ETV Bharat / business

GST collection: ಜುಲೈ ತಿಂಗಳಲ್ಲಿ 1.65 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ - ಜಿಎಸ್​ಟಿ ಆದಾಯ

ಜುಲೈ ತಿಂಗಳಲ್ಲಿ ಒಟ್ಟು ಜಿಎಸ್​ಟಿ ಆದಾಯ ಸಂಗ್ರಹ 1.65 ಲಕ್ಷ ಕೋಟಿ ರೂಪಾಯಿ ಆಗಿದ್ದು, ಕರ್ನಾಟಕದಿಂದ 11,505 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ.

GST collection rises 11 pc to over Rs 1.65 lakh cr in July
GST collection: ಜುಲೈ ತಿಂಗಳಲ್ಲಿ 1.65 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ
author img

By

Published : Aug 1, 2023, 4:08 PM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಜುಲೈ ತಿಂಗಳಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಆದಾಯ ಸಂಗ್ರಹ 1.65 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ವರ್ಷದ ಇದೇ ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಒಟ್ಟು ಜಿಎಸ್‌ಟಿ ಸಂಗ್ರಹವು ಶೇ.11ರಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

ಜುಲೈನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1,65,105 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ - CGST) 29,773 ಕೋಟಿ ರೂ. ಹಾಗೂ ರಾಜ್ಯ ಜಿಎಸ್​ಟಿ (ಎಸ್‌ಜಿಎಸ್‌ಟಿ - SGST ) 37,623 ಕೋಟಿ ರೂ. ಸೇರಿದೆ. ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ - IGST) 85,930 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 41,239 ರೂ. ಕೋಟಿ ರೂ. ಸೇರಿ) ಮತ್ತು ಸೆಸ್ 11,779 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 840 ಕೋಟಿ ರೂ. ಸೇರಿ) ಸಹ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಸೇರಿದೆ ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

  • ₹1,65,105 crore gross #GST revenue collected for July 2023; records 11% Year-on-Year growth

    Gross #GST collection crosses ₹1.6 lakh crore mark for 5th time since inception of #GST

    Revenues from domestic transactions (including import of services) are 15% higher Year-on-Year… pic.twitter.com/T7rxc15JPC

    — Ministry of Finance (@FinMinIndia) August 1, 2023 " class="align-text-top noRightClick twitterSection" data=" ">

ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಈ ತಿಂಗಳ ಆದಾಯವು ಶೇ.11ರಷ್ಟು ಹೆಚ್ಚಾಗಿದೆ. ಅಲ್ಲದೇ, ಈ ತಿಂಗಳ ಅವಧಿಯಲ್ಲಿ ದೇಶೀಯ ವಹಿವಾಟುಗಳ (ಸೇವೆಗಳ ಆಮದು ಸೇರಿ) ಆದಾಯವು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.15ರಷ್ಟು ಹೆಚ್ಚಳವಾಗಿದೆ. ಜೊತೆಗೆ ಐದನೇ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.60 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ. ಜೂನ್​ ತಿಂಗಳಲ್ಲಿ 1,61,497 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು.

ಕರ್ನಾಟಕದಿಂದ ಕಳೆದ ವರ್ಷದ ಜುಲೈಗೆ ಹೋಲಿಕೆ ಮಾಡಿದರೆ ಈ ವರ್ಷದ ಶೇ.17ರಷ್ಟು ಜಿಎಸ್​ಟಿ ಸಂಗ್ರಹ ಹೆಚ್ಚಳವಾಗಿದೆ. 2022ರ ಜುಲೈನಲ್ಲಿ 9,795 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಈ ಜುಲೈ ತಿಂಗಳಲ್ಲಿ 11,505 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ.

ಜಿಎಸ್​ಟಿ ಹಂಚಿಕೆ: ಇದೇ ವೇಳೆ ಸಮಗ್ರ ಜಿಎಸ್​ಟಿಯನ್ನು ಕೇಂದ್ರ ಹಾಗೂ ರಾಜ್ಯ ಜಿಎಸ್​ಟಿಗೆ ಹಂಚಿಕೆ ಮಾಡಲಾಗಿದೆ. ಸಿಜಿಎಸ್‌ಟಿ 39,785 ರೂ. ಹಾಗೂ ಎಸ್​ಜಿಎಸ್​ಟಿಗೆ 33,188 ರೂಪಾಯಿ ಹಂಚಿಕೆ ಮಾಡಲಾಗಿದೆ. ನಿಯಮಿತ ಇತ್ಯರ್ಥದ ನಂತರ ಜುಲೈ ತಿಂಗಳಿಗೆ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿಗೆ 69,558 ಕೋಟಿ ರೂ. ಮತ್ತು ಎಸ್​ಜಿಎಸ್​ಟಿಗೆ 70,811 ಕೋಟಿ ರೂ. ಆಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: GST Collection: ಜೂನ್​ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಹೆಚ್ಚಳ: ₹ 1.61 ಲಕ್ಷ ಕೋಟಿಗೂ ಮೀರಿದ ಆದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.