ETV Bharat / business

Footwear Norms: ಪಾದರಕ್ಷೆಗೂ ಬಂತು ಗುಣಮಟ್ಟದ ನಿಯಮ: ಜುಲೈ 1 ರಿಂದ ಜಾರಿ

ಇನ್ನು ಮುಂದೆ ದೇಶದಲ್ಲಿ ಮಾರಾಟವಾಗುವ ಪಾದರಕ್ಷೆಗಳಿಗೆ ಗುಣಮಟ್ಟ ನಿಯಂತ್ರಣದ ನಿಯಮಗಳು ಅನ್ವಯವಾಗಲಿವೆ. ಪಾದರಕ್ಷೆ ಉದ್ಯಮಕ್ಕೆ ಹೊಸ ನಿಯಮಗಳು ಜುಲೈ 1 ರಿಂದ ಜಾರಿಗೆ ಬರಲಿವೆ.

Mandatory footwear norms to be applicable from July 1

author img

By

Published : Jun 20, 2023, 12:21 PM IST

ನವದೆಹಲಿ : ದೇಶದಲ್ಲಿ ಮಾರಾಟವಾಗುವ ಪಾದರಕ್ಷೆಗಳು ಮತ್ತು ಸಂಬಂಧಿತ ಉತ್ಪನ್ನಗಳಿಗೆ ಇನ್ನು ಮುಂದೆ ಕಡ್ಡಾಯ ಗುಣಮಟ್ಟ ನಿಯಂತ್ರಣದ ನಿಯಮಗಳು ಕಡ್ಡಾಯವಾಗಲಿವೆ. ಬೃಹತ್ ಮತ್ತು ಮಧ್ಯಮ ಪ್ರಮಾಣದ ಪಾದರಕ್ಷೆ ತಯಾರಕರು ಮತ್ತು ಎಲ್ಲ ಆಮದುದಾರರು ಜುಲೈ 1 ರಿಂದ 24 ಬಗೆಯ ಪಾದರಕ್ಷೆಗಳು ಮತ್ತು ಸಂಬಂಧಿತ ಉತ್ಪನ್ನಗಳಿಗೆ ಕಡ್ಡಾಯ ಗುಣಮಟ್ಟದ ನಿಯಂತ್ರಣ ಆದೇಶಗಳನ್ನು (ಕ್ಯೂಸಿಒ) (quality control orders -QCO) ಅನುಸರಿಸಬೇಕು ಎಂದು ಸರ್ಕಾರ ಸೋಮವಾರ ತಿಳಿಸಿದೆ.

ಚೀನಾದಿಂದ ಕಳಪೆ ಗುಣಮಟ್ಟದ ಪಾದರಕ್ಷೆಗಳು ದೇಶದೊಳಗೆ ಆಮದಾಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಗುಣಮಟ್ಟಗಳ ಬ್ಯೂರೋದ (ಬಿಐಎಸ್) ಮಹಾನಿರ್ದೇಶಕ ಪ್ರಮೋದ್ ತಿವಾರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಆದಾಗ್ಯೂ ಸಣ್ಣ ಪ್ರಮಾಣದ ಪಾದರಕ್ಷೆ ತಯಾರಕರಿಗೆ ನಿಯಮ ಪಾಲನೆಗೆ ಗಡುವು ವಿಸ್ತರಿಸಲಾಗಿದ್ದು, ಅವರು ಜನವರಿ 1, 2024 ರಿಂದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಗುಣಮಟ್ಟ ಮಾನದಂಡ ಕಡ್ಡಾಯ: ಹಾಗೆಯೇ ಅತಿ ಸಣ್ಣ ಪ್ರಮಾಣದ ಪಾದರಕ್ಷೆಗಳ ಉದ್ಯಮಕ್ಕೆ ಕಡ್ಡಾಯ ಗುಣಮಟ್ಟದ ಮಾನದಂಡಗಳು ಜುಲೈ 1, 2024 ರಿಂದ ಅನ್ವಯವಾಗುತ್ತವೆ ಎಂದು ತಿವಾರಿ ಹೇಳಿದರು. ಇದರ ನಂತರ ಯಾವುದೇ ವಿಸ್ತರಣೆ ನೀಡಲಾಗುವುದಿಲ್ಲ ಮತ್ತು ಕ್ಯೂಸಿಒ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಿದೆ ಮತ್ತು ಕಡಿಮೆ ಗುಣಮಟ್ಟದ ಪಾದರಕ್ಷೆಗಳು ಆಮದು ಆಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

24 ಬಗೆಯ ಪಾದರಕ್ಷೆಗಳು ಮತ್ತು ಸಂಬಂಧಿತ ಉತ್ಪನ್ನಗಳಿಗೆ ಕಡ್ಡಾಯ ಗುಣಮಟ್ಟದ ನಿಯಂತ್ರಣ ಆದೇಶಗಳನ್ನು ಪಾಲಿಸುವಂತೆ ಅಕ್ಟೋಬರ್ 2020 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಈಗಾಗಲೇ ಈ ಗಡುವನ್ನು ಮೂರು ಬಾರಿ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಮುಂದಿನ ತಿಂಗಳಿಂದ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ನಿಯಮ ಪಾಲನೆ ಕಡ್ಡಾಯವಾಗಲಿದೆ. ಪಾದರಕ್ಷೆಗಳ ಇತರ ಭಾಗಗಳ ಜೊತೆಗೆ ಅಡಿಭಾಗ ಮತ್ತು ಹೀಲ್ಸ್‌ಗಳನ್ನು ತಯಾರಿಸಲು ಮತ್ತು ಪಾದರಕ್ಷೆಗಳ ತಯಾರಿಕೆಯಲ್ಲಿ ಯಾವ ರೀತಿಯ ಚರ್ಮ, ಪಿವಿಸಿ ಮತ್ತು ರಬ್ಬರ್‌ನಂಥ ಕಚ್ಚಾ ವಸ್ತುವನ್ನು ಬಳಸಬೇಕು ಎಂಬ ಬಗ್ಗೆ ಮಾನದಂಡಗಳು ಸೂಚಿಸುತ್ತವೆ.

ಯಾವ ಯಾವ ಉತ್ಪನ್ನಗಳಿಗೆ ಈ ಮಾನದಂಡ ಅನ್ವಯ?: ಗುಣಮಟ್ಟದ ಮಾನದಂಡಗಳು ಅನ್ವಯವಾಗುವ 24 ಪಾದರಕ್ಷೆಗಳ ಉತ್ಪನ್ನಗಳಲ್ಲಿ ರಬ್ಬರ್ ಗಮ್ ಬೂಟುಗಳು, ಪಿವಿಸಿ ಸ್ಯಾಂಡಲ್‌ಗಳು, ರಬ್ಬರ್ ಹವಾಯಿ ಚಪ್ಪಲಿಗಳು, ಮೊಲ್ಡ್ ಮಾಡಿದ ಪ್ಲಾಸ್ಟಿಕ್ ಪಾದರಕ್ಷೆಗಳು, ಪುರಸಭೆಯ ಸ್ಕ್ಯಾವೆಂಜಿಂಗ್ ಕೆಲಸಕ್ಕೆ ಬಳಸುವ ಪಾದರಕ್ಷೆಗಳು, ಕ್ರೀಡಾ ಪಾದರಕ್ಷೆಗಳು, ಡರ್ಬಿ ಶೂಗಳು ಮತ್ತು ಗಲಭೆ ವಿರೋಧಿ ಬೂಟುಗಳು, ಅಚ್ಚು ಮಾಡಿದ ಘನ ರಬ್ಬರ್ ಇತ್ಯಾದಿ ಸೇರಿವೆ. ಇದರೊಂದಿಗೆ ಕ್ಯೂಸಿಓ ಅಡಿಯಲ್ಲಿ ಒಟ್ಟು ಪಾದರಕ್ಷೆ ಉತ್ಪನ್ನಗಳ ಸಂಖ್ಯೆ 54 ರಲ್ಲಿ 27 ಆಗಿದೆ. ಭಾರತೀಯ ಮಾನದಂಡಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ತಿವಾರಿ ಹೇಳಿದರು.

ಪಾದರಕ್ಷೆಗಳನ್ನು ಪರೀಕ್ಷಿಸಲು ಎರಡು ಬಿಐಎಸ್ ಲ್ಯಾಬ್‌ಗಳು, ಎರಡು ಫುಟ್‌ವೇರ್ ಡಿಸೈನ್ ಅಂಡ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (ಎಫ್‌ಡಿಡಿಐ) ಲ್ಯಾಬ್‌ಗಳು ಮತ್ತು ಸೆಂಟ್ರಲ್ ಲೆದರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಎಲ್‌ಆರ್‌ಐ) ಗಳಲ್ಲಿ ಮತ್ತು 11 ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಬಿಐಎಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : 2000 ರೂ. ನೋಟು ಹಿಂಪಡೆಯುವಿಕೆಯಿಂದ ಬ್ಯಾಂಕ್​ಗಳಲ್ಲಿ ಠೇವಣಿ ಹೆಚ್ಚಳ: ಎಸ್​ಬಿಐ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.