ETV Bharat / business

ಜಾಗತಿಕ ಆರ್ಥಿಕ ಹಿಂಜರಿತ ಭಾರತದ ಸದೃಢತೆಯನ್ನು ಅಷ್ಟೊಂದು ಘಾಸಿಗೊಳಿಸಲ್ಲ: ಎಸ್​​​​​ಬಿಐ ಚೇರ್ಮನ್​ ವಿಶ್ವಾಸ

ಜಾಗತಿಕ ಆರ್ಥಿಕ ಹಿಂಜರಿತದಿಂದ ಭಾರತವು ಇತರ ದೇಶಗಳಂತೆ ತೀವ್ರವಾಗಿ ಹಾನಿಗೊಳಗಾಗುವ ಸಾಧ್ಯತೆಯಿಲ್ಲ ಎಂದು ಎಸ್‌ಬಿಐ ಅಧ್ಯಕ್ಷ ಖಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

US-RECESSION-SBI CHIEF
ಜಾಗತಿಕ ಆರ್ಥಿಕ ಹಿಂಜರಿತ ಭಾರತದ ಸದೃಢತೆಯನ್ನು ಅಷ್ಟೊಂದು ಘಾಸಿಗೊಳಿಸಲ್ಲ
author img

By

Published : Oct 15, 2022, 7:18 AM IST

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ ಕಳವಳ ವ್ಯಕ್ತಪಡಿಸಿರುವಂತೆ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವು ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಷ್ಟೊಂದು ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡುವ ಸಾಧ್ಯತೆ ಇಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ದಿನೇಶ್ ಖಾರಾ ಭರವಸೆ ನೀಡಿದ್ದಾರೆ.

6.8 ರಷ್ಟು ಜಿಡಿಪಿ ಬೆಳವಣಿಗೆ ದರ ಮತ್ತು ಹಣದುಬ್ಬರವು ಹೆಚ್ಚು ನಿಯಂತ್ರಣದಲ್ಲಿದೆ ಎಂದು ಆರ್​ಬಿಐ ಹೇಳಿದ್ದು, ಭಾರತದ ಅರ್ಥ ವ್ಯವಸ್ಥೆ ಸಮಂಜಸವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖಾರಾ ಹೇಳಿದ್ದಾರೆ.

ನಾವು ಬೀಟಾ ಅಂಶವನ್ನು ನೋಡಿದರೆ ಗಮನಾರ್ಹ ರಫ್ತಿನ ಅಂಶಗಳನ್ನು ಹೊಂದಿರುವ ಇತರ ಕೆಲವು ದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ ಬಹುಶಃ ಭಾರತೀಯ ಆರ್ಥಿಕತೆಯ ಬೀಟಾ ಅಂಶವು ತುಂಬಾ ಕಡಿಮೆ ಇದೆ ಎಂದು ಅವರು ಹೇಳಿದರು. ಜಾಗತಿಕ ಆರ್ಥಿಕತೆಯ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಭಾರತವು ತನ್ನ ಯೋಜಿತ ಬೆಳವಣಿಗೆ ದರ 6.8 ಪ್ರತಿಶತ ಕಾಪಾಡಿಕೊಂಡಿದೆ. ಅಷ್ಟೇ ಅಲ್ಲ ಜಾಗತಿಕ ತಲೆನೋವಿನ ಹೊರತಾಗಿಯೂ ಹಣದುಬ್ಬರವು ಹೆಚ್ಚು ನಿಯಂತ್ರಣದಲ್ಲಿದೆ ಎಂದು ಎಸ್​​​ಬಿಐ ಅಧ್ಯಕ್ಷ ದಿನೇಶ್ ಖಾರಾ ಹೇಳಿದರು.

ಇದನ್ನು ಓದಿ:ಹಣಕಾಸು ವಿಚಾರ: ಹಣದುಬ್ಬರದ ಪ್ರಭಾವ ತಡೆಗೆ ಹೂಡಿಕೆಯಲ್ಲಿರಲಿ ವೈವಿಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.