ಮುಂಬೈ(ಮಹಾರಾಷ್ಟ್ರ): ದೇಶಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಲಾಭದಲ್ಲಿ ಅಂತ್ಯಗೊಂಡವು. ಬೆಳಗ್ಗೆ ನಷ್ಟದೊಂದಿಗೆ ಆರಂಭವಾದರೂ.. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸಕಾರಾತ್ಮಕ ಸಂಕೇತಗಳು ನಮ್ಮ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದವು. ವಿಶೇಷವಾಗಿ ಐಟಿ ಮತ್ತು ಮೆಟಲ್ ಷೇರುಗಳಲ್ಲಿ ಖರೀದಿ ಹೆಚ್ಚಾಗಿರುವುದು ಕಂಡುಬಂದಿದೆ. ಎನ್‌ಟಿಪಿಸಿ, ಟೆಕ್ ಮಹೀಂದ್ರಾ, ರಿಲಯನ್ಸ್ ಮತ್ತು ಟಿಸಿಎಸ್‌ನಂತಹ ಷೇರುಗಳು ಸೂಚ್ಯಂಕಗಳನ್ನು ಮುನ್ನಡೆಸಿದವು. ಇದರೊಂದಿಗೆ ನಿಫ್ಟಿ ಮತ್ತೊಮ್ಮೆ 19,750 ಕ್ಕಿಂತ ಮೇಲಕ್ಕೆ ಕೊನೆಗೊಂಡಿತು.
ಬೆಳಗ್ಗೆ ಸೆನ್ಸೆಕ್ಸ್ 66,156 ಅಂಕದೊಂದಿಗೆ ಫ್ಲಾಟ್ ಅನ್ನು ತೆರೆದಿದೆ. ಸ್ವಲ್ಪ ಸಮಯದವರೆಗೆ ಅದು ನಷ್ಟದಲ್ಲಿ ಸಾಗಿತು. ನಂತರ ಲಾಭದತ್ತ ಮುನ್ನಡೆಯಿತು. ಇಂಟ್ರಾಡೇ ಗರಿಷ್ಠ 66,598ಕ್ಕೆ ತಲುಪಿದ ಸೂಚ್ಯಂಕ ಅಂತಿಮವಾಗಿ 367.47 ಅಂಕಗಳ ಏರಿಕೆಯೊಂದಿಗೆ 66,527.67ಕ್ಕೆ ಮುಕ್ತಾಯವಾಯಿತು. ನಿಫ್ಟಿ ಕೂಡ 107.75 ಅಂಕಗಳ ಏರಿಕೆಯೊಂದಿಗೆ 19,753.80ಕ್ಕೆ ಸ್ಥಿರವಾಯಿತು. ಡಾಲರ್ ಎದುರು ರೂಪಾಯಿ ಮೌಲ್ಯ 82.25 ಆಗಿದೆ.
ಸೆನ್ಸೆಕ್ಸ್‌ನಲ್ಲಿ ಎನ್‌ಟಿಪಿಸಿ, ಪವರ್ ಗ್ರಿಡ್ ಕಾರ್ಪೊರೇಷನ್, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ಟಿಸಿಎಸ್ ಷೇರುಗಳು ಲಾಭ ಗಳಿಸಿದವು. ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಅಲ್ಪ ನಷ್ಟಕ್ಕೆ ತುತ್ತಾದವು. ಆಟೋ, ಆಯಿಲ್ ಮತ್ತು ಗ್ಯಾಸ್, ಪವರ್, ಮೆಟಲ್, ಕ್ಯಾಪಿಟಲ್ ಗೂಡ್ಸ್ ಮತ್ತು ಐಟಿ ಷೇರುಗಳು ಉತ್ತಮ ಗಳಿಕೆ ಕಂಡಿವೆ. FMCG ಷೇರುಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿವೆ.
ಅದಾನಿ ಗ್ರೀನ್ ಎನರ್ಜಿ ಲಾಭ ಶೇಕಡ 51 ವೃದ್ಧಿ: ಅದಾನಿ ಗ್ರೂಪ್ನ ಅದಾನಿ ಗ್ರೀನ್ ಎನರ್ಜಿ ಜೂನ್ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಶೇ.51ರಷ್ಟು ನಿವ್ವಳ ಲಾಭ ಗಳಿಸಿ 323 ಕೋಟಿ ರೂ. ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 214 ಕೋಟಿ ನಿವ್ವಳ ಲಾಭ ಗಳಿಸಿತ್ತು. ಒಟ್ಟು ಆದಾಯವೂ ರೂ.1701 ಕೋಟಿಯಿಂದ ರೂ.2,404 ಕೋಟಿಗೆ ಏರಿಕೆಯಾಗಿದೆ ಎಂದು ಕಂಪನಿಯು ತನ್ನ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ. 2030 ರ ವೇಳೆಗೆ ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 45 ಗಿಗಾವ್ಯಾಟ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಓದಿ : Interest Rate: ಆ.8ರಿಂದ ಆರ್ಬಿಐ ಎಂಪಿಸಿ ಸಭೆ; ಬಡ್ಡಿದರ ಯಥಾಸ್ಥಿತಿ ನಿರೀಕ್ಷೆ
ಈ ವಾರ Stock Marketನಲ್ಲಿ ಏರಿಳಿತ ಸಾಧ್ಯತೆ: ಕಳೆದ ವಾರ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಸಾಕಷ್ಟು ಏರಿಳಿತಗಳಾಗಿವೆ. ಈ ವಾರವು ಮಾರುಕಟ್ಟೆಯಲ್ಲಿ ಏರಿಳಿತ ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಹೂಡಿಕೆದಾರರು ಯಾವುದೇ ಬಲವಾದ ಏರಿಕೆ ಕಂಡು ಬಂದರೆ ಲಾಭ ಮಾಡಿಕೊಳ್ಳಿ ಮತ್ತು ಕುಸಿತವಾದರೆ ಖರೀದಿಸಿ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಕ್ಷೇತ್ರವು ಹೂಡಿಕೆದಾರರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಇದೇ ಕಳವಳದ ವಿಷಯವೂ ಆಗಿದೆ. ಇಲ್ಲಿ ಯಾವುದೇ ಷೇರು ಖರೀದಿಸುವ ಮುನ್ನ ಜಾಗರೂಕರಾಗಿರಿ ಮತ್ತು ಬಲವಾದ ಮೂಲಭೂತ ಅಂಶಗಳನ್ನು ಹೊಂದಿದ ಷೇರುಗಳನ್ನೇ ಆಯ್ಕೆ ಮಾಡಿ. ಈ ವಾರ ಎಚ್ಚರಿಕೆಯಿಂದ ಟ್ರೇಡಿಂಗ್ ಮಾಡುವುದು ಸೂಕ್ತವಾಗಿದೆ.