ETV Bharat / business

ಚಂದ್ರಯಾನ -3 ಯಶಸ್ವಿ; ವಿಮಾನ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದ ಷೇರುಗಳ ಮೌಲ್ಯದಲ್ಲಿ ಗಮನಾರ್ಹ ಹೆಚ್ಚಳ - ಚಂದ್ರಯಾನದ ಲ್ಯಾಂಡರ್ ಅನ್ನು ಅಭಿವೃದ್ಧಿಪಡಿಸುವ

ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಬಾಹ್ಯಾಕಾಶ ಮತ್ತು ವಿಮಾನ ತಂತ್ರಜ್ಞಾನ ಕಂಪನಿಗಳ ಷೇರು ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.

Defense Aeronautical Sector stocks
Defense Aeronautical Sector stocks
author img

By ETV Bharat Karnataka Team

Published : Aug 24, 2023, 12:42 PM IST

ನವದೆಹಲಿ: ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಹಿನ್ನೆಲೆಯಲ್ಲಿ ಬುಧವಾರ ಹೂಡಿಕೆದಾರರು ವಿಮಾನ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳ ಖರೀದಿಗೆ ಆಸಕ್ತಿ ತೋರಿಸಿದ್ದು ಕಂಡು ಬಂದಿತು.

ಚಂದ್ರಯಾನ -3 ರ ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಹೊಂದಿರುವ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದಲ್ಲಿ 'ಸಾಫ್ಟ್ ಲ್ಯಾಂಡಿಂಗ್' ಮಾಡುವಲ್ಲಿ ಯಶಸ್ವಿಯಾಗಿದೆ. ಇಂಥ ಸಾಧನೆ ಮಾಡಿದ ಮೊದಲ ದೇಶ ಭಾರತವಾಗಿದೆ. ಹೀಗಾಗಿ ಬುಧವಾರ ಚಂದ್ರಯಾನ ಮಿಷನ್ ಬಗ್ಗೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು, ವಿಮಾನ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಬಗ್ಗೆ ಹೂಡಿಕೆದಾರರು ಒಲವು ಹೊಂದಿರುವುದು ಕಂಡು ಬಂದಿತು. ಚಂದ್ರಯಾನ -3 ಅಭಿಯಾನಕ್ಕೆ 200 ಕ್ಕೂ ಹೆಚ್ಚು ಬಿಡಿ ಭಾಗಗಳನ್ನು ಪೂರೈಸಿದ ಸೆಂಟಮ್ ಎಲೆಕ್ಟ್ರಾನಿಕ್ಸ್ ಕಂಪನಿಯೂ ಇದರಲ್ಲಿ ಸೇರಿದೆ.

ಬಿಎಸ್ಇಯಲ್ಲಿ ಸೆಂಟಮ್ ಎಲೆಕ್ಟ್ರಾನಿಕ್ಸ್ ಶೇಕಡಾ 14.91 ರಷ್ಟು ಏರಿಕೆ ಕಂಡರೆ, ಪಾರಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್ ಶೇಕಡಾ 5.47 ರಷ್ಟು ಏರಿಕೆಯಾಗಿವೆ. ಹಾಗೆಯೇ ಎಂಟಿಎಆರ್ ಟೆಕ್ನಾಲಜೀಸ್ ಷೇರುಗಳು ಶೇಕಡಾ 4.84 ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಶೇಕಡಾ 3.57 ರಷ್ಟು ಏರಿಕೆಯಾಗಿದೆ. ರಕ್ಷಣಾ ಸಂಸ್ಥೆ ಭಾರತ್ ಫೋರ್ಜ್ ಶೇ 2.82, ಅಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್ ಶೇ 1.72 ಮತ್ತು ಲಾರ್ಸನ್ ಆಂಡ್ ಟೂಬ್ರೊ ಶೇ 1.42ರಷ್ಟು ಏರಿಕೆ ಕಂಡಿವೆ. ವಿಶೇಷವೆಂದರೆ ಈ ಬಹುತೇಕ ಕಂಪನಿಗಳ ಷೇರುಗಳು ವಹಿವಾಟಿನ ಸಮಯದಲ್ಲಿ ಕಳೆದ ಒಂದು ವರ್ಷದ ಗರಿಷ್ಠ ಮಟ್ಟವನ್ನು ತಲುಪಿವೆ.

ಇಂದು ಅಂದರೆ ಗುರುವಾರದ ವಹಿವಾಟಿನಲ್ಲಿಯೂ ವಿಮಾನ ಮತ್ತು ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಷೇರುಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ಗುರುವಾರ, ಲಾರ್ಸೆನ್ & ಟೂಬ್ರೊ (ಎಲ್ & ಟಿ) ಶೇಕಡಾ 1 ರಷ್ಟು ಏರಿಕೆಯಾಗಿ 2,750 ರೂ.ಗೆ ತಲುಪಿದೆ. ಲಾರ್ಸೆನ್ & ಟೂಬ್ರೊ ಉಡಾವಣಾ ವಾಹನಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಟ್ರ್ಯಾಕಿಂಗ್ ರಾಡಾರ್ ಸೇರಿದಂತೆ ಭಾರತದ ಚಂದ್ರಯಾನಕ್ಕೆ ಕಂಪನಿಯು ಉಪಕರಣಗಳನ್ನು ಪೂರೈಸಿದೆ.

ಸೆಂಟಮ್ ಎಲೆಕ್ಟ್ರಾನಿಕ್ಸ್, ಚಂದ್ರಯಾನ -3 ಮಿಷನ್​​ಗಾಗಿ ಮಾಡ್ಯೂಲ್​ಗಳನ್ನು ಪೂರೈಸಿದೆ ಎಂದು ವರದಿಯಾಗಿದೆ. ಸೆಂಟಮ್ ಷೇರು ಇಂದು ಸುಮಾರು 20 ಪ್ರತಿಶತದಷ್ಟು ಏರಿಕೆಯಾಗಿ 1,970 ರೂ.ಗೆ ತಲುಪಿದೆ ಮತ್ತು ಬೆಳಗ್ಗೆ 09:20 ಕ್ಕೆ ಶೇಕಡಾ 11 ರಷ್ಟು ಏರಿಕೆಯಾಗಿ 1,830 ರೂ.ಗಳಲ್ಲಿ ವಹಿವಾಟು ನಡೆಸಿತು.

ಎಂಟಿಎಆರ್ ಟೆಕ್ನಾಲಜೀಸ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಾಗಿ ರಾಕೆಟ್ ಎಂಜಿನ್ ಗಳು ಮತ್ತು ಕೋರ್ ಪಂಪ್ ಗಳನ್ನು ತಯಾರಿಸುತ್ತದೆ. ಇದರ ಷೇರು ಶೇಕಡಾ 10 ಕ್ಕಿಂತ ಹೆಚ್ಚು ಏರಿಕೆಯಾಗಿ 2,450 ರೂ.ಗೆ ತಲುಪಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಶೇ 2.5ರಷ್ಟು ಏರಿಕೆ ಕಂಡು 4,135 ರೂ.ಗೆ ತಲುಪಿದೆ. ಇದು ಚಂದ್ರಯಾನದ ಲ್ಯಾಂಡರ್ ಅನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿತ್ತು.

ಭಾರತ್ ಎಲೆಕ್ಟ್ರಾನಿಕ್ಸ್ ಷೇರು ಶೇಕಡಾ 1 ರಷ್ಟು ಏರಿಕೆಯಾಗಿ 135.25 ರೂ.ಗೆ ತಲುಪಿದೆ. ಕಂಪನಿಯು ಚಂದ್ರಯಾನ -3 ಗಾಗಿ ಪೇಲೋಡ್​ಗಳನ್ನು ಜೋಡಿಸಿತ್ತು. ಉಡಾವಣಾ ವಾಹನಕ್ಕೆ ಕೋಬಾಲ್ಟ್ ಮತ್ತು ನಿಕ್ಕಲ್ ಬೇಸ್ ಮಿಶ್ರಲೋಹಗಳನ್ನು ಪೂರೈಸಿದ ಮಿಶ್ರಲೋಹ ತಯಾರಕ ಮಿಶ್ರಾ ಧಾತು ನಿಗಮ್ (ಮಿಧಾನಿ) ಶೇಕಡಾ 4.5 ರಷ್ಟು ಏರಿಕೆಯಾಗಿ 426 ರೂ.ಗೆ ತಲುಪಿದೆ.

ಹಾಗೆಯೇ ಉಡಾವಣಾ ವಾಹನಕ್ಕಾಗಿ ನಾಲ್ಕು ಎಲೆಕ್ಟ್ರಾನಿಕ್ಸ್ ಘಟಕಗಳನ್ನು ಪೂರೈಸಿದ ಇಂಡೋ ನ್ಯಾಷನಲ್ ಷೇರು 459 ರೂ.ಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ ಮತ್ತು ಶೇಕಡಾ 3 ರಷ್ಟು ಲಾಭದೊಂದಿಗೆ 450 ರೂ.ನಲ್ಲಿ ವಹಿವಾಟು ನಡೆಸಿತು. ಏರೋಸ್ಪೇಸ್​​ಗೆ ಸಂಬಂಧಿಸಿದ ಇತರ ಕಂಪನಿಗಳನ್ನು ನೋಡುವುದಾದರೆ, ಪಾರಸ್ ಡಿಫೆನ್ಸ್ ಅಂಡ್​ ಸ್ಪೇಸ್ ಟೆಕ್ನಾಲಜೀಸ್ ಶೇಕಡಾ 17 ಕ್ಕಿಂತ ಹೆಚ್ಚು ಏರಿಕೆಯಾಗಿ 842 ರೂ.ಗೆ ತಲುಪಿದೆ. ಟಾಟಾ ಎಲೆಕ್ಸಿ ಶೇಕಡಾ 2 ರಷ್ಟು ಏರಿಕೆಯಾಗಿ 7,270 ರೂ.ಗೆ ತಲುಪಿದೆ.

ಇದನ್ನೂ ಓದಿ : ಹಾಡು ಗುನುಗುನಿಸಿ, ನಿಮಗಾಗಿ ಆ ಹಾಡು ಪ್ಲೇ ಮಾಡುತ್ತೆ ಯೂಟ್ಯೂಬ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.