ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಒಟ್ಟು 1.72 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) (GST Revenue Collection) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ತಿಳಿಸಿದೆ. ಕಳೆದ ವರ್ಷ ಇದೇ ಅಕ್ಟೋಬರ್ ತಿಂಗಳ ಜಿಎಸ್‌ಟಿ ಆದಾಯಕ್ಕೆ ಹೋಲಿಸಿದರೆ, ಈ ಬಾರಿ ಶೇ.13ರಷ್ಟು ಅಧಿಕ ಆದಾಯ ಸಂಗ್ರಹವಾಗಿದೆ ಎಂದು ಹೇಳಿದೆ.
ಅಕ್ಟೋಬರ್ನಲ್ಲಿ ಒಟ್ಟಾರೆ 1,72,003 ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ (CGST) 30,062 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿ (SGST) 38,171 ಕೋಟಿ ರೂ. ಹಾಗೂ ಸಮಗ್ರ ಜಿಎಸ್‌ಟಿ (IGST) 91,315 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,127 ಕೋಟಿ ರೂ.) ಸೇರಿದೆ. ಜೊತೆಗೆ ಸೆಸ್ ರೂಪದಲ್ಲಿ 12,456 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,294 ಕೋಟಿ ರೂ.ಸೇರಿ) ಆದಾಯ ಸಂಗ್ರಹವಾಗಿದೆ ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ.
ಸಮಗ್ರ ಜಿಎಸ್ಟಿಯಲ್ಲಿ ಸರ್ಕಾರವು ಕೇಂದ್ರ ಜಿಎಸ್‌ಟಿಗೆ 42,873 ಕೋಟಿ ರೂ. ಹಾಗೂ ರಾಜ್ಯ ಜಿಎಸ್‌ಟಿಗೆ 36,614 ಕೋಟಿ ರೂ.ಗಳನ್ನು ಸೆಟ್ಲ್‌ಮೆಂಟ್ ಮಾಡಿದೆ. ಸಾಮಾನ್ಯ ಹಂಚಿಕೆ ನಂತರ ಅಕ್ಟೋಬರ್ ತಿಂಗಳ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಕೇಂದ್ರ ಜಿಎಸ್‌ಟಿಗೆ 72,934 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 74,785 ಕೋಟಿ ರೂ. ಆಗಿದೆ ಎಂದು ಅಂಕಿ-ಅಂಶಗಳು ವಿವರಿಸಿವೆ.
-
GST revenue collection for October 2023 is second highest ever, next only to April 2023, at ₹1.72 lakh crore; records increase of 13% Y-o-Y
— Ministry of Finance (@FinMinIndia) November 1, 2023 " class="align-text-top noRightClick twitterSection" data="
Revenue from domestic transactions (including import of services) is also 13% higher Y-o-Y
Average gross monthly #GST collection in FY… pic.twitter.com/8SRs9RZXPa
">GST revenue collection for October 2023 is second highest ever, next only to April 2023, at ₹1.72 lakh crore; records increase of 13% Y-o-Y
— Ministry of Finance (@FinMinIndia) November 1, 2023
Revenue from domestic transactions (including import of services) is also 13% higher Y-o-Y
Average gross monthly #GST collection in FY… pic.twitter.com/8SRs9RZXPaGST revenue collection for October 2023 is second highest ever, next only to April 2023, at ₹1.72 lakh crore; records increase of 13% Y-o-Y
— Ministry of Finance (@FinMinIndia) November 1, 2023
Revenue from domestic transactions (including import of services) is also 13% higher Y-o-Y
Average gross monthly #GST collection in FY… pic.twitter.com/8SRs9RZXPa
2023ರ ಅಕ್ಟೋಬರ್ ತಿಂಗಳ ಒಟ್ಟು ಜಿಎಸ್‌ಟಿ ಆದಾಯವು ಕಳೆದ ವರ್ಷ ಎಂದರೆ 2022ರ ಅದೇ ತಿಂಗಳಿಗಿಂತ ಶೇ.13ರಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ, ಈ ತಿಂಗಳಿನಲ್ಲಿ ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿ) ಸಂಗ್ರಹಿಸಿದ ಆದಾಯವು ಕಳೆದ ವರ್ಷಕ್ಕಿಂತ ಶೇ.13ರಷ್ಟು ಅಧಿಕವಾಗಿದೆ. 2023-24ನೇ ಆರ್ಥಿಕ ಸಾಲಿನಲ್ಲಿ ಸರಾಸರಿ ಒಟ್ಟು ಮಾಸಿಕ ಜಿಎಸ್‌ಟಿ ಸಂಗ್ರಹವು ಈಗ 1.66 ಲಕ್ಷ ಕೋಟಿ ರೂ. ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದೇ ಅವಧಿಗಿಂತ ಶೇ.11ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಎರಡನೇ ಬಾರಿ ದಾಖಲೆಯ ಆದಾಯ ಸಂಗ್ರಹ: ಅಕ್ಟೋಬರ್ ತಿಂಗಳ ಜಿಎಸ್‌ಟಿ ಆದಾಯ ಸಂಗ್ರಹವು ದಾಖಲೆ ಬರೆದಿದೆ. ಇದುವರೆಗೆ ಎರಡನೇ ಬಾರಿಗೆ ಅತ್ಯಧಿಕ ಆದಾಯ ಸಂಗ್ರಹವಾಗಿದೆ. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ತಿಂಗಳು 1.72 ಲಕ್ಷ ಕೋಟಿ ರೂ. ಆಗಿದೆ. ಸೆಪ್ಟೆಂಬರ್‌ನಲ್ಲಿ ಇದು 1.63 ಲಕ್ಷ ಕೋಟಿ ರೂ. ರೂಪಾಯಿಗಳಷ್ಟಿತ್ತು.
ಕರ್ನಾಟಕದಿಂದ 23,400 ಕೋಟಿ ಸಂಗ್ರಹ: ದೇಶದ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಈ ಬಾರಿ 23,400 ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ. ಕಳೆದ ಬಾರಿಯ ಆದಾಯವು 20,165 ಕೋಟಿ ರೂ. ಆಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಶೇ.16ರಷ್ಟು ಆದಾಯ ಸಂಗ್ರಹ ಏರಿಕೆಯಾಗಿದೆ. ಸೆಟ್ಲ್‌ಮೆಂಟ್ ನಂತರ ಕರ್ನಾಟಕದ 42,657 ಕೋಟಿ ರೂ. ಜಿಎಸ್‌ಟಿ ಆದಾಯ ಆಗಿದ್ದು, ಕಳೆದ ಸಲ 37,924 ಕೋಟಿ ರೂ. ಆಗಿತ್ತು. ಇದರಲ್ಲಿ ಶೇ.12ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ರಾಜ್ಯದ 2,333 ಕೋಟಿ ರೂ. ಬಾಕಿ ಜಿಎಸ್‌ಟಿ ಪರಿಹಾರ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವರ ಸೂಚನೆ