ETV Bharat / business

ಎಫ್​ಡಿ ನಿಯಮದಲ್ಲಿ ಬದಲಾವಣೆ: ಆರ್​ಬಿಐ ಹೊಸ ಅಧಿಸೂಚನೆಯಲ್ಲೇನಿದೆ? - ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡಿಪಾಸಿಟ್​​ಗಳ

ಬ್ಯಾಂಕ್ ನಿಶ್ಚಿತ ಠೇವಣಿಯ ವಿಷಯದಲ್ಲಿ ಆರ್​ಬಿಐ ಹೊಸ ಬದಲಾವಣೆ ಮಾಡಿದೆ.

Change in FD rule Whats in the RBIs new notification

author img

By ETV Bharat Karnataka Team

Published : Oct 27, 2023, 4:44 PM IST

ಬೆಂಗಳೂರು: ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡಿಪಾಸಿಟ್​​ಗಳ ವಿಷಯದಲ್ಲಿ ಆರ್​ಬಿಐ ನಿಯಮಗಳನ್ನು ಪರಿಷ್ಕರಣೆ ಮಾಡಿದ್ದು, ಗುರುವಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಅವಧಿಪೂರ್ವ ಹಿಂಪಡೆಯಬಹುದಾದ ಎಫ್​ಡಿಗಳ ಮಿತಿಯನ್ನು ಈಗಿರುವ 15 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ. ಅಂದರೆ ಗ್ರಾಹಕರು ಇನ್ನು ಮುಂದೆ ತಮ್ಮ 1 ಕೋಟಿ ರೂಪಾಯಿವರೆಗಿನ ಎಫ್​ಡಿಗಳನ್ನು ಅವಧಿಪೂರ್ವ ಹಿಂಪಡೆಯಬಹುದಾಗಿದೆ.

ಬ್ಯಾಂಕ್​ ಅಥವಾ ಹಣಕಾಸು ಸಂಸ್ಥೆಗಳು ಎರಡು ರೀತಿಯ ಎಫ್​ಡಿಗಳನ್ನು ತೆಗೆದುಕೊಳ್ಳುತ್ತವೆ. ಅವಧಿಪೂರ್ವ ಹಿಂಪಡೆಯಬಹುದಾದ (callable FDs) ಮತ್ತು ಅವಧಿಪೂರ್ವ ಹಿಂಪಡೆಯಲಾಗದ (non-callable FDs) ಹೀಗೆ ಎರಡು ರೀತಿಯ ಎಫ್​ಡಿಗಳಿವೆ. ಅವಧಿಪೂರ್ವ ಹಿಂಪಡೆಯಬಹುದಾದ ಎಫ್​ಡಿಗಳ ವಿಚಾರದಲ್ಲಿ ಎಫ್​ಡಿಯ ಮೆಚ್ಯೂರಿಟಿ ಆಗುವ ಮುನ್ನವೇ ಅದನ್ನು ಹಿಂಪಡೆಯಬಹುದು. ಹಾಗೆಯೇ ಅವಧಿಪೂರ್ವ ಹಿಂಪಡೆಯಲಾಗದ ಎಫ್​ಡಿಗಳಲ್ಲಿ ಮೆಚ್ಯೂರಿಟಿ ಆಗುವ ಮುನ್ನ ಎಫ್​ಡಿ ಹಿಂಪಡೆಯಲು ಸಾಧ್ಯವಿಲ್ಲ. ನೀವು ಆರಂಭದಲ್ಲಿ ಎಷ್ಟು ಅವಧಿಗೆ ಎಫ್​ಡಿ ಮಾಡಿಸಿರುತ್ತೀರೋ ಆ ಅವಧಿ ಮುಗಿದ ಮೇಲೆಯೇ ಅದರಲ್ಲಿನ ದುಡ್ಡು ಹಿಂಪಡೆಯಬಹುದು.

ಈ ಎರಡು ಬಗೆಯ ಎಫ್​ಡಿಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 26ರ ಆರ್​ಬಿಐ ನ ಹೊಸ ಅಧಿಸೂಚನೆಯನ್ನು ನೋಡುವುದಾದರೆ- 1. ಅವಧಿಪೂರ್ವ ಹಿಂಪಡೆಯಲಾಗದ ಎಫ್​​ಡಿ ನೀಡುವ ಕನಿಷ್ಠ ಮೊತ್ತವನ್ನು ಹದಿನೈದು ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ಗೆ ಹೆಚ್ಚಿಸಬಹುದು. ಅಂದರೆ ಒಂದು ಕೋಟಿ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೊತ್ತಕ್ಕೆ ವ್ಯಕ್ತಿಗಳಿಂದ ಸ್ವೀಕರಿಸಲಾದ ಎಲ್ಲಾ ದೇಶೀಯ ನಿಶ್ಚಿತ ಠೇವಣಿಗಳು ಅವಧಿಪೂರ್ವ ಹಿಂಪಡೆಯುವಿಕೆ ಸೌಲಭ್ಯವನ್ನು ಹೊಂದಿರುತ್ತವೆ. 2. ಈ ಸೂಚನೆಗಳು ಅನಿವಾಸಿ (ಬಾಹ್ಯ) ರೂಪಾಯಿ (ಎನ್ಆರ್​ಇ) ಠೇವಣಿ / ಸಾಮಾನ್ಯ ಅನಿವಾಸಿ (ಎನ್ಆರ್​ಓ) ಠೇವಣಿಗಳಿಗೂ ಅನ್ವಯಿಸುತ್ತವೆ.

ಈ ಬದಲಾವಣೆಗಳು ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುತ್ತವೆ ಮತ್ತು ತಕ್ಷಣದಿಂದ ಜಾರಿಗೆ ಬರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರರ್ಥ ಈ ಹಿಂದೆ ನೀವು 15 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಎಫ್​ಡಿ ಮಾಡಿದ್ದರೆ ಠೇವಣಿ ಪಕ್ವಗೊಳ್ಳುವ ಮೊದಲೇ ನೀವು ಬಯಸಿದರೆ, ನಿಮ್ಮ ಹಣವನ್ನು ಠೇವಣಿಯಿಂದ ಹಿಂಪಡೆಯಬಹುದಾಗಿತ್ತು. ಈಗ, ಈ ಮಿತಿಯನ್ನು 1 ಕೋಟಿ ರೂ.ಗೆ ವಿಸ್ತರಿಸಲಾಗಿದೆ. ಅಂದರೆ ಗ್ರಾಹಕರು ಈಗ 1 ಕೋಟಿ ರೂ.ವರೆಗಿನ ಯಾವುದೇ ಎಫ್​ಡಿಯಿಂದ ತಮ್ಮ ಹಣವನ್ನು ಅಕಾಲಿಕವಾಗಿ ಹಿಂಪಡೆಯಲು ಅನುಮತಿಸಲಾಗುವುದು. ಸಾಮಾನ್ಯವಾಗಿ, ಬ್ಯಾಂಕುಗಳು ಸಾಮಾನ್ಯ ಠೇವಣಿಗಳಿಗಿಂತ ಅವಧಿಪೂರ್ವ ಹಿಂಪಡೆಯಲಾಗದ ಎಫ್​ಡಿಗಳಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ.

ಇದನ್ನೂ ಓದಿ: ಬಿಟ್​ ಕಾಯಿನ್ ಮೌಲ್ಯ ಒಂದೇ ದಿನದಲ್ಲಿ 61 ಸಾವಿರ ರೂಪಾಯಿ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.