ಹೈದರಾಬಾದ್: ಪನ್ನೀರ್ ಬರ್ಗರ್ ಬದಲು ಚಿಕನ್ ಬರ್ಗರ್ ನೀಡಿದ ಹಿನ್ನೆಲೆ ಗ್ರಾಹಕರಿಗೆ ಪರಿಹಾರ ನೀಡುವಂತೆ ಝೊಮಾಟೊಗೆ ಗ್ರಾಹಕ ಆಯೋಗ-3 ಆದೇಶ ನೀಡಿದೆ. ಗ್ರಾಹಕರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕಾರಣ ಆನ್ಲೈನ್ ಫುಡ್ ಡೆಲಿವರಿ ಪಾರ್ಟನರ್ ಝೊಮ್ಯಾಟೊಗೆ 5 ಸಾವಿರ ಪರಿಹಾರ, ಪ್ರಕರಣದ ವೆಚ್ಚ 1000 ಹಾಗೂ 202.50 ರೂ ಸೇರಿದಂತೆ ಒಟ್ಟು 6200.50 ರೂಪಾಯಿ ಮರುಪಾವತಿಸುವಂತೆ ಸೂಚಿಸಿದೆ.
ಅಂಬರ್ಪೇಟ್ನ ದೀಪಕ್ ಕುಮಾರ್ ಸಂಗ್ವಾನ್ ಝೊಮ್ಯಾಟೊ ಮೂಲಕ ಕೊತ್ತಪೇಟ್ನ ಕಾರ್ನರ್ ಬೇಕರ್ಸ್ನಿಂದ ಪನ್ನೀರ್ ಬರ್ಗರ್ ಮತ್ತು ಕೋಕ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಇದರ ಡೆಲಿವರಿ ಬಾಯ್ ಚಿಕನ್ ಬರ್ಗರ್ ನೀಡಿದ್ದಾರೆ. ಈ ವಿಷಯವನ್ನು ಕಂಪನಿಗೆ ತಿಳಿಸಿದಾಗ 500 ರೂ. ಪಾವತಿಸುವಂತೆ ತಿಳಿಸಿದೆ. ಆದರೆ, ಸಂಸ್ಥೆ ಎಡವಟ್ಟಿನಿಂದ ಆಕ್ರೋಶಕ್ಕೆ ಒಳಗಾದ ಅವರು ಗ್ರಾಹಕರ ಆಯೋಗದ ಮೊರೆ ಹೋಗಿದ್ದಾರೆ. ಗ್ರಾಹಕರ ಆಯೋಗ ಗ್ರಾಹಕರ ಪರವಾಗಿ ಆದೇಶ ನೀಡಿದೆ.
ಎಸ್ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಇನ್ಶೂರೆನ್ಸ್ ಕ್ಲೈಮ್ ನೀಡದ ವಿರುದ್ಧ ಹೈದರಾಬಾದ್ ಗ್ರಾಹಕ ಆಯೋಗ-3 ಆಕ್ಷೇಪ ವ್ಯಕ್ತಪಡಿಸಿದೆ. ವಿಮೆದಾರರಾದ ತಮ್ಮ ಗಂಡನ ಆನಾರೋಗ್ಯದ ವೆಳೆ ವಿಮೆ ಹಣ ನೀಡದ ಹಿನ್ನೆಲೆ ರಾಜೇಂದ್ರನಗರ್ನ ಶಿಲ್ಪ ಬನ್ಸಲ್ ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಈ ಹಿನ್ನೆಲೆ 45 ದಿನಗಳೊಳಗೆ 54 ಲಕ್ಷ ಹಣವನ್ನು 9ರಷ್ಟು ಬಡ್ಡಿ ಸಮೇತ ನೀಡುವಂತೆ ಆಯೋಗ ಆದೇಶಿಸಿದೆ. ಇದರ ಜೊತೆಗೆ 20 ಸಾವಿರ ಪ್ರಕರಣ ವೆಚ್ಚವನ್ನು ಭರಿಸುವಂತೆ ಕೂಡ ತಿಳಿಸಲಾಗಿದೆ.
ಐಟಿ ಸೇವೆಯಲ್ಲಿ ದೋಷಪೂರಿತವಾದ ಹಿನ್ನೆಲೆ 3ಡೈಮನ್ಷನ್ ಐಟಿ ಸರ್ವೀಸ್ಗೆ 2,07,00 ಹೆಚ್ಚು ಹಣವನ್ನು 12ರಷ್ಟು ಬಡ್ಡಿ ಹಣದೊಂದಿಗೆ ಆರ್ವಿ ಆಸೋಸಿಯೇಟ್ ಅರ್ಕಿಟೆಕ್ಟ್ಸ್ಗೆ ನೀಡುವಂತೆ ಸೂಚಿಸಲಾಗಿತ್ತು.
ಕೊತ್ತಪೇಟ್ ಬ್ರಾಡ್ವೇ ದಿ ಬ್ರೂವರಿ ರೆಸ್ಟೋರೆಂಟ್ ನಿಯಮ ಉಲ್ಲಂಘಿಸಿ 10ರಷ್ಟು ಸೇವಾ ಶುಲ್ಕವನ್ನು ವಿಧಿಸಿದ ಹಿನ್ನೆಲೆ 10 ಸಾವಿರ ಪರಿಹಾರದ ಜೊತೆ ಪ್ರಕರಣದ ವೆಚ್ಚ 5000 ಹಾಗೂ 521 ರೂ.ವನ್ನು ಮರುಪಾವತಿಸುವಂತೆ ಆಯೋಗ ಸೂಚಿಸಿದೆ.
ಇದನ್ನೂ ಓದಿ: ಪಾನಮತ್ತ ಕಾನ್ಸ್ಟೇಬಲ್ ಕಾರು ಬೈಕ್ಗೆ ಡಿಕ್ಕಿ: ಸ್ಥಳದಲ್ಲೇ ಝೊಮಾಟೊ ಡೆಲಿವರಿ ಬಾಯ್ ಸಾವು!