ETV Bharat / business

ಖುಷಿ ಸುದ್ದಿ: ಈಗ ವಿಶ್ವದ 3ನೇ ಅತಿದೊಡ್ಡ ವಾಹನ ತಯಾರಕ ದೇಶ ಭಾರತ

author img

By

Published : Jan 8, 2023, 3:12 PM IST

ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ವಾಹನೋದ್ಯಮ- ಕೋವಿಡ್​ ಕರಿನೆರಳು ಸರಿದ ಬಳಿಕ ಚೇತರಿಕೆ- ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ

ಈಗ ವಿಶ್ವದ 3ನೇ ಅತಿದೊಡ್ಡ ವಾಹನ ತಯಾರಕ ದೇಶ ಭಾರತ !
india-is-now-the-3rd-largest-car-manufacturer-in-the-world

ಟೋಕಿಯೋ(ಜಪಾನ್​): ಈ ಹಿಂದೆ ಕೋವಿಡ್​ ಬಿಕ್ಕಟ್ಟಿನಿಂದ ನೆಲಕಚ್ಚಿದ್ದ ವ್ಯಾಪಾರ ವಹಿವಾಟು ಸದ್ಯ ಚೇತರಿಕೆಯ ಹಾದಿಯನ್ನು ಕಂಡುಕೊಳ್ಳುತ್ತಿದೆ. ಅದರಲ್ಲೂ ವಾಹನೋದ್ಯಮದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಭಾರತವು ಕಳೆದ ವರ್ಷ ವಾಹನ ಮಾರಾಟದಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಇದೇ ಮೊದಲ ಬಾರಿಗೆ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ ಎಂದು ನಿಕ್ಕಿ ಏಷ್ಯಾ ಶುಕ್ರವಾರ ವರದಿ ಮಾಡಿದೆ. ಭಾರತದ ಹೊಸ ವಾಹನಗಳ ಮಾರಾಟವು ಕನಿಷ್ಠ 4.25 ಮಿಲಿಯನ್ ಯುನಿಟ್‌ಗಳಾಗಿದ್ದು, ಪ್ರಾಥಮಿಕ ಫಲಿತಾಂಶಗಳ ಆಧಾರದ ಮೇಲೆ ಜಪಾನ್‌ನಲ್ಲಿ ಮಾರಾಟವಾದ 4.2 ಮಿಲಿಯನ್‌ ಸಂಖ್ಯೆಯನ್ನು ಮೀರಿಸಿ ಅಗ್ರಸ್ಥಾನದಲ್ಲಿದೆ.

ಮಾರುತಿ ಸುಜುಕಿಯಿಂದ ವರದಿ.. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಪ್ರಕಾರ, 2022 ರ ಜನವರಿ ಮತ್ತು ನವೆಂಬರ್ ನಡುವೆ ಭಾರತದಲ್ಲಿ ಮಾರಾಟವಾದ ಹೊಸ ವಾಹನಗಳ ಒಟ್ಟು ಸಂಖ್ಯೆ 4.13 ಮಿಲಿಯನ್. ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಭಾನುವಾರದಂದು ವರದಿ ಮಾಡಿದ ಡಿಸೆಂಬರ್‌ನ ಮಾರಾಟದ ಪ್ರಮಾಣವನ್ನು ಸೇರಿಸಿದರೆ, ಒಟ್ಟು ಮಾರಾಟ ಮೊತ್ತ ಸರಿಸುಮಾರು 4.25 ಮಿಲಿಯನ್ ಯುನಿಟ್‌ಗಳಿಗೆ ತಲುಪುತ್ತದೆ.

ನಿಕ್ಕಿ ಏಷ್ಯಾದ ಪ್ರಕಾರ, ಟಾಟಾ ಮೋಟಾರ್ಸ್ ಮತ್ತು ಇತರ ವಾಹನ ತಯಾರಕರು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿರುವ ವರ್ಷಾಂತ್ಯದ ಮಾರಾಟ ಫಲಿತಾಂಶಗಳು ಮತ್ತು ಬಾಕಿ ಉಳಿದಿರುವ ನಾಲ್ಕನೇ ತ್ರೈಮಾಸಿಕದಲ್ಲಿ ವಾಣಿಜ್ಯ ವಾಹನಗಳ ಮಾರಾಟದ ಅಂಕಿಅಂಶಗಳನ್ನು ಸೇರಿಸಿದಲ್ಲಿ ಭಾರತದಲ್ಲಿನ ವಾಹನಗಳ ಮಾರಾಟದ ಪ್ರಮಾಣವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಮೊದಲ ಸ್ಥಾನದಲ್ಲಿ ಚೀನಾ.. 2021 ರಲ್ಲಿ, ಚೀನಾ 26.27 ಮಿಲಿಯನ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. 15.4 ಮಿಲಿಯನ್ ವಾಹನ ಮಾರಾಟದೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದ್ದರೆ, 4.44 ಮಿಲಿಯನ್ ಯುನಿಟ್‌ ಮಾರಾಟದೊಂದಿಗೆ ಜಪಾನ್ ಮೂರನೇ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ವಾಹನ ಮಾರುಕಟ್ಟೆ ಏರಿಳಿತ ಕಂಡಿದೆ ಎಂದು ನಿಕ್ಕಿ ಏಷ್ಯಾ ಹೇಳಿದೆ. 2018 ರಲ್ಲಿ ಸರಿಸುಮಾರು 4.4 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಆದರೆ 2019 ರಲ್ಲಿ ಈ ಪ್ರಮಾಣ 4 ಮಿಲಿಯನ್ ಯುನಿಟ್‌ಗಳಿಗಿಂತ ಕಡಿಮೆಯಾಗಿತ್ತು.

ಕೋವಿಡ್ ಸಾಂಕ್ರಾಮಿಕದ ಕಾರಣದಿಂದ 2020 ರಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ವಾಹನ ಮಾರಾಟವು 3 ಮಿಲಿಯನ್-ಯೂನಿಟ್ ಮಿತಿಗಿಂತ ಕೆಳಗೆ ಕುಸಿದಿತ್ತು. 2021 ರಲ್ಲಿ ಮಾರಾಟವು 4 ಮಿಲಿಯನ್ ಯುನಿಟ್‌ಗೆ ಏರಿಕೆಯಾಗಿತ್ತು. ಆದರೆ ಆಟೋಮೋಟಿವ್ ಚಿಪ್‌ಗಳ ಕೊರತೆಯಿಂದ ವಾಹನೋದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಹೈಬ್ರಿಡ್ ವಾಹನಗಳು ಸೇರಿದಂತೆ ಗ್ಯಾಸೋಲಿನ್‌ ಚಾಲಿತ ವಾಹನಗಳು ಕಳೆದ ವರ್ಷ ಹೆಚ್ಚಾಗಿ ಮಾರಾಟವಾಗಿರುವುದರಿಂದ ದೇಶದ ಒಟ್ಟಾರೆ ವಾಹನ ಮಾರಾಟ ಪ್ರಮಾಣ ಏರಿಕೆಯಾಗಿದೆ. ಎಲೆಕ್ಟ್ರಿಕ್ ವಾಹನಗಳು ಹೇಳಿಕೊಳ್ಳುವಂಥ ಅಸ್ತಿತ್ವ ಹೊಂದಿಲ್ಲ ಎಂದು ನಿಕ್ಕಿ ಏಷ್ಯಾ ಹೇಳಿದೆ.

ನಿವಾರಣೆಯಾದ ಆಟೋಮೋಟಿವ್ ಚಿಪ್ ಕೊರತೆ.. ನಿಕ್ಕಿ ಏಷ್ಯಾದ ಪ್ರಕಾರ, 2022 ರಲ್ಲಿ ಆಟೋಮೋಟಿವ್ ಚಿಪ್ ಕೊರತೆಯ ಬಿಕ್ಕಟ್ಟು ನಿವಾರಣೆಯಾಗಿರುವುದು ವಾಹನೋದ್ಯಮಕ್ಕೆ ವೇಗವರ್ಧಕವಾಗಿದೆ. ಮಾರುತಿ ಸುಜುಕಿ ಜೊತೆಗೆ, ಟಾಟಾ ಮೋಟಾರ್ಸ್ ಮತ್ತು ಇತರ ಭಾರತೀಯ ವಾಹನ ತಯಾರಿಕಾ ಕಂಪನಿಗಳು ಕಳೆದ ವರ್ಷ ಮಾರಾಟದಲ್ಲಿ ಬೆಳವಣಿಗೆ ಕಂಡಿವೆ. ಭಾರತವು 1.4 ಶತಕೋಟಿ ಜನಸಂಖ್ಯೆ ಹೊಂದಿದ್ದು, ಅದರ ಜನಸಂಖ್ಯೆಯು ಈ ವರ್ಷ ಚೀನಾವನ್ನು ಮೀರಿಸಲಿದೆ. 2060 ರ ದಶಕದ ಆರಂಭದವರೆಗೂ ಭಾರತದ ಜನಸಂಖ್ಯೆ ಬೆಳವಣಿಗೆಯಾಗಲಿದ್ದು, ಅದೇ ರೀತಿ ಆದಾಯವೂ ಕೂಡ ಹೆಚ್ಚುತ್ತಿದೆ.

ಇದನ್ನೂ ಓದಿ: ಭಾರತಕ್ಕೆ ಸೂಕ್ತ ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳ ಅಭಿವೃದ್ಧಿ: CSE, DST ಸಹಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.