ನವದೆಹಲಿ: ವಿಶ್ವದ ನಂಬರ್ 1 ಸಿರಿವಂತನಾದ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಒಂದಿಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಬ್ಲೂಟಿಕ್ಗೆ (ಪರಿಶೀಲಿಸಿದ ಖಾತೆ) ಹಣ ನಿಗದಿ ಮಾಡಿದ್ದಕ್ಕೆ ಹಾಗೂ ಸಂಸ್ಥೆಯ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಟೀಕೆಗೆ ಗುರಿಯಾಗಿದ್ದರು. ಕಂಪನಿಯ ಸಿಇಒ ಬದಲಾಗಬೇಕು ಎಂಬ ಕೂಗು ಕೇಳಿಬಂದಿತ್ತು. ಇದೀಗ ಮಸ್ಕ್ ಸಿಇಒ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಈ ಕೆಲಸವನ್ನು ನಿರ್ವಹಿಸುವ ವ್ಯಕ್ತಿ ಸಿಕ್ಕ ತಕ್ಷಣ ತಾವು ಸಿಒಇ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಅಲ್ಲಿಯವರೆಗೂ ನಾನು ಸಾಫ್ಟ್ವೇರ್ ಮತ್ತು ಸರ್ವರ್ ತಂಡಗಳನ್ನು ಮುನ್ನಡೆಸುತ್ತೇನೆ ಎಂದು ಹೇಳಿದ್ದಾರೆ.
-
Should I step down as head of Twitter? I will abide by the results of this poll.
— Elon Musk (@elonmusk) December 18, 2022 " class="align-text-top noRightClick twitterSection" data="
">Should I step down as head of Twitter? I will abide by the results of this poll.
— Elon Musk (@elonmusk) December 18, 2022Should I step down as head of Twitter? I will abide by the results of this poll.
— Elon Musk (@elonmusk) December 18, 2022
ತಾನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿಯಬೇಕೆ ಎಂದು ಪ್ರಶ್ನಿಸಿ ಟ್ವಿಟರ್ನಲ್ಲಿ ಮಸ್ಕ್ ಸಮೀಕ್ಷೆ ಕೈಗೊಂಡಿದ್ದರು. ಫಲಿತಾಂಶ ಏನೇ ಬಂದರೂ ಅದರಂತೆ ನಡೆದುಕೊಳ್ಳುವೆ ಎಂದು ಮಸ್ಕ್ ಘೋಷಿಸಿದ್ದರು. ಸದ್ಯ ಸಮೀಕ್ಷೆಯ ಫಲಿತಾಂಶ ಅವರ ವಿರುದ್ಧ ಬಂದ ಕಾರಣ ಮಸ್ಕ್ ಸಿಇಒ ಹುದ್ದೆಗೆ ರಾಜೀನಾಮೆಗೆ ಮುಂದಾಗಿದ್ದಾರೆ. ಸಮೀಕ್ಷೆಯಲ್ಲಿ ಎಲಾನ್ ಮಸ್ಕ್ ಸಿಇಒ ಸ್ಥಾನದಿಂದ ಇಳಿಯಬೇಕು ಎಂದು 57.5 ಪ್ರತಿಶತ ಜನರು ವೋಟ್ ಹಾಕಿದ್ದಾರೆ. ಶೇ.42.5 ರಷ್ಟು ಜನರು ಮಾತ್ರ ರಾಜೀನಾಮೆ ಬೇಡವೆಂದಿದ್ದರು.
ಓದ: ಕೊರೊನಾ ಮುನ್ನೆಚ್ಚರಿಕೆ: ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ