ETV Bharat / business

ಕಳೆದ ವರ್ಷ ₹1.12, ಈ ವರ್ಷ ₹1.43 ಲಕ್ಷ ಕೋಟಿ.. ಆಗಸ್ಟ್​ ತಿಂಗಳ ಜಿಎಸ್​ಟಿ ಸಂಗ್ರಹ ಶೇಕಡಾ 28 ರಷ್ಟು ಹೆಚ್ಚಳ

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆಗಸ್ಟ್​ ತಿಂಗಳಲ್ಲಿ 1,43,612 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. 2021 ಕ್ಕಿಂತಲೂ ಇದು ಶೇ.28 ರಷ್ಟು ಹೆಚ್ಚು. ಆ ವರ್ಷದಲ್ಲಿ 1.12 ಲಕ್ಷ ಕೋಟಿ ರೂಪಾಯಿ ಬಂದಿತ್ತು.

gst-collections
ಆಗಸ್ಟ್​ ತಿಂಗಳ ಜಿಎಸ್​ಟಿ ಸಂಗ್ರಹ
author img

By

Published : Sep 1, 2022, 3:12 PM IST

ನವದೆಹಲಿ: ದೇಶದ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆಗಸ್ಟ್​ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) 1.43 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ.28 ರಷ್ಟು ಹೆಚ್ಚಾಗಿದೆ. ಜುಲೈ ತಿಂಗಳಿಂತಲೂ 5 ಸಾವಿರ ಕೋಟಿ ರೂಪಾಯಿ ಇಳಿದಿದೆ. ಆ ತಿಂಗಳಲ್ಲಿ ಜಿಎಸ್​ಟಿ 1.48 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ವಿಶೇಷ ಅಂದರೆ ಈ ವರ್ಷದ ಸತತ 6 ತಿಂಗಳಿನಿಂದ ಜಿಎಸ್‌ಟಿ ಆದಾಯ 1.4 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

ಆಗಸ್ಟ್‌ ತಿಂಗಳಲ್ಲಿ ಒಟ್ಟು ಸಂಗ್ರಹವಾದ ಜಿಎಸ್‌ಟಿಯಲ್ಲಿ 24,710 ಕೋಟಿ ರೂಪಾಯಿ ಸಿಜಿಎಸ್‌ಟಿ ಆಗಿದ್ದರೆ, 30,951 ಕೋಟಿ ಎಸ್‌ಜಿಎಸ್‌ಟಿಯಿಂದ ಬಂದಿದೆ. 77,782 ಕೋಟಿ ಐಜಿಎಸ್‌ಟಿಯಿಂದ ಹಣ ಹರಿದು ಬಂದಿದೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,067 ಕೋಟಿ ರೂಪಾಯಿ ಕೂಡ ಸೇರಿದೆ. ಜೊತೆಗೆ 10,168 ಕೋಟಿ ರೂಪಾಯಿ ಸೆಸ್ ಕೂಡ ಇದರಲ್ಲಿದೆ ಎಂದು ಅಂಕಿ ಅಂಶಗಳು ಸಾರುತ್ತವೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಎಸ್​ಟಿಯಿಂದ ಬಂದ ಆದಾಯ ಶೇ.33 ರಷ್ಟಿತ್ತು. ಈ ಬಾರಿ ಇದು ದುಪ್ಪಾಟ್ಟಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ಗುರುವಾರ ತಿಳಿಸಿದೆ. ಆಗಸ್ಟ್​​ನಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಲು ಜಿಎಸ್​ಟಿ ಮಂಡಳಿ ತೆಗೆದುಕೊಂಡ ಕೆಲವು ಉತ್ತಮ ಕ್ರಮಗಳೇ ಕಾರಣ ಎಂದು ಕೇಂದ್ರ ತಿಳಿಸಿದೆ.

ಜಿಎಸ್‌ಟಿ ಮಂಡಳಿ ಜಾರಿಗೆ ಬಂದು 5 ವರ್ಷಗಳನ್ನು ಪೂರೈಸಿದೆ. ಜಿಎಸ್​ಟಿ ತೆರಿಗೆ ವ್ಯವಸ್ಥೆಯ ಮೂಲಕ ಸರ್ಕಾರ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸರಳವಾದ ನೋಂದಣಿ ಪ್ರಕ್ರಿಯೆ ತರಲಾಗಿದೆ. ಇದರ ಜೊತೆಗೆ ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಯನ್ನೂ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಲಾಗಿದೆ.

ಓದಿ: ಸ್ಪೈಸ್‌ಜೆಟ್ ಸಂಸ್ಥೆಗೆ ನಷ್ಟ... ಮುಖ್ಯ ಹಣಕಾಸು ಅಧಿಕಾರಿ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.