ETV Bharat / business

ಹಣದುಬ್ಬರ ತಡೆಗೆ ಗೋಧಿ ಬಳಿಕ ಸಕ್ಕರೆ ರಫ್ತಿನ ಮೇಲೂ ನಿರ್ಬಂಧ.. ಜೂನ್​ 1 ರಿಂದಲೇ ಜಾರಿ

ಹಣದುಬ್ಬರ ಮತ್ತು ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ವಿದೇಶಗಳಿಗೆ ಸಕ್ಕರೆ ರಫ್ತು ಮಾಡಲು ಸರ್ಕಾರ ಮಿತಿ ಹೇರಿದೆ. ಗೋಧಿಯ ಬಳಿಕ ಸಕ್ಕರೆಗೂ ನಿರ್ಬಂಧ ಹೇರಲಾಗಿದೆ.

author img

By

Published : May 25, 2022, 4:46 PM IST

government-restricts-sugar
ಹಣದುಬ್ಬರ ತಡೆಗೆ ಗೋಧಿಯ ಬಳಿಕ ಸಕ್ಕರೆ ರಫ್ತಿನ ಮೇಲೂ ನಿರ್ಬಂಧ

ನವದೆಹಲಿ: ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗೋಧಿ ರಫ್ತು ನಿಷೇಧಿಸಿದ್ದ ಸರ್ಕಾರ ಇದೀಗ ಸಕ್ಕರೆ ಸರಬರಾಜಿನ ಮೇಲೂ ನಿರ್ಬಂಧ ಹೇರಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ಮಾರುಕಟ್ಟೆಯ ಅವಧಿ ಸೆಪ್ಟೆಂಬರ್‌ಗೆ ಕೊನೆಗೊಳ್ಳುವಂತೆ ವರ್ಷದಲ್ಲಿ 10 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ರಫ್ತು ಮಾಡಬೇಕು. ಇದು ಜೂನ್​ 1 ರಿಂದಲೇ ಜಾರಿಯಾಗಬೇಕು ಎಂಬ ಮಿತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಅದರ ಬೆಲೆ ಏರಿಕೆಯನ್ನು ತಡೆಯುವ ಸಲುವಾಗಿ ಸಕ್ಕರೆ ರಫ್ತು (ಕಚ್ಚಾ, ಸಂಸ್ಕರಿಸಿದ ಮತ್ತು ಬಿಳಿ ಸಕ್ಕರೆ) ಜೂನ್ 1, 2022 ರಿಂದ ನಿರ್ಬಂಧಿತ ವರ್ಗದಲ್ಲಿ ಇರಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ.

ಸಕ್ಕರೆ ಉತ್ಪಾದನೆ ಇಳಿಕೆಯಾಗಿರುವ ಮಧ್ಯೆಯೂ ದಾಖಲೆ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ. 2017-18, 2018-19 and 2019-20 ರಲ್ಲಿ ಕ್ರಮವಾಗಿ 6.2 ಲಕ್ಷ ಮೆಟ್ರಿಕ್​ ಟನ್​, 38 ಎಲ್​ಎಂಟಿ ಮತ್ತು 59.60 ಎಲ್​ಎಂಟಿಯಷ್ಟು ವಿದೇಶಗಳಿಗೆ ರಫ್ತು ಮಾಡಲಾಗಿದೆ.

2020- 21 ರಲ್ಲಿ 60 ಎಲ್​ಎಂಟಿ ಗುರಿ ದಾಟಿ 70 ಸುಮಾರು ಸಕ್ಕರೆ ರಫ್ತು ಮಾಡಲಾಗಿದೆ. ಪ್ರಸಕ್ತ 2021-22 ರ ಋತುವಿನಲ್ಲಿ ಸುಮಾರು 90 ಎಲ್​ಎಂಟಿ ಸಕ್ಕರೆ ರಫ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸುಮಾರು 82 ಲಕ್ಷ ಮೆಟ್ರಿಕ್ ಟನ್​ ಸಕ್ಕರೆಯನ್ನು ರಫ್ತು ಮಾಡಲು ಕಾರ್ಖಾನೆಗಳಿಗೆ ಸೂಚಿಸಲಾಗಿತ್ತು. ಇದರಲ್ಲಿ 78 ಲಕ್ಷ ಮೆಟ್ರಿಕ್​ ಟನ್​ ರಫ್ತು ಮಾಡಲಾಗಿದೆ. ಇದು ಈ ವರ್ಷದ ಮತ್ತು ಸಾರ್ವಕಾಲಿಕವಾಗಿ ಅತ್ಯಧಿಕ ರಫ್ತಿನ ವರ್ಷವಾಗಿದೆ.

ಓದಿ: ರಾಜ್ಯದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಏರಿಕೆ : ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.