ಲಖನೌ(ಉತ್ತರ ಪ್ರದೇಶ): ಭಾರತ್ ಬಯೋಟೆಕ್ ಅಧ್ಯಕ್ಷರಾದ ಡಾ.ಕೃಷ್ಣ ಎಲ್ಲಾ ಅವರು ಔಷಧ ವಲಯದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಲು ವಿಶೇಷ ರಾಸಾಯನಿಕಗಳತ್ತ ಗಮನ ಹರಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ. ಇದರೊಂದಿಗೆ ಮಧ್ಯಂತರ ಮತ್ತು ಕ್ಲಿನಿಕಲ್ ಟ್ರಯಲ್ಸ್‌ಗೆ ಸೂಕ್ತ ಆದ್ಯತೆ ನೀಡುವಂತೆಯೂ ಅವರು ತಿಳಿಸಿದರು.
ಉತ್ತರ ಪ್ರದೇಶ ಸರ್ಕಾರ ಔಷಧೀಯ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ವಿಶೇಷ ಫಾರ್ಮಾ ನೀತಿಯನ್ನು ಪ್ರಾರಂಭಿಸಿದೆ. ಬೃಹತ್ ಡ್ರಗ್ ಪಾರ್ಕ್‌ಗಳು ಮತ್ತು ಮೆಡ್‌ಟೆಕ್ ಪಾರ್ಕ್‌ಗಳನ್ನು ಸ್ಥಾಪಿಸಿದೆ. ತಮ್ಮ ರಾಜ್ಯದಲ್ಲಿ ಒದಗಿಸಿರುವ ಸೌಲಭ್ಯಗಳು ಮತ್ತು ಪ್ರೋತ್ಸಾಹಗಳನ್ನು ವಿವರಿಸಲು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಉತ್ತರ ಪ್ರದೇಶ ಸರ್ಕಾರ ಗುರುವಾರ ಇಲ್ಲಿ ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಸ್ಥಳೀಯ ಫಾರ್ಮಾ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸಾಮಾನ್ಯ ಫಾರ್ಮಾದೊಂದಿಗೆ ನೆಲೆಗೊಳ್ಳುವ ಬದಲು ಸ್ವಲ್ಪ ವಿಭಿನ್ನವಾಗಿರುವ ವಿಶೇಷ ರಾಸಾಯನಿಕಗಳು ಮತ್ತು ಕ್ಲಿನಿಕಲ್ ಪ್ರಯೋಗಗಳತ್ತ ಗಮನಹರಿಸುವುದು ಉತ್ತಮ ಎಂದು ಕೃಷ್ಣ ಎಲ್ಲಾ ಅವರು ಯುಪಿ ಸರ್ಕಾರಕ್ಕೆ ಸಲಹೆ ನೀಡಿದರು. ಔಷಧ ಕ್ಷೇತ್ರಕ್ಕೆ ಸೇರಿದ ಉದಯೋನ್ಮುಖ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕು ಮತ್ತು ಅದಕ್ಕಾಗಿ ವಿಶೇಷ ನಿಧಿ ಸ್ಥಾಪಿಸಬೇಕು ಎಂದು ವಿವರಿಸಿದರು.
ಸುವೆನ್ ಲೈಫ್‌ಸೈನ್ಸ್‌ನ ಸಿಎಂಡಿ ವೆಂಕಟ್ ಜಾಸ್ತಿ ಮಾತನಾಡಿ, ಸಾಮಾನ್ಯ ತ್ಯಾಜ್ಯನೀರಿನ ಸಂಸ್ಕರಣಾ ಘಟಕದೊಂದಿಗೆ ಸುಧಾರಿತ ಫಾರ್ಮಾ ಪಾರ್ಕ್‌ಗಳನ್ನು ಸ್ಥಾಪಿಸುವುದು ಔಷಧೀಯ ಕಂಪನಿಗಳಿಗೆ ಅನುಕೂಲಕರವಾಗಿದೆ. ಇದರ ಪರಿಣಾಮವಾಗಿ ಕಂಪನಿಗಳು ಹೊಸ ಘಟಕಗಳನ್ನು ಸ್ಥಾಪಿಸಲು ಮುಂದೆ ಬರುತ್ತವೆ ಎಂದರು.
ನೋಯ್ಡಾ ಪ್ರದೇಶದಲ್ಲಿ ಫಾರ್ಮಾ ಲ್ಯಾಬ್‌ಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಪರಿಗಣಿಸುವುದಾಗಿ ನ್ಯಾಟ್ಕೋ ಫಾರ್ಮಾ ಸಿಇಒ ರಾಜೀವ್ ನನ್ನಪನೇನಿ ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಸಲಹೆಗಾರ ಅವನೀಶ್ ಕುಮಾರ್ ಅವಸ್ತಿ ಮಾತನಾಡಿ, ಉತ್ತರ ಪ್ರದೇಶ ರಾಜ್ಯವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ವಿಸ್ತರಿಸುವ ಗುರಿ ನಿಗದಿಪಡಿಸಲಾಗಿದೆ. ಇದರ ಪ್ರಕಾರ ಕೈಗಾರಿಕಾ ಹೂಡಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ರಾಜ್ಯದ ಹಲವು ಉನ್ನತ ಅಧಿಕಾರಿಗಳು, ತೆಲಂಗಾಣ ರಾಜ್ಯದ ಕೈಗಾರಿಕೋದ್ಯಮಿಗಳು, ತೆಲಂಗಾಣ ಡ್ರಗ್ ಕಂಟ್ರೋಲ್ ಮಹಾನಿರ್ದೇಶಕ ಕಮಲ್ ಹಾಸನ್ ರೆಡ್ಡಿ, ಭಾರತದ ಡೆಪ್ಯುಟಿ ಡ್ರಗ್ ಕಂಟ್ರೋಲರ್ ಜನರಲ್ ಎ.ರಾಮಕಿಶನ್, ಬಿಡಿಎಂಎ ರಾಷ್ಟ್ರೀಯ ಅಧ್ಯಕ್ಷ ಆರ್.ಕೆ.ಅಗರ್ವಾಲ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಿಹಾರದ ಕೂಲಿ ಕಾರ್ಮಿಕನಿಗೆ ಬಂತು ₹1.29 ಕೋಟಿ ವಿದ್ಯುತ್ ಬಿಲ್!