ETV Bharat / business

ನಾನೂ ಮಧ್ಯಮ ವರ್ಗದವಳು, ಅವರ ಕಷ್ಟ ಅರ್ಥವಾಗುತ್ತೆ: ವಿತ್ತ ಸಚಿವೆ ಸೀತಾರಾಮನ್ - ನಾನೂ ಮಧ್ಯಮ ವರ್ಗದವಳು

ಫೆಬ್ರವರಿ 1 ರಂದು ಈ ವರ್ಷದ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಅದಕ್ಕೂ ಮುನ್ನ ದೆಹಲಿಯಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಧ್ಯಮ ವರ್ಗದವರ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ ಎಂದು ಹೇಳಿದ್ದಾರೆ.

Understand pressures of middle class as I belong to same category says Sitharaman

author img

By

Published : Jan 16, 2023, 5:00 PM IST

ನವದೆಹಲಿ: ತಾವು ಸಹ ಮಧ್ಯಮವರ್ಗದಿಂದಲೇ ಬಂದವರಾಗಿರುವುದರಿಂದ ಮಧ್ಯಮ ವರ್ಗದ ಜನತೆ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಸಂವೇದನಾಶೀಲರಾಗಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್‌ಎಸ್‌ಎಸ್ ಮುಖವಾಣಿ ಪಾಂಚಜನ್ಯ ಪ್ರಕಟಣೆಯ 75ನೇ ವರ್ಷದ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ವಿತ್ತ ಸಚಿವರು, ಮಧ್ಯಮ ವರ್ಗದವಳಾದ ನನಗೆ ಅವರ ಮೇಲಿನ ಒತ್ತಡಗಳ ಬಗ್ಗೆ ತಿಳಿದಿತ್ತು. ಮತ್ತು ಹೀಗಾಗಿಯೇ ಸರ್ಕಾರ ಅವರ ಮೇಲೆ ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದುವರೆಗೆ ಯಾವುದೇ ಬಜೆಟ್‌ನಲ್ಲಿ ಮಧ್ಯಮ ವರ್ಗದ ಮೇಲೆ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ. 5 ಲಕ್ಷದವರೆಗೆ ಆದಾಯ ಹೊಂದಿರುವ ಜನರ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಿಲ್ಲ ಎಂದು ಸೀತಾರಾಮನ್ ಕಾರ್ಯಕ್ರಮದ ವೇಳೆ ಹೇಳಿದರು. ಫೆಬ್ರವರಿ 1 ರಂದು 2023-24 ರ ಕೇಂದ್ರ ಬಜೆಟ್ ಅನ್ನು ಮಂಡಿಸುವ ಕೆಲವೇ ದಿನಗಳ ಮೊದಲು ಬಂದಿರುವ ಅವರ ಈ ಹೇಳಿಕೆಗಳು ಗಮನಾರ್ಹ.

ಸಂವಾದ ಸಹಿತ ನಡೆದ ಕಾರ್ಯಕ್ರಮದಲ್ಲಿ, ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವರು, ಪ್ರತಿಯೊಬ್ಬರೂ ಈ ವಿಷಯದಲ್ಲಿ ಪರಸ್ಪರರನ್ನು ಮೀರಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು. ಜನರು ಉಚಿತ ಕೊಡುಗೆಗಳ ಬಗ್ಗೆ ಮಾತನಾಡುವ ಮೂಲಕ ಒಬ್ಬರನ್ನೊಬ್ಬರು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ. ಆದರೆ, ಏನನ್ನು ನೀವು ಉಚಿತವಾಗಿ ಕೊಡುತ್ತಿರುವಿರಿ ಎಂಬುದು ವಿಷಯವಲ್ಲ. ನೀವು ಆ ಉಚಿತ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದೇ ಮುಖ್ಯ ಸಮಸ್ಯೆ ಎಂದು ಅವರು ಹೇಳಿದರು.

ಯಾರಾದರೂ ಉಚಿತ ಕೊಡುಗೆಗಳನ್ನು ನೀಡುವುದಾಗಿ ಹೇಳಿಕೊಂಡರೆ, ಅವರು ಅದನ್ನು ಬಜೆಟ್‌ನಲ್ಲಿ ತೋರಿಸಬೇಕು ಮತ್ತು ವರ್ಷಾಂತ್ಯದಲ್ಲಿ ಅವರು ಬಜೆಟ್ ಅನ್ನು ಪರಿಶೀಲಿಸಬೇಕು. ಬಜೆಟ್ ಅಥವಾ ಖಾತೆ ಖಾಲಿಯಾಗಿರುವುದು ಕಂಡುಬಂದರೆ, ಆವಾಗ ಅಂಥ ವೆಚ್ಚವನ್ನು ಉಚಿತ ಎಂದು ಕರೆಯಲಾಗುವುದಿಲ್ಲ ಎಂದರು. ಉಚಿತ ಕೊಡುಗೆಗಳ ಬಗ್ಗೆ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್, ದೆಹಲಿ ಸರ್ಕಾರವು ನಾಗರಿಕರಿಗೆ ನಿರ್ದಿಷ್ಟ ಮಿತಿಯವರೆಗೆ ಉಚಿತ ವಿದ್ಯುತ್ ನೀಡುತ್ತಿದೆ ಎಂದು ಹೇಳಿದರು.

ಅನೇಕ ರಾಜ್ಯಗಳು ಜನರಿಗೆ ಉಚಿತ ಕೊಡುಗೆಗಳನ್ನು ನೀಡುತ್ತಿವೆ. ಆದರೆ, ಅವುಗಳನ್ನು ತಮ್ಮ ಬಜೆಟ್‌ನಲ್ಲಿ ತೋರಿಸುವುದಿಲ್ಲ ಎಂದು ಅವರು ಹೇಳಿದರು. ಅವರು ತಾವು ಖರ್ಚು ಮಾಡಿದ್ದನ್ನು ತುಂಬಿಸುವ ಕೆಲಸವನ್ನು ಮೋದಿಯವರಿಗೆ ಬಿಡುತ್ತಾರೆ. ಹೀಗಿರುವಾಗ ನೀವು ಉಚಿತ ಕೊಡುಗೆಗಳ ಹೆಸರಿನಲ್ಲಿ ಮತ ಕೇಳಿದರೆ, ಕೇಂದ್ರ ಏಕೆ ಅದರ ಹೊರೆ ಹೊರಬೇಕು ಎಂದು ಸಚಿವರು ಪ್ರಶ್ನಿಸಿದರು.

ಮಧ್ಯಮ ವರ್ಗದವರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುತ್ತಾರೆ ಮತ್ತು ನಾವು 27 ನಗರಗಳಲ್ಲಿ ಮೆಟ್ರೋ ರೈಲು ಸೌಲಭ್ಯ ಆರಂಭಿಸಿದ್ದೇವೆ. ಬಹಳಷ್ಟು ಮಧ್ಯಮ ವರ್ಗದ ಜನರು ಉದ್ಯೋಗದ ಹುಡುಕಾಟದಲ್ಲಿ ನಗರಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಹೀಗಾಗಿ ನಾವು ಸ್ಮಾರ್ಟ್ ಸಿಟಿಗಳ ನಿರ್ಮಾಣದತ್ತ ಗಮನಹರಿಸುತ್ತಿದ್ದೇವೆ. ನಾವು ಮಧ್ಯಮ ವರ್ಗದವರಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಸೀತಾರಾಮನ್ ಹೇಳಿದರು.

ಇದನ್ನೂ ಓದಿ: ಗಡಿ ತಂಟೆ: ಚೀನಾ ದೇಶಕ್ಕೆ ನಮ್ಮ ಪ್ರತಿಕ್ರಿಯೆ ಪ್ರಬಲ, ದೃಢವಾಗಿದೆ: ಜೈಶಂಕರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.