ETV Bharat / business

ಪಿಎಫ್​ ಸದಸ್ಯರಿಗೆ ಗುಡ್​ನ್ಯೂಸ್​.. ನಿವೃತ್ತಿಗೆ 6 ತಿಂಗಳ  ಮೊದಲೇ ಪಿಂಚಣಿ ಹಣ ಪಡೆಯಲು ಅವಕಾಶ - ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು

ಭವಿಷ್ಯ ನಿಧಿ ಯೋಜನೆಯ ನೀತಿಗಳು ಬದಲಾಗಿದ್ದು, ನಿವೃತ್ತಿ ಅಂಚಿನಲ್ಲಿರುವ ನೌಕರರಿಗೂ ಪಿಂಚಣಿ ಹಣ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

epfo-board-allows-withdrawal-from-eps-95-scheme
ಪಿಎಫ್​ ಸದಸ್ಯರಿಗೆ ಗುಡ್​ನ್ಯೂಸ್​
author img

By

Published : Nov 1, 2022, 3:24 PM IST

ನವದೆಹಲಿ: ನಿವೃತ್ತಿಯ ಅಂಚಿನಲ್ಲಿರುವ ನೌಕರರಿಗೆ ಪಿಂಚಣಿ ನಿಧಿ ಸಂಘಟನೆಯು (ಇಪಿಎಫ್​ಒ) ಶುಭಸುದ್ದಿ ನೀಡಿದೆ. ನೌಕರರ ಪಿಂಚಣಿ ಯೋಜನೆ 1995ಕ್ಕೆ ತಿದ್ದುಪಡಿ ತರಲಾಗಿದ್ದು, ನಿವೃತ್ತಿಗೆ 6 ತಿಂಗಳಿಗಿಂತ ಕಡಿಮೆ ಇದ್ದಲ್ಲಿ ಅವರು ಭವಿಷ್ಯ ನಿಧಿ ಖಾತೆಯಲ್ಲಿರುವ ಠೇವಣಿ ಪಡೆಯಲು ಅನುಮತಿಸಿದೆ.

ಅಂದರೆ, ನಿವೃತ್ತಿಯ ಬಳಿಕ ಮಾತ್ರ ಪಡೆಯಲು ಅವಕಾಶವಿದ್ದ ಇಪಿಎಫ್​ ಹಣವನ್ನು ನಿವೃತ್ತಿಗೆ 6 ತಿಂಗಳು ಮೊದಲೇ ಪಡೆಯಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸಂಸತ್ತಿನಲ್ಲಿ ಮಂಡಿಸಲು ಇಪಿಎಫ್​ಒ ಸಂಘಟನೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇಪಿಎಫ್‌ಒದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) ಇಪಿಎಸ್ 95 ಯೋಜನೆಗೆ ಮಾಡಿರುವ ತಿದ್ದುಪಡಿಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರಲ್ಲಿ ಪ್ರಮುಖವಾಗಿ ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವ ನೌಕರರು ನಿವೃತ್ತಿಗೆ 6 ತಿಂಗಳ ಅವಧಿ ಉಳಿದಿರುವಾಗ ಇಪಿಎಸ್​ ಖಾತೆಯಲ್ಲಿ ಠೇವಣಿ ಇರುವ ಹಣವನ್ನು ಪಡೆಯಲು ಅವಕಾಶ ನೀಡಬೇಕು ಎಂದು ಪ್ರಸ್ತಾಪಿಸಿದೆ.

34 ವರ್ಷಗಳಿಂದ ಭವಿಷ್ಯ ನಿಧಿ ಯೋಜನೆ ಬಳಕೆ ಮಾಡುತ್ತಿರುವ ಸದಸ್ಯರಿಗೆ ಅನುಪಾತದ ಆಧಾರದ ಮೇಲೆ ಪಿಂಚಣಿ ಪ್ರಯೋಜನಗಳನ್ನು ನೀಡಬೇಕು ಎಂಬುದು ಶಿಫಾರಸಿನಲ್ಲಿದೆ. ಇಪಿಎಫ್​ಒ ಸಂಘಟನೆಯ ಈ ನಿರ್ಧಾರದಿಂದ ಆರೂವರೆ ಕೋಟಿ ಪಿಂಚಣಿದಾರರಿಗೆ ಇದರ ಲಾಭ ಸಿಗಲಿದೆ.

ಓದಿ: ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.