ETV Bharat / business

ನಕಲಿ ಟ್ವಿಟರ್​​ ಖಾತೆಗಾಗಿ ಎಲಾನ್​ ಮಸ್ಕ್​- ಪರಾಗ್​ ಅನುರಾಗ್​ ಟ್ವೀಟ್​ ವಾರ್​ - ಎಲಾನ್​ ಮಸ್ಕ್​ ಪರಾಗ್​ ಅನುರಾಗ್​ ಮಧ್ಯೆ ಚರ್ಚೆ

ನಕಲಿ ಟ್ವಿಟರ್​​​ ಖಾತೆಗಳ ಕುರಿತಾಗಿ ಸಿಇಒ ಪರಾಗ್​ ಅನುರಾಗ್​ ಮತ್ತು ಈಚೆಗಷ್ಟೇ ಸಂಸ್ಥೆ ಖರೀದಿ ಮಾಡಿರುವ ಎಲಾನ್​ ಮಸ್ಕ್​ ಮಧ್ಯೆ ಟ್ವೀಟ್​ ವಾರ್​ ನಡೆದಿದೆ.

fake-user-accounts
ನಕಲಿ ಟ್ವಿಟ್ಟರ್​ ಖಾತೆ
author img

By

Published : May 17, 2022, 8:16 PM IST

ವಾಷಿಂಗ್ಟನ್: ನಕಲಿ ಟ್ವಿಟರ್​​​ ಖಾತೆ ಬಳಕೆದಾರರ ಸಂಖ್ಯೆಯ ಬಗ್ಗೆ ಟೆಸ್ಲಾ ಸಿಇಒ, ವಿಶ್ವದ ನಂ.1 ಧನಿಕ ಎಲಾನ್​ ಮಸ್ಕ್ ಮತ್ತು ಟ್ವಿಟ್ಟರ್​ ಸಿಇಒ ಪರಾಗ್​ ಅನುರಾಗ್​ ಮಧ್ಯೆ ಟ್ವೀಟ್​ ವಾರ್​ ನಡೆದಿದೆ. ನಕಲಿ ಖಾತೆಗಳ ಸಂಖ್ಯೆಯನ್ನು ಘೋಷಿಸುವವರೆಗೆ ಟ್ವಿಟರ್​ ಸಂಸ್ಥೆ ಖರೀದಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗುವುದು. ಈ ಬಗ್ಗೆ ಸಂಸ್ಥೆ ನಿಖರ ಮಾಹಿತಿ ನೀಡಬೇಕು ಎಂದು ಎಲಾನ್ ಮಸ್ಕ್​ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಎಲಾನ್​ ಮಸ್ಕ್​ ಹೇಳಿರುವಷ್ಟು ಪ್ರಮಾಣದಲ್ಲಿ ನಕಲಿ ಖಾತೆಗಳು ಇಲ್ಲ ಎಂದು ಪರಾಗ್​ ಅನುರಾಗ್​ ವಾದಿಸಿದ್ದಾರೆ.

ಎಲಾನ್​ ಆಕ್ಷೇಪವೇನು?: ಈಚೆಗಷ್ಟೇ 44 ಶತಕೋಟಿ ಡಾಲರ್​ಗೆ ಟ್ವಿಟರ್​​ ಸಂಸ್ಥೆಯನ್ನು ಖರೀದಿ ಮಾಡಿದ್ದ ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಬಳಕೆಯಾಗುತ್ತಿರುವ ಖಾತೆಗಳಿಗಿಂತ ಶೇ.5 ರಷ್ಟು ನಕಲಿ ಖಾತೆಗಳೇ ಇವೆ ಎಂದು ಅನುಮಾನಿಸಿದ್ದಾರೆ. ಕಾರಣ ಗಣ್ಯ ವ್ಯಕ್ತಿಗಳೇ ಟ್ವಿಟರ್​​​ ಅನ್ನು ಬಹುವಾಗಿ ಉಪಯೋಗಿಸುತ್ತಿಲ್ಲ. ಇನ್ನು ಸಣ್ಣಪುಟ್ಟ ಖಾತೆಗಳು ಎಷ್ಟು ನಕಲಿಯಾಗಿವೆ ಎಂಬುದನ್ನು ಊಹಿಸಿ ಎಂದು ಟ್ವೀಟ್​ ಮೂಲಕವೇ ತಕರಾರು ತೆಗೆದಿದ್ದಾರೆ.

ಅಲ್ಲದೇ ಸಂಸ್ಥೆಯನ್ನು ನಾನು ಖರೀದಿ ಮಾಡಬೇಕಾದರೆ, ನಕಲಿ ಖಾತೆಗಳು ಎಷ್ಟಿವೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು ಎಂದು ಟ್ವಿಟರ್​ ಸಿಇಒ ಪರಾಗ್​ ಅನುರಾಗ್​ರನ್ನು ಟ್ಯಾಗ್​ ಮಾಡಿ ಪ್ರಶ್ನಿಸಿದ್ದರು.

ಅನುರಾಗ್​ ಪ್ರತಿಕ್ರಿಯೆ: ಇದಕ್ಕೆ ಪ್ರತಿಕ್ರಿಯಿಸಿರುವ ಪರಾಗ್​ ಅನುರಾಗ್​, ಟ್ವಿಟರ್​ ಸಂಸ್ಥೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಬಳಕೆದಾರರಿಗಿಂತ ಶೇ.5ರಷ್ಟು ಪ್ರಮಾಣದ ನಕಲಿ ಖಾತೆಗಳು ಇವೆ ಎಂಬುದು ಸಾಬೀತು ಮಾಡಲು ಸಾಧ್ಯವಿಲ್ಲ. ಇಷ್ಟು ಪ್ರಮಾಣದಲ್ಲಿ ಅವು ಇರಲಿಕ್ಕೂ ಇಲ್ಲ ಎಂದಿದ್ದಾರೆ.

ಈ ಸ್ಪಷ್ಟನೆಗೂ ಜಗ್ಗದ ಎಲಾನ್​ ಮಸ್ಕ್​ ನಕಲಿ ಟ್ವಿಟರ್​​​ ಖಾತೆಗಳ ಬಗ್ಗೆ ತನಿಖೆ ನಡೆಸಿ ನಿಖರ ಮಾಹಿತಿ ನೀಡುವವರೆಗೂ ಸಂಸ್ಥೆ ಖರೀದಿ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು ಎಂದು ಟ್ವೀಟ್​ ಮಾಡಿದ್ದಾರೆ.

ಓದಿ: ಮೊದಲ ದಿನದ ವಹಿವಾಟಿನಲ್ಲೇ ₹42 ಸಾವಿರ ಕೋಟಿ ನಷ್ಟ ಅನುಭವಿಸಿದ ಎಲ್​ಐಸಿ ಐಪಿಒ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.