ನವದೆಹಲಿ: ಕಾಫಿ ಮೇಲಿನ ಪ್ರೀತಿ ಮತ್ತು ಅಭಿಮಾನ ಬ್ರಿಟನ್ ಜನರಲ್ಲಿ ಹೆಚ್ಚಿದೆ. ಆದರೆ, ಹವಾಮಾನ ಬಿಕ್ಕಟ್ಟಿನಿಂದಾಗಿ ಈ ಉದ್ಯಮ ಇದೀಗ ಅಪಾಯದಲ್ಲಿದೆ ಎಂದು ಚಾರಿಟಿ ಕ್ರಿಶ್ಚಿಯನ್ ಏಡ್ ತನ್ನ ಹೊಸ ವರದಿಯಲ್ಲಿ ಸೋಮವಾರ ತಿಳಿಸಿದೆ. ಬಡದೇಶಗಳ ಕಾಫಿ ಬೆಳೆಗಾರರಿಗೆ ಶ್ರೀಮಂತ ದೇಶಗಳ ಆರ್ಥಿಕ ಸಹಾಯ ಬೇಕಾಗಿದೆ. ಈ ಹವಾಮಾನ ಬದಲಾವಣೆಯಿಂದ ಉಂಟಾಗುವ ನಷ್ಟದಿಂದಿ ಹೊರ ಬರಲು ಅವರಿಗೆ ಸಹಾಯ ನೀಡಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬ್ರಿಟನ್ನಲ್ಲಿ 98 ಮಿಲಿಯನ್ ಕಪ್ ಕಾಫಿ ದಿನವೊಂದಕ್ಕೆ ಬೇಕಾಗಿದೆ. ಚಾರಿಟಿ ಕ್ರಿಶ್ಚಿಯನ್ ಏಡ್ ಲೆಕ್ಕಚಾರದ ಪ್ರಕಾರ, ಇದರ ಪ್ರಮಾಣ 9 ಒಲಿಂಪಿಕ್ ಗಾತ್ರದ ಈಜುಕೊಳ ಭರ್ತಿಯಾಗಲಿದೆ. ಆದಾಗ್ಯೂ ಅಂತಾರಾಷ್ಟ್ರೀಯ ಅಭಿವೃದ್ಧಿ ಚಾರಿಟಿ, ರೈತರು ಎದುರಿಸುತ್ತಿರುವ ಹವಾಮಾನ ಬದಲಾವಣೆ ಪರಿಣಾಮಗಳಾದ ತಾಪಮಾನದ ಏರಿಕೆ, ಅನಿರೀಕ್ಷತ ಮಳೆ, ರೋಗ ಮತ್ತು ಬರ ಹಾಗೂ ಭೂಕುಸಿತ ಕುರಿತು ವಿಶ್ಲೇಷಣೆ ನಡೆಸಿದೆ.
ತಾಪಮಾನದಲ್ಲಿ ಕೇವಲ 1.5-2 ಡಿಗ್ರಿ ಹೆಚ್ಚಳವೂ ಕಾಫಿ ಬೆಳೆಯುವ ಭೂಮಿಯ ಪ್ರಮಾಣವನ್ನು ಕ್ಷೀಣಿಸುವಂತೆ ಮಾಡಿದೆ ಎಂದು ತಜ್ಞರು ತಿಳಿಸಿದ್ದಾರೆ. ಬ್ರೆಜಿಲ್ ಮತ್ತು ವಿಯಟ್ನಾ ಸದ್ಯ ಕಾಫಿಯನ್ನು ಆಮದು ಮಾಡುತ್ತಿರುವ ಪ್ರಮುಖ ದೇಶಗಳಾಗಿವೆ. ಕ್ರಿಶ್ಚಿಯನ್ ಏಡ್ ನೇತೃತ್ವದ ಸವಂಟಾ ಸಮೀಕ್ಷೆಯಲ್ಲಿ, ಬ್ರಿಟನ್ನ ಐದರಲ್ಲಿ ಮೂರು ಮಂದಿ ಅಂದರೆ ಶೇ 57ರಷ್ಟು ಹದಿಹರೆಯದವರು ಈ ತಾಪಮಾನದ ಬಗ್ಗೆ ಕಾಳಜಿ ಹೊಂದಿದ್ದಾರೆ. ಅಲ್ಲದೇ ಇದು ಕಾಫಿಯ ಲಭ್ಯತೆ, ರುಚಿ ಮತ್ತು ಬೆಲೆ ಮೇಲೆ ಪರಿಣಾಮವನ್ನು ಹೊಂದಿದೆ ಎಂದಿದ್ದಾರೆ.
ಹವಾಮಾನ ಬಿಕ್ಕಟ್ಟಿನ ಪರಿಣಾಮ: ಸಮೀಕ್ಷೆಯಲ್ಲಿ 10ರಲ್ಲಿ 7 ಬ್ರಿಟನ್ ವಯಸ್ಕರು ಅಂದರೆ ಶೇ 69ರಷ್ಟು ಮಂದಿ ಬ್ರಿಟನ್ಗೆ ಆಹಾರ ಪೂರೈಕೆ ಸರಪಳಿ ಮೇಲೆ ಉಂಟಾಗುತ್ತಿರುವ ಹವಾಮಾನ ಬಿಕ್ಕಟ್ಟನ್ನು ಕಡಿಮೆ ಮಾಡಲು ಸರ್ಕಾರ ಹೆಚ್ಚಿನದನ್ನು ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದಿದ್ದಾರೆ. 'ವೇಕ್ ಅಪ್ ಅಂಡ್ಸ್ಮೆಲ್ ಕಾಫಿ: ದಿ ಕ್ಲೈಮೆಟ್ ಕ್ರೈಸಿಸ್ ಅಂಡ್ ಯುವರ್ ಕಾಫಿ'ಯಲ್ಲಿ ಈ ಕುರಿತು ವರದಿಯನ್ನು ಪ್ರಕಟಿಸಲಾಗಿದೆ
ಇನ್ನು ಈ ವರದಿಯ ಅಂತಿಮವಾಗಿ, ಹವಾಮಾನ ಬದಲಾವಣೆ ಮತ್ತು ಬಡತನವನ್ನು ಎದುರಿಸುತ್ತಿರುವ ದೇಶಗಳಿಗೆ ಸಹಾಯ ಮಾಡಲು ಶ್ರೀಮಂತ ದೇಶಗಳಿಗೆ ಸಹಾಯ ಮಾಡಲು ಶಿಫಾರಸು ಮಾಡಿದೆ. ದಿ ಫೇರ್ಟ್ರೆಡ್ ಫೌಂಡೇಷನ್, ಮಲವಿಯಲ್ಲಿನ ದಿ ಮಜುಸು ಕಾಫಿ ಕೊ ಆಪರೇಟಿವ್, ಯುಕೆ ಮೂಲದ ಕ್ಯಾಟುರಾ ಖಾಫಿ ಕ್ಲಬ್ ಮತ್ತು ಹವಾಮಾನ ತಜ್ಞರು ಕಾಫಿ ಮೇಲೆ ಹವಾಮಾನ ಬಿಕ್ಕಟ್ಟಿನ ಪರಿಣಾಮವನ್ನು ಚರ್ಚಿಸಿದ್ದಾರೆ.
ಮ್ಯಾಕ್ಸೊನ್ ನಗಂಬಿ, ಮುಖ್ಯ ಕಾರ್ಯನಿರ್ವಹಾಕರಾದ ಮ್ಜುಜು ಕಾಫಿ ಕೊ ಆಪರೇಷನ್ ಮಲವಿ ಹೇಳುವಂತೆ, ಜಾಗತಿಕ ಕಾಫಿ ದರ ಗಣನೆಗೆ ತೆಗೆದುಕೊಳ್ಳಬೇಕಿದೆ. ಕಾಫಿ ಬೆಳೆಗಾರರು ತಮ್ಮ ಪ್ರದೇಶಗಳ ಅಭಿವೃದ್ಧಿ ಮತ್ತು ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಪರಿಗಣಿಸದೇ ಕಾಫಿ ದರವನ್ನು ಗಮನಕ್ಕೆ ತೆಗೆದುಕೊಳ್ಳದಿದ್ದರೆ ಅನೇಕ ಬೆಳೆಗಾರರು ಕಾಫಿ ಬೆಳೆಯನ್ನು ಕೈ ಬಿಡುತ್ತಾರೆ.
ನೇರ ಹಣಕಾಸಿನ ಅಗತ್ಯವೂ ಇದೆ, ಇದು ಸಣ್ಣ ಪ್ರಮಾಣದ ಕಾಫಿ ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಕ್ರಮಗಳನ್ನು ಮಾಡದಿದ್ದರೆ, ಮುಂಬರುವ ವರ್ಷಗಳಲ್ಲಿ ನಾವು ಕಾಫಿಯ ಬಗ್ಗೆ ಮರೆತು ಬಿಡಬೇಕು. ಕ್ರಿಶ್ಚಿಯನ್ ಏಡ್ ಮುಖ್ಯ ಕಾರ್ಯನಿರ್ವಾಹಕ ಪ್ಯಾಟ್ರಿಕ್ ವ್ಯಾಟ್ ಪ್ರಕಾರ, ಯುಕೆ ಸರ್ಕಾರವು ಒಂದು ಬದಲಾವಣೆಯನ್ನು ಮಾಡಲು ಅವಕಾಶವನ್ನು ಹೊಂದಿದೆ. ಜಾಗತಿಕ ತಾಪಮಾನ ಏರಿಕೆಗೆ ಕಡಿಮೆ ಕೊಡುಗೆ ನೀಡಿದರೂ, ಕಾಫಿ ರೈತರು ಹವಾಮಾನ ಬಿಕ್ಕಟ್ಟಿನ ಮುಂಚೂಣಿಯಲ್ಲಿದ್ದಾರೆ. ಯುಕೆ ಸರ್ಕಾರ ಎಚ್ಚೆತ್ತುಕೊಂಡು ಕಾಫಿ ಬೆಳೆಗಾರರಿಗೆ ಸಹಾಯ ಮಾಡಬೇಕು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಅಸ್ಸೋಂ ಟೀ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್: 1 ವರ್ಷದಲ್ಲಿ 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ