ETV Bharat / business

2024ರಲ್ಲಿ ನಿಧಾನವಾಗಲಿದೆ ಜಾಗತಿಕ ಆರ್ಥಿಕ ಬೆಳವಣಿಗೆ ದರ: ಐಎಂಎಫ್​ ಮುನ್ಸೂಚನೆ

ಈ ವರ್ಷ ಜಾಗತಿಕ ಆರ್ಥಿಕತೆಯ ಬೆಳವಣಿಗೆ ದರ ಶೇ 3ರಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಐಎಂಎಫ್​ ಹೇಳಿದೆ.

IMF projects slow global growth amid ongoing

author img

By ETV Bharat Karnataka Team

Published : Oct 30, 2023, 12:46 PM IST

ನವದೆಹಲಿ: 2023 ರಲ್ಲಿ ಜಾಗತಿಕ ಬೆಳವಣಿಗೆ ದರವು ಶೇಕಡಾ 3.0 ರಷ್ಟು ನಿಧಾನಗತಿಯಲ್ಲಿ ಉಳಿಯುವ ನಿರೀಕ್ಷೆಯಿದೆ ಮತ್ತು 2024 ರಲ್ಲಿ ಶೇಕಡಾ 2.9 ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಐಎಂಎಫ್ ವರದಿಯ ಪ್ರಕಾರ, ಇತ್ತೀಚಿನ ವಿಶ್ವ ಆರ್ಥಿಕ ದೃಷ್ಟಿಕೋನದಲ್ಲಿ ಬಹಿರಂಗಪಡಿಸಲಾದ ಈ ಮುನ್ಸೂಚನೆಯು ದಶಕಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರಗಳಲ್ಲಿ ಒಂದಾಗಿದೆ. ಜಾಗತಿಕ ಆರ್ಥಿಕತೆಯು ಹಲವಾರು ಬಿಕ್ಕಟ್ಟುಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ.

IMF ಹೇಳಿರುವುದಿಷ್ಟು: ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಐಎಂಎಫ್​, "ಜಾಗತಿಕ ಬೆಳವಣಿಗೆಯು 2023 ರಲ್ಲಿ ಶೇಕಡಾ 3.0 ರಷ್ಟು ಮತ್ತು 2024 ರಲ್ಲಿ ಶೇಕಡಾ 2.9 ರಷ್ಟು ನಿಧಾನಗತಿಯಲ್ಲಿರುತ್ತದೆ. ಜಾಗತಿಕ ಆರ್ಥಿಕತೆಯು ಅನೇಕ ಸಂಕಷ್ಟಗಳು ಮತ್ತು ಜೀವನ ವೆಚ್ಚ ಹೆಚ್ಚಳದ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಬೆಳವಣಿಗೆಯ ಮುನ್ಸೂಚನೆ ದಶಕಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ವಿಶ್ವ ಆರ್ಥಿಕ ದೃಷ್ಟಿಕೋನದಲ್ಲಿ ಈ ಬಗ್ಗೆ ಮತ್ತಷ್ಟು ಮಾಹಿತಿ ಇದೆ. ಅಕ್ಟೋಬರ್ 2023 ರ ಐಎಂಎಫ್​​ನ "ನ್ಯಾವಿಗೇಟಿಂಗ್ ಗ್ಲೋಬಲ್ ಡೈವರ್ಜೆನ್ಸ್" ವರದಿಯು ಜಾಗತಿಕ ಮಟ್ಟದಲ್ಲಿ ಆರ್ಥಿಕ ಚೇತರಿಕೆಯನ್ನು ಸಾಧಿಸುವಲ್ಲಿ ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸಿದೆ." ಎಂದು ಹೇಳಿದೆ.

ಜಾಗತಿಕ ಬೆಳವಣಿಗೆಯು 2022 ರಲ್ಲಿ ಶೇಕಡಾ 3.5 ರಿಂದ 2023 ರಲ್ಲಿ ಶೇಕಡಾ 3.0 ಕ್ಕೆ ಮತ್ತು 2024 ರಲ್ಲಿ ಶೇಕಡಾ 2.9 ಕ್ಕೆ ಇಳಿಯುತ್ತದೆ ಎಂದು ಬೇಸ್​ಲೈನ್ ಮುನ್ಸೂಚನೆ ಹೇಳಿದೆ. ಇದು 2000 ಮತ್ತು 2019 ರ ನಡುವೆ ದಾಖಲಾದ ಐತಿಹಾಸಿಕ ಸರಾಸರಿ ಶೇಕಡಾ 3.8 ಕ್ಕಿಂತ ಗಮನಾರ್ಹ ಕುಸಿತವಾಗಿದೆ. ಮುಂದುವರಿದ ಆರ್ಥಿಕತೆಗಳು ಸಹ ಕುಸಿತ ಅನುಭವಿಸುವ ನಿರೀಕ್ಷೆಯಿದೆ. ಇದು 2022 ರಲ್ಲಿ ಶೇಕಡಾ 2.6 ರಷ್ಟು ಬೆಳವಣಿಗೆಯಿಂದ 2023 ರಲ್ಲಿ ಶೇಕಡಾ 1.5 ಕ್ಕೆ ಮತ್ತು 2024 ರಲ್ಲಿ ಶೇಕಡಾ 1.4 ಕ್ಕೆ ಕುಸಿಯಬಹುದು.

ಬಿಗಿ ಕ್ರಮಗಳೇ ಬೆಳವಣಿಗೆ ದರ ಇಳಿಕೆಗೆ ಕಾರಣ: ಹಣದುಬ್ಬರ ನಿಯಂತ್ರಣಕ್ಕೆ ಕೈಗೊಳ್ಳಲಾದ ಬಿಗಿ ಕ್ರಮಗಳು ಇದಕ್ಕೆ ಕಾರಣವಾಗಿವೆ. ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು 2022 ರಲ್ಲಿ ಇದ್ದ ಶೇಕಡಾ 4.1 ರಿಂದ 2023 ಮತ್ತು 2024 ರಲ್ಲಿ ಶೇಕಡಾ 4.0 ಕ್ಕೆ ಸ್ವಲ್ಪ ಇಳಿಕೆಯಾಗುವ ಸಾಧ್ಯತೆಯಿದೆ. ಜಾಗತಿಕ ಹಣದುಬ್ಬರವು ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಜಾಗತಿಕ ಹಣದುಬ್ಬರವು 2022 ರಲ್ಲಿ ಶೇಕಡಾ 8.7 ರಿಂದ 2023 ರಲ್ಲಿ ಶೇಕಡಾ 6.9 ಕ್ಕೆ ಮತ್ತು 2024 ರಲ್ಲಿ ಶೇಕಡಾ 5.8 ಕ್ಕೆ ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.

ಐಎಂಎಫ್ ಪ್ರಕಾರ, ಹಣದುಬ್ಬರ ನಿಯಂತ್ರಣಕ್ಕೆ ವಿತ್ತೀಯ ನೀತಿ ಕ್ರಮಗಳು ಮತ್ತು ಚೌಕಟ್ಟುಗಳ ಮೇಲೆ ಪ್ರಮುಖ ಗಮನ ಹರಿಸಬೇಕು. ಇದಲ್ಲದೆ, ವಿವಿಧ ಮಧ್ಯಸ್ಥಗಾರರಲ್ಲಿ ಹಣದುಬ್ಬರ ನಿರೀಕ್ಷೆಗಳನ್ನು ನಿರ್ವಹಿಸಲು ಪರಿಣಾಮಕಾರಿ ಸಂವಹನ ತಂತ್ರಗಳ ಮಹತ್ವವನ್ನು ವರದಿ ಒತ್ತಿಹೇಳಿದೆ. ಭೌಗೋಳಿಕ-ಆರ್ಥಿಕ ಬಿಕ್ಕಟ್ಟುಗಳ ಹೆಚ್ಚಳದಿಂದಾಗಿ ಸರಕುಗಳ ಜಾಗತಿಕ ವ್ಯಾಪಾರಕ್ಕೆ ಅಡೆತಡೆಗಳು ಉಂಟಾಗಬಹುದು ಎಂದು ಐಎಂಎಫ್ ವರದಿ ತಿಳಿಸಿದೆ.

ಹಣದುಬ್ಬರಕ್ಕೆ ಈ ಎಲ್ಲ ಅಂಶಗಳು ಕಾರಣ: ಹವಾಮಾನ ಮತ್ತು ಭೌಗೋಳಿಕ ರಾಜಕೀಯ ಘಟನೆಗಳು ಕೂಡ ಹಣದುಬ್ಬರಕ್ಕೆ ಕೊಡುಗೆ ನೀಡುತ್ತವೆ. ಇದರಿಂದ ಆಹಾರ ಮತ್ತು ಇಂಧನ ಬೆಲೆ ಏರಿಕೆಗೆ ಕಾರಣವಾಗಬಹುದು. ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಪರಿಣಾಮಕಾರಿ ನೀತಿಗಳು, ಸಮನ್ವಯ ಮತ್ತು ರಚನಾತ್ಮಕ ಸುಧಾರಣೆಗಳು ಅತ್ಯಗತ್ಯ ಎಂದು ಐಎಂಎಫ್ ತಿಳಿಸಿದೆ.

ಇದನ್ನೂ ಓದಿ : ಎಸ್​ಬಿಐ ಬ್ರಾಂಡ್ ಅಂಬಾಸಿಡರ್​ ಆದ ಕ್ರಿಕೆಟರ್ ಎಂಎಸ್ ಧೋನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.