಗುವುದಿಲ್ಲ. ರಜೆ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಬಿಡುವ ಯಾವುದೇ ರೈಲುಗಳಿಗೆ ರಿಯಾಯಿತಿ ಅನ್ವಯಿಸುವುದಿಲ್ಲ. ಯೋಜನೆಯನ್ನು ತಕ್ಷಣಕ್ಕೆ ಅನ್ವಯಿಸುವಂತೆ ಜಾರಿಗೆ ತರಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿ-ಬೀದರ್ ಪ್ಯಾಸೆಂಜರ್ ರೈಲಿನ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ; ಮಹಿಳೆಗೆ ಗಾಯ