ETV Bharat / business

ಟ್ವಿಟರ್​ ಆಯ್ತು, ಕೋಕಾ ಕೋಲಾ ಕಂಪನಿ ಮೇಲೆ ಎಲಾನ್​ ಮಸ್ಕ್​ ಕಣ್ಣು? - ಟ್ವಿಟರ್​ ಬಳಿಕ ಕೋಕಾ ಕೋಲಾ ಖರೀದಿ ಘೋಷಣೆ

ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಟ್ವಿಟರ್​ ಖರೀದಿ ಮಾಡಿದ ಬಳಿಕ ಕೋಕಾ ಕೋಲಾ ಕಂಪನಿಯನ್ನು ಖರೀದಿ ಮಾಡುವೆ ಎಂದು ಟ್ವೀಟ್​ ಮೂಲಕವೇ ಘೋಷಿಸಿದ್ದಾರೆ.

elon-musk
ಎಲಾನ್​ ಮಸ್ಕ್​
author img

By

Published : Apr 28, 2022, 8:29 PM IST

ವಿಶ್ವದ ನಂ.1 ಧನಿಕ ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್​ ಅನ್ನು ಖರೀದಿಸಿದ ಬಳಿಕ ಕೋಕಾ ಕೋಲಾ ಕಂಪನಿಯನ್ನು ಖರೀದಿ ಮಾಡಲಿದ್ದಾರಾ?. ಹೀಗೊಂದು ಊಹೆಯನ್ನು ಸ್ವತಃ ಎಲಾನ್​ ಮಸ್ಕ್​ ಅವರೇ ತೇಲಿಬಿಟ್ಟಿದ್ದಾರೆ.

ಈ ಬಗ್ಗೆ ಎಲಾನ್​ ಮಸ್ಕ್​ ಮಾಡಿರುವ ಟ್ವೀಟ್​ ಈ ಪ್ರಶ್ನೆಯನ್ನು ಹುಟ್ಟು ಹಾಕಿದೆ. 'ನಾನೀಗ ಕೋಕಾ ಕೋಲಾ ಕಂಪನಿಯನ್ನು ಖರೀದಿ ಮಾಡುವೆ' ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದರ ಬಳಿಕ ಟ್ವಿಟರ್​ ಅನ್ನು ಗರಿಷ್ಠ ಪ್ರಮಾಣದಲ್ಲಿ ಮೋಜು ಮಾಡಲು ಬಳಸುತ್ತೇನೆ ಎಂದು ಹೇಳಿದ್ದಾರೆ.

  • Next I’m buying Coca-Cola to put the cocaine back in

    — Elon Musk (@elonmusk) April 28, 2022 " class="align-text-top noRightClick twitterSection" data=" ">

ಈ ಹಿಂದೆ ಅವರು ಮೆಕ್​ಡೊನಾಲ್ಡ್​ ಕಂಪನಿಯನ್ನು ಖರೀದಿಸಿ, ಅಲ್ಲಿ ಐಸ್​ಕ್ರೀಮ್​ ಯಂತ್ರಗಳನ್ನು ಅಳವಡಿಸುವೆ ಎಂದು ಬರೆದಿದ್ದ ಟ್ವೀಟ್​ಗೆ ಟ್ಯಾಗ್​ ಮಾಡಿ 'ನಾನು ಪವಾಡಗಳನ್ನು ಮಾಡಲು ಸಾಧ್ಯವಿಲ್ಲ' ಎಂದೂ ಟ್ವೀಟ್​ ಮಾಡಿದ್ದಾರೆ. 'ಕೊಕೇನ್ ಅನ್ನು ಮತ್ತೆ ಶುರು ಮಾಡಲು ನಾನು ಕೋಕಾ-ಕೋಲಾವನ್ನು ಖರೀದಿಸುತ್ತಿದ್ದೇನೆ' ಎಂದು ಎಲಾನ್​ ಮಸ್ಕ್​ ಸರಣಿ ಟ್ವೀಟ್ ಮಾಡಿದ್ದಾರೆ.

ಈ ವಾರ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ ಟ್ವಿಟರ್​ ಅನ್ನು 44 ಶತಕೋಟಿ ಡಾಲರ್​ಗೆ ಖರೀದಿ ಮಾಡಿದ ನಂತರ ಇನ್ನೊಂದು ಕಂಪನಿ ಖರೀದಿಗೆ ಕೈ ಹಾಕಲಿದ್ದಾರಾ ಅಥವಾ ತಮಾಷೆ ಮಾಡುತ್ತಿದ್ದಾರೆಯೇ ಎಂಬುದು ಮಸ್ಕ್​ ಅವರೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ: ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿ ಬಾಗಿಲು ಅರ್ಪಿಸಿದ ಭಕ್ತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.